ಪ್ರಗತಿಪರ ಕಾಂಗ್ರೆಸ್‌ ಪಕ್ಷಕ್ಕೆ ಮತದಾನ ಮಾಡಿ

| Published : Apr 24 2024, 02:23 AM IST

ಸಾರಾಂಶ

ದೇಶದ ಪ್ರಗತಿಗಿಂತ ಭಾವನೆಗಳನ್ನು ಪ್ರಚೋದಿಸಿ, ದೇಶದ ತುಂಬಾ ಕೋಮು ಕಸವನ್ನು ಚೆಲ್ಲುತ್ತಿರುವ ಬಿಜೆಪಿ ಸರ್ಕಾರ ಪ್ರಗತಿ ವಿರೋಧಿಯಾದದ್ದು, ಪ್ರಗತಿಪರ ಕಾಂಗ್ರೆಸ್‌ ಪಕ್ಷಕ್ಕೆ ಮತದಾರರು ಮತದಾನ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ರಾಮಚಂದ್ರ ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದ ಪ್ರಗತಿಗಿಂತ ಭಾವನೆಗಳನ್ನು ಪ್ರಚೋದಿಸಿ, ದೇಶದ ತುಂಬಾ ಕೋಮು ಕಸವನ್ನು ಚೆಲ್ಲುತ್ತಿರುವ ಬಿಜೆಪಿ ಸರ್ಕಾರ ಪ್ರಗತಿ ವಿರೋಧಿಯಾದದ್ದು, ಪ್ರಗತಿಪರ ಕಾಂಗ್ರೆಸ್‌ ಪಕ್ಷಕ್ಕೆ ಮತದಾರರು ಮತದಾನ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ರಾಮಚಂದ್ರ ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮ, ವರ್ಗಕ್ಕೆ ಬದುಕುವ ಸಮಾನ ಹಕ್ಕುಗಳಿವೆ. ಇಂದು ಧರ್ಮ, ದೇವರ ಹೆಸರಿನಲ್ಲಿ ಮತ ಕೇಳುವ ಕೋಮವಾದವನ್ನು ಪ್ರತಿಪಾದಿಸುವ, ಸಂವಿಧಾನಿಕ ಹಕ್ಕುಗಳನ್ನು ಕಸಿಯುವ ಬಿಜೆಪಿ ಪಕ್ಷ ಜನವಿರೋಧಿಯಾಗಿದೆ ಎಂದರು.

ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಮಾಡಿದ ಸಾಧನೆ ಎಂದರೆ ಲಾಭದಾಯಕ ಸಾರ್ವಜನಿಕ ಬೃಹತ್ ದೊಡ್ಡ 27 ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಧರ್ಮವನ್ನು ರಾಜಕಾರಣಕ್ಕೆ ಎಳೆದು ತಂದು ದೇಶದ ಸಾಮರಸ್ಯ-ಭ್ರಾತೃತ್ವಕ್ಕೆ ಧಕ್ಕೆ ತಂದು ಹಾಗೂ ಸಂವಿಧಾನಕ್ಕೆ ಅಪಾಯವನ್ನು ತಂದೊಡ್ಡಿದೆ ಎಂದರು.

ಸಂವಿಧಾನಕ್ಕಿಂತ ಮನು ಸಂಹಿತೆಯನ್ನು, ಪೌರೋಹಿತ್ಯವನ್ನು ಮುನ್ನೆಲೆಗೆ ತರಲಾಗುತ್ತಿದೆ. ಈ ಬಿಜೆಪಿ EWES ಮೀಸಲಾತಿ ಮೂಲಕ ಮೀಸಲಾತಿ ಉದ್ದೇಶವನ್ನೇ ನಾಶಗೊಳಿಸಲಾಗಿದೆ ಎಂದರು.

ರೈತರ ಸಮಸ್ಯೆ, ಮಹಿಳಾ ಸಮಸ್ಯೆ, ಕಾರ್ಮಿಕರ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೇಶದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ದೇಶದ ಸಂಪತ್ತು ಖಾಸಗಿಯವರ ಪಾಲಾಗುತ್ತಿದೆ. ಆದರಿಂದ ಸಂವಿಧಾನಿಕ ಭಾರತ, ಬಹುತ್ವ ಭಾರತ, ಸಾಮರಸ್ಯ, ಸೌರ್ಹಾದತೆಯ ಭಾರತದ ಉಳುವಿಗಾಗಿ ಕೋಮುವಾದಿ ಪಕ್ಷಕ್ಕೆ ಮತ ನೀಡದೆ ಜಾತ್ಯಾತೀತ ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಲೀಲಾ ಸಂಪಿಗೆ, ಸುಭಾಷ್ ಮಾಡ್ರಹಳ್ಳಿ, ಶಾಂತಕುಮಾರಿ, ಸುನೀಲ್‌ ಕುಮಾರ್‌ ಇದ್ದರು.