ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಆನಂದಪುರ
ಭಾರತದ ಗೆಲುವಿಗೆ ಬಿಜೆಪಿ ಗೆಲ್ಲಬೇಕು ಎಂದು ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.ಅವರು ಆನಂದಪುರ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗ್ರಾಮೀಣ ಜನರ ಅಧಿಕ ಸ್ವಾವಲಂಬನೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕೇಂದ್ರ ಸರ್ಕಾರ ನೀಡಿದೆ. ಲಕ್ ಪತಿ ದೀದಿ ಯೋಜನೆ ಗಳ ಮೂಲಕ, ಶ್ರೀ ಶಕ್ತಿ, ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಮೂರು ಕೋಟಿ ರು. ಹಣವನ್ನು ಬಡ್ಡಿ ರಹಿತ ಸಾಲ ನೀಡಿದೆ. ಇದರ ಮೂಲಕ ಮಹಿಳೆ ಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗುತ್ತದೆ. ಕಾಂಗ್ರೆಸ್ ಸರ್ಕಾರ ದೇಶದ ಬಡತನವನ್ನು ಮಾತ್ರ ಪ್ರೀತಿ ಮಾಡಿದರೆ ಮರೆತು. ಬಡವರನ್ನು ಯಾವಾ ಗಲೂ ಪ್ರೀತಿ ಮಾಡಲೇ ಇಲ್ಲ. ಬದಲಾಗಿ ಚುನಾವಣಾ ಅಂತಹ ಸಮಯಗಳಲ್ಲಿ ಮತ ಹಾಕಲು ಮಾತ್ರ ಸೀಮಿತವಾಗಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಈಗಾಗಲೇ ಶಿವಮೊಗ್ಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ತಾಳಗುಪ್ಪದಿಂದ ಹುಬ್ಬಳ್ಳಿಗೆ ನೇರ ರೈಲು ಸಂಚಾರ ಮಾಡುವುದರ ಮೂಲಕ, ಕಡಿಮೆ ಹಣದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಪ್ರಯಾಣಿಸುವಂತೆ ಅಭಿವೃದ್ಧಿಯ ಕಡೆ ಚಿಂತಿಸಿದ್ದೇವೆ. ಅಲ್ಲದೆ ತಾಳಗುಪ್ಪ-ಬೆಂಗಳೂರು ನಡುವೆ ಹೆಚ್ಚಿನ ರೈಲು ಸಂಚಾರಕ್ಕೆ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಮೇ 7 ರಂದು ನಡೆಯುವ ಚುನಾವಣೆಗೆ ತಾಯಂದಿರು, ಪುರುಷರು, ಯುವಕ, ಯುವತಿಯರು ಮತಗಟ್ಟೆಗೆ ತೆರಳಿ ಕ್ರಮ ಸಂಖ್ಯೆ 2ರ ಬಿಜೆಪಿ ಪಕ್ಷದ ಕಮಲದ ಹೂವಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರೂ ಮತದಾನ ಮಾಡಿ ಎಂದರು.ಚಿತ್ರನಟಿ ತಾರಾ ಮಾತನಾಡಿ, ರಾಜಕೀಯ ರಂಗದಲ್ಲಿ ನಾಯಕನಿಗಿಂತ ಜನಸೇವಕನಾಗಿರಬೇಕು. ಬಡವರ ಕಷ್ಟವನ್ನು ಆಲಿಸುವ, ರಕ್ಷಣೆ ನೀಡುವಂತಹ ರಾಘಣ್ಣ ಮತ್ತೆ ಆಯ್ಕೆಯಾಗಬೇಕು ಎಂದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಇವರಿಗೆ ಈ ಬಾರಿಯ ಬೆಂಬಲಿಸಿ. ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಾದರೆ ಮತ್ತೊಮ್ಮೆ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಬೇಕು ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ಡಾ.ರಾಜನಂದಿನಿ ಕಾಗೋಡು, ಭರ್ಮಪ್ಪ, ರೇವಪ್ಪ, ಮೋಹನ್ ಕುಮಾರ್, ದೇವೇಂದ್ರಪ್ಪ, ಕೈಕೆರೆ ಪ್ರಸನ್ನ, ಹಕ್ರೆ ಮಲ್ಲಿಕಾರ್ಜುನ್, ಶಾಂತಕುಮಾರ್, ವೀರೇಶ್ ಆಲವಳ್ಳಿ, ಇದ್ದರು.ಭಾರತವನ್ನು ಬಲಿಷ್ಠ ರಾಷ್ಟ್ರವಾಗಿಸಲು ಬಿಜೆಪಿಗೆ ಮತನೀಡಿ: ಬಿ.ವೈ.ರಾಘವೇಂದ್ರ ಮನವಿಶಿವಮೊಗ್ಗ: ದೇಶದ ಹಿತ ದೃಷ್ಟಿಯಿಂದ ಮತ್ತು ವಿಶ್ವದಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಉದ್ದೇಶದಿಂದ ಬಿಜೆಪಿಗೆ ಮತ ನಿಡಬೇಕೆಂದು ಬಿಜಿಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
ಶಿವಮೊಗ್ಗ ನಗರದ ಬಾಪೂಜಿನಗರ, ಹೊಸಮನೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಬಳಿಕ ಮಾತನಾಡಿದ ಅವರು, ಇದು ಕೇವಲ ವ್ಯಕ್ತಿಗತ ಚುನಾವಣೆ ಅಲ್ಲ, ರಾಷ್ಟ್ರವನ್ನು ಉದ್ದೇಶಿಸಿ ನಡೆಯುತ್ತಿರುವ ಚುನಾವಣೆಯಾಗಿದೆ. ಇದರಲ್ಲಿ ದೇಶದ ಭವಿಷ್ಯ ಅಡಗಿದೆ. ವಿಶ್ವದಲ್ಲಿಯೇ ಭಾರತ ಎತ್ತರದ ಸ್ಥಾನಕ್ಕೆ ಹೋಗಲಿದೆ. ಈ ಹಿನ್ನೆಲೆಯಲ್ಲಿ ಮೋದಿ ನಾಯಕತ್ವ ಅಗತ್ಯವಾಗಿದೆ. ಆದ್ದರಿಂದ ಮೇ 7 ರಂದು ಪ್ರತಿಯೊಬ್ಬರೂ ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ನನ್ನನ್ನು ಬಾರಿ ಮತದ ಅಂತರದಿಂದ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ಮೂರು ಬಾರಿ ಲೋಕಸಭೆಯ ಸದಸ್ಯನನ್ನಾಗಿ ನನ್ನನ್ನು ಆಯ್ಕೆಮಾಡಿ ಲೋಕಸಭೆಗೆ ಕಳುಹಿಸಿದ್ದೀರಿ. ಈ ಅವಧಿಯಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡಿದ್ದೀರಿ, ಇನ್ನೂ ಸಾಕಷ್ಟು ಯೋಜನೆಗಳು ನನ್ನ ಮನಸ್ಸಿನಲ್ಲಿ ಇವೆ. ಅದನ್ನು ಮಾಡುವ ಇಚ್ಚೆ ಹೊಂದಿದ್ದೇವೆ. ನಾನು ಯಾವುದೇ ಅಭಿವೃದ್ಧಿ ಕೆಲಸವನ್ನು ಹೇಳಿ ಮಾಡುವುದಿಲ್ಲ. ಮಾಡಿ ತೋರಿಸು ತ್ತೇನೆ ಎಂದು ಹೇಳಿದರು.ಕೇವಲ ಬೆರಳೆಣಿಕೆಯಷ್ಟಿದ್ದ ರೈಲು ಸಂಚಾರವನ್ನು ಇಂದು ಸಾಕಷ್ಟು ಸಂಖ್ಯೆಯಲ್ಲಿ ವಿಸ್ತರಿಸಿದ್ದೇನೆ. ವಿಮಾನ ನಿಲ್ದಾಣವನ್ನು ನಿರ್ಮಿಸಿ ವಿಮಾನಯಾನವನ್ನು ಆರಂಭಿಸಿದ್ದೇನೆ. ಗೋವಾ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಮಹಾನಗರಗಳಿಗೆ ವಿಮಾನ ಸಂಚಾರ ನಡೆಯುತ್ತಿದೆ. ಸಿಗಂಧೂರಿನಲ್ಲಿ ಅತ್ಯಂತ ಉದ್ದವಾದ ಸೇತುವೆಯನ್ನು ನಿರ್ಮಿಸ ಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ, ಜೋಗ್ ಫಾಲ್ಸ್ ಮತ್ತು ಕೊಡಚಾದ್ರಿಯಲ್ಲಿ ಕೇಬಲ್ ಕಾರುಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ರೋಡ್ ಶೋನಲ್ಲಿ ಶಿವಮೊಗ್ಗ ನಗರ ಚುನಾವಣಾ ಪ್ರಭಾರಿ ಜ್ಞಾನೇಶ್ವರ, ಎಂ.ಜೆ.ನಾಗರಾಜ್ ಪ್ರಮುಖರಾದ ಭವಾನಿ, ಜೆಡಿಎಸ್ ನರಸಿಂಹ ಗಂಧದಮನೆ , ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು