ಸಾರಾಂಶ
ಇದು ದೇಶದ ಭವಿಷ್ಯದ ಚುನಾವಣೆಯಾಗಿದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ವಿನಂತಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇದು ದೇಶದ ಭವಿಷ್ಯದ ಚುನಾವಣೆಯಾಗಿದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ವಿನಂತಿಸಿದರು. ಲೋಕಸಭಾ ಮತಕ್ಷೇತ್ರವಾದ ಮುಚಖಂಡಿಯಲ್ಲಿ ಎಲ್ಟಿ 1 ಮತ್ತು 2 ರಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಪರ ಮತಯಾಚನೆ ಮಾಡಿ, ಬಿಜೆಪಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.ದೇಶದ ಭವಿಷ್ಯ ಜನರ ಕೈಯಲ್ಲಿದೆ, ಬೇಸಿಗೆಯ ಬಿಸಿಲು ಹೆಚ್ಚಾಗಿದ್ದು, ಬೆಳಗ್ಗೆ 10ರ ಒಳಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡಿ, ನಿಮ್ಮ ಒಂದು ಮತ ದೇಶದ ಭವಿಷ್ಯ ಬದಲಿಸಬಲ್ಲದು. ನಿಮ್ಮ ಒಂದು ಮತ ದೇಶದ ಭದ್ರತೆಯನ್ನು ಗಟ್ಟಿಗೊಳಿಸಬಲ್ಲದು, ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಅಭ್ಯರ್ಥಿ ಗದ್ದಿಗೌಡರಿಗೆ ಮತ ನೀಡಿ. ಪ್ರಧಾನಿ ಮೋದಿಜಿ ಹೇಳಿದಂತೆ ಮತದಾನ ದೇಶದ ಭವಿಷ್ಯ ಬರೆಯುವ ಪವಿತ್ರವಾದ ಕೆಲಸ. ಚುನಾವಣೆಯನ್ನು ಹಬ್ಬದಂತೆ ಸಂಭ್ರಮಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ರಂಗನಗೌಡ ಗೌಡರ, ದಿಲೀಪ ರಾಥೋಡ, ಸೋಮಸಿಂಗ ಲಮಾಣಿ, ಬಲರಾಮ ಲಮಾಣಿ, ಕಿರಣ ರಾಥೋಡ, ಗೀರಿಶ ರಾಥೋಡ, ರವಿ ಚವ್ಹಾಣ, ಬಸವರಾಜ ಚವ್ಹಾಣ, ಆಶೋಕ ಚವ್ಹಾಣ, ಮಾನಪ್ಪ ಚವ್ಹಾಣ, ರಾಮನಗೌಡ ನಾಯಕ್, ತಾರಪ್ಪ ಕಾರಬಾರಿ, ಹಿಶ್ಚಂದ್ರ ಕೃಷ್ಣಪ್ಪ ನಾಯಕ್, ಸಂತೋಷ ನಾಯಕ್, ನಾಯಕ್ ಕಾರಬಾರಿ ಯುವಕರು ಸೇರಿ ಅನೇಕರು ಇದ್ದರು.