ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜಿಪಂ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.ಚಿಕ್ಕೋಡಿ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಬುಧವಾರ ಪ್ರಚಾರಾರ್ಥ ಚಿಕ್ಕೋಡಿ ತಾಲೂಕಿನ ನೇಜ್ ಗ್ರಾಮದಲ್ಲಿ ಹಿರೆಕೋಡಿ ಜಿಪಂ ಚುನಾವಣೆ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೇಜ್ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ಕಾರ್ಯಕರ್ತರೇ ನನ್ನ ಗುರು. ಎಲ್ಲಿಯವರೆಗೆ ರಾಜಕೀಯದಲ್ಲಿ ಇರುತ್ತೇನೆ ಅಲ್ಲಿಯವರೆಗೆ ಜನರ ಸೇವೆ ಮಾಡುತ್ತೇನೆ. ಯಡೂರ ಕಲ್ಲೋಳ ಸೇತುವೆ ಮುಗಿದ ಬಳಿಕ ನೇಜ್ ಕೆರೆಗೆ 12 ತಿಂಗಳ ಕಾಲ ನೀರು ಹರಿಸುತ್ತೇವೆ. ಶಾಸಕ ಗಣೇಶ ಹುಕ್ಕೇರಿಯವರ ಕೈ ಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾಗೆ ಮತ ನೀಡಿ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುದರ್ಶನ ಖೋತ, ಸದಲಗಾ ಬ್ಲಾಕ್ ಅಧ್ಯಕ್ಷ ಅನೀಲ ಪಾಟೀಲ ಮಾತನಾಡಿದರು.ರಾಜು ಪಾಟೀಲ, ಮಲ್ಲು ಹವಾಲ್ದಾರ್, ಪುಂಡಲೀಕ ಖೋತ, ಅಣ್ಣಾಸಾಹೇಬ ಮಗದುಮ್ಮ, ಗ್ರಾಪಂ ಅಧ್ಯಕ್ಷ್ಯೆ ಅಮೃತಾ ರಾಜಗೌಡ ಪಾಟೀಲ, ಉಪಾಧ್ಯಕ್ಷ ಸೋಲೋಚನಾ, ಅಜಯಸಿಂಹ ಶಿತೋಳೆ ಸರ್ಕಾರ, ಪ್ರಕಾಶ ಮಗದುಮ್ಮ, ಅರುಣ ಬೋನೆ, ರಮೇಶ ಪಾಟೀಲ, ನಿರಂಜನ ಕಾಂಬಳೆ, ಬಾಬಾಣ್ಣ ಖೋತ, ಅಪ್ಪು ಸುಟ್ಟಟಿ, ಶಕೀಲ್ ಬೇಗ, ಸುನೀಲ ಮಹಿಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.