ಪ್ರವಾಸಿ ತಾಣಕ್ಕೆ ವೋಟ್ ಮಾಡಿ, ಅಭಿವೃದ್ಧಿಗೆ ಸಹಕರಿಸಿ: ಜಯಂತ

| Published : Aug 10 2024, 01:34 AM IST

ಸಾರಾಂಶ

ಕೇಂದ್ರ ಸರ್ಕಾರ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಹೊಸ ಯೋಜನೆಯನ್ನು ರೂಪಿಸಿದೆ.

ಕಾರವಾರ: ಜಿಲ್ಲೆಯ ಪ್ರವಾಸೋದ್ಯವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ದೇಕೋ ಅಪನಾ ದೇಶ್, ಪೀಪಲ್ಸ್ ಚಾಯ್ಸ್ 2024 ಅಭಿಯಾನದಡಿ ಸಾರ್ವಜನಿಕರು ಇಲಾಖೆಯ ಕ್ಯುಆರ್ ಕೋಡ್ ಬಳಸಿ ಪ್ರವಾಸಿ ಸ್ಥಳಗಳಿಗೆ ವೋಟ್ ಮಾಡಬೇಕು ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಯಂತ ಬಿ.ವಿ. ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ದೇಕೋ ಅಪನಾ ದೇಶ್ ಪೀಪಲ್ಸ್ ಚಾಯ್ಸ್ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಜಿಲ್ಲೆಯ ಸಾರ್ವಜನಿಕರು ಸೆ. 15ರೊಳಗೆ ಇಲಾಖೆ ನೀಡಿದ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್‌ಸೈಟ್ https//innovateindia.mygov.in/dekho-apna- desh/ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ಜಿಲ್ಲೆಯ 16 ಪ್ರವಾಸಿ ತಾಣಗಳ ಪೈಕಿ ಮೂರನ್ನು ಆಯ್ಕೆ ಮಾಡಿ ಮತ ನೀಡಬಹುದು. ಇದರಿಂದ ಹೆಚ್ಚಿನ ಮತ ಪಡೆದ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸರ್ಕಾರವು ವಿಶೇಷ ಯೋಜನೆಯಡಿ ಹಣ ಬಿಡುಗಡೆ ಮಾಡಲಿದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಯು ಆರ್ ಕೋಡ್ ಬಳಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ವಾರ್ತಾಧಿಕಾರಿ ಶಿವಕುಮಾರ ಮಾತನಾಡಿ, ಎಲ್ಲ ರೀತಿಯ ಪ್ರವಾಸಿ ತಾಣಗಳು ಸಿಗುವ ಏಕೈಕ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ಸರ್ಕಾರದ ಈ ಯೋಜನೆಗೆ ಸಾರ್ವಜನಕರು ಹೆಚ್ಚು ಮತ ನೀಡುವ ಮೂಲಕ ಕೈ ಜೋಡಿಸಬೇಕು ಎಂದರು. ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ. ಹರಿಕಾಂತ ಹಾಗೂ ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಸುನೀಲ ಹಣಕೋಣ, ಖಜಾಂಚಿ ಗಣಪತಿ ಹಗಡೆ ಇದ್ದರು.