ಸಾರಾಂಶ
ಕನ್ನಡಪ್ರಭ ವಾರ್ತೆ ಕಮಲಾಪುರ
ಬಿಜೆಪಿ ಸುಳ್ಳಿಗೆ ಬಲಿಯಾಗದೆ ಬಡವರ ಪರ ಕೆಲಸ ಮಾಡುವ ಹಾಗೂ ಜನಸಾಮಾನ್ಯರ ಕುಂದು ಕೊರತೆಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಮತದಾರರಲ್ಲಿ ಮನವಿ ಮಾಡಿದರು.ಕಲ್ಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಸ್ವಂತ, ಮರಗುತ್ತಿ, ಓಕಳಿ, ಕಲಮುಡ್, ಹೊಳಕುಂದಾ, ಸೇರಿದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಮುಂತಾದ ಕಡೆ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿ ಮಾತನಾಡಿದರು.
ಕಾಂಗ್ರೆಸ್ ಬಡವರ ಪರ ಕಾಳಜಿ ಹೊಂದಿರುವ ಪಕ್ಷ ಎಂದು ಸಾಬೀತು ಮಾಡಿದ್ದೆ. ಬಿಜೆಪಿ ಶ್ರೀಮಂತರ ಪಕ್ಷ ಶ್ರೀಮಂತ ಉದ್ಯಮಿಗಳ ಮೇಲಿನ ತೆರಿಗೆ ಕಡಿಮೆ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಮೀನಾ ಮೇಷ ಎಣಿಸುವ ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಬಡವರ ಪರವಾಗಿ ಯೋಜನೆ ಜಾರಿಗೆ ತರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದ್ದರು.ಬಿಜೆಪಿಯವರು ಅಧಿಕಾರಕ್ಕೆ ಬರೋಕಿಂತ ಮುಂಚೆ ರೈತರ ಆದಾಯ ದ್ವಿಗುಣ ಮಾಡಿಸುವುದಕ್ಕಾಗಿ ಹೇಳಿದ್ದರು. ಆದರೆ ರೈತರ ಆದಾಯ ಹೆಚ್ಚು ಆಗಿಲ್ಲ ಆದರೆ ಶ್ರೀಮಂತರ, ಉದ್ಯಮಿ ಆದಾಯ ಪಟ್ಟು ಆಗಿದೆ. ಚುನಾವಣೆ ಸಂದರ್ಭದಲ್ಲಿ ಕೇವಲ ಸುಳ್ಳು ಹೇಳಿ ಜನರಧಾರಿತಪ್ಪಿಸಿ ಮತ ಹಾಕಿಸಿಕೊಳ್ಳುವ ಬಿಜೆಪಿಗರಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದರು.
ಯಾವ ಪಕ್ಷಕ್ಕೆ ಮತ ಹಾಕಬೇಕೆಂಬುದು ಜನರು ನಿರ್ಧಾರ ಮಾಡಬೇಕು ಯಾವ ಪಕ್ಷ ಬಡವರ ಪರವಾಗಿ ಕೆಲಸ ಮಾಡಿದೆ. ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ಜನರು ತೀರ್ಮಾನ ಮಾಡಬೇಕು. ನಿಮ್ಮೆಲ್ಲರ ಅಭಿವೃದ್ಧಿಗಾಗಿ ಶ್ರಮಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಸರ್ವ ಜನಾಂಗಗಳ ಅಭಿವೃದ್ಧಿ ಆಗಲಿದೆ. ದೇಶ ಸುಭದ್ರವಾಗಿದೆ ಎಂದರು.ಲೋಕಸಭೆ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಚೇತನ ಗೋನಾಯಕ್, ಕಾರ್ತಿಕ ನಾಟಿಕಾರ್, ಇಬ್ರಹಿಮ್ ಅತರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾ ತಡಕಲ್, ವಿಜಯಕುಮಾರ ಜಿ ರಾಮಕೃಷ್ಣ ಗುರುರಾಜ ಮಾಟೂರ, ಸಂತೋಷ್ ರಾಂಪುರೆ, ಶರಣ ಗೌಡ ಪಾಟೀಲ್, ಅಮರ ಚಿಕ್ಕೆ ಗೌಡ, ನಿಗಪ್ಪಾ ಪ್ರಭುಧಾಕರ, ಪ್ರಕಾಶ ಹಾಗರಗಾ, ಅರವಿಂದ ಚೌಹಾನ, ಮಹಿಳಾ ಘಟಕದ ಅಧ್ಯಕ್ಷ ನಿರ್ಮಲ ಬರಗಾಲಿ, ರಾಜಕುಮಾರ ಕಪನುರ, ಸಿಎ ಪಾಟಿಲ್, ಮಲ್ಲಿನಾಥ ಪಾಟೀಲ್ ಸ್ವಂತ, ಚಂದ್ರಿಕಾ ಪರಮೇಶ್ವರಿ, ನಟರಾಜ ಕಲ್ಯಾಣ,ಶರಣು ಗೌರೇ, ಮಂಜು ಸಿಕ್ಕೆ,ಥರಮ್ಮಣ್ಣ ಹುಪಳ್ಳಿ ಇದ್ದರು.