ಮೋದಿ ಕೈ ಬಲಪಡಿಸಲು ಜಿಗಜಿಣಗಿಗೆ ಮತ ನೀಡಿ

| Published : Apr 24 2024, 02:21 AM IST

ಸಾರಾಂಶ

ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕೈಬಲಪಡಿಸಲು ಬಂಜಾರ ಸಮುದಾಯ ಸಿದ್ಧವಾಗಿದೆ. ಆದ್ದರಿಂದ ನಮ್ಮೆಲ್ಲ ಬಾಂಧವರು ರಮೇಶ ಜಿಗಜಿಣಗಿಗೆ ಮತ ನೀಡುವುದರ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದು ಬಿಜೆಪಿ ಜಿಲ್ಲಾ ಪ್ರಕೋಷ್ಠಕಗಳ ಸಹ ಸಂಯೋಜಕ ಭೀಮಸಿಂಗ್ ರಾಠೋಡ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ಮೋದಿ ಅವರ ಕೈಬಲಪಡಿಸಲು ಬಂಜಾರ ಸಮುದಾಯ ಸಿದ್ಧವಾಗಿದೆ. ಆದ್ದರಿಂದ ನಮ್ಮೆಲ್ಲ ಬಾಂಧವರು ರಮೇಶ ಜಿಗಜಿಣಗಿಗೆ ಮತ ನೀಡುವುದರ ಮೂಲಕ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದು ಬಿಜೆಪಿ ಜಿಲ್ಲಾ ಪ್ರಕೋಷ್ಠಕಗಳ ಸಹ ಸಂಯೋಜಕ ಭೀಮಸಿಂಗ್ ರಾಠೋಡ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ, ಸೇವಾಲಾಲರ ಜನ್ಮಸ್ಥಳ ಸೋರೆಗೊಂಡನಕೊಪ್ಪ ಅಭಿವೃದ್ಧಿಗೆ ₹5 ಕೋಟಿ, ಮಹಾರಾಷ್ಟ್ರದ ಸೇವಾಲಾಲರ ಐಕ್ಯಸ್ಥಳ ಶ್ರೀ ಪೌರಾಗಢ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಸಮುದಾಯ ಅಭಿವೃದ್ಧಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಗಮನಾರ್ಹ ಕೊಡುಗೆ ನೀಡಿದೆ. ಆದರೆ ಕಾಂಗ್ರೆಸ್ ನಾಯಕರು ಬಂಜಾರ ಸಮುದಾಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಸಮುದಾಯದ ಮುಖಂಡ ಬಾಳು ರಾಠೋಡ ಮಾತನಾಡಿ, ನಮ್ಮ ಸಮುದಾಯ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಗೆಲುವಿಗೆ ಶ್ರಮಿಸಲಿದೆ ಎಂದು ಅಭಯ ನೀಡಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ವಿನೋದ ಚವ್ಹಾಣ, ಭೀಮಸಿಂಗ್ ಪವಾರ, ಧರ್ಮಸಿಂಗ್ ರಾಠೋಡ, ರಾಜಕುಮಾರ ರಾಠೋಡ, ತಾರಾಸಿಂಗ್ ರಾಠೋಡ, ಧರ್ಮು ರಾಠೋಡ, ದೀಪಲು ಜಾಧವ, ಮನೋಹರ ಚವ್ಹಾಣ, ಭೀಮು ಚವ್ಹಾಣ, ಸಾಗರ ಚವ್ಹಾಣ, ಕಿರಣ ರಾಠೋಡ, ಪ್ರಮೋದ ರಾಠೋಡ, ಲಾಲ್‌ಬಹಾದ್ದೂರ ರಾಠೋಡ, ಹೇಮಂತ ರಾಠೋಡ, ಅಶೋಕ ಚವ್ಹಾಣ, ಶ್ರೀನಾಥ ರಾಠೋಡ, ಪ್ರೇಮಸಿಂಗ್ ರಾಠೋಡ ಇದ್ದರು.