ನನಗೆ ರಾಜಕೀಯ ಶಕ್ತಿ ತುಂಬಲು ಮತ ಕೊಡಿ: ಶ್ರೀರಾಮುಲು

| Published : Mar 24 2024, 01:34 AM IST

ಸಾರಾಂಶ

ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ 8 ಬಾರಿ ಚುನಾವಣೆ ಎದುರಿಸಿ 6 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ.

ಹೂವಿನಹಡಗಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಸೋತರೆ ನನ್ನ ರಾಜಕೀಯ ಜೀವನ ಕೊನೆಗೊಳ್ಳಲಿದೆ. ಅದಕ್ಕೆ ಮರುಜೀವ ತುಂಬಲು ಇಂತಹ ಸಂದಿಗ್ಧತೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ನನಗೆ ಮತ ಕೊಟ್ಟು ರಾಜಕೀಯ ಶಕ್ತಿ ತುಂಬಬೇಕೆಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮನವಿ ಮಾಡಿದರು.ಇಲ್ಲಿನ ಶಿವಶಾಂತವೀರ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ 8 ಬಾರಿ ಚುನಾವಣೆ ಎದುರಿಸಿ 6 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಈ ಚುನಾವಣೆಯ ಫಲಿತಾಂಶ ನನ್ನ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಹೆಚ್ಚು ಬಹುಮತ ಗಳಿಸಲು ನಾನು ಪಶ್ಚಿಮ ತಾಲೂಕುಗಳ ಮತದಾರರನ್ನು ನಂಬಿಕೊಂಡಿದ್ದೇನೆ ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಓದೋ ಗಂಗಪ್ಪ, ಎಂ.ಪರಮೇಶ್ವರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಹಣ್ಣಿ ಶಶಿಧರ ಮಾತನಾಡಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಬಿಜೆಪಿ ಪದಾಧಿಕಾರಿಗಳಾದ ಬಲ್ಲಾಹುಣ್ಸಿ ರಾಮಣ್ಣ, ಈಟಿ ಲಿಂಗರಾಜ, ಎಸ್.ಸಂಜೀವರೆಡ್ಡಿ, ಎನ್.ಕೋಟೆಪ್ಪ, ತಳಕಲ್ ಕರಿಬಸಪ್ಪ, ಜೆ.ಪರಶುರಾಮ, ಜ್ಯೋತಿ ಪ್ರದೀಪ್, ಕಿಚಡಿ ಕೊಟ್ರೇಶ, ಬಿ.ತೋಟನಾಯ್ಕ, ಸಿರಾಜ್ ಬಾವಿಹಳ್ಳಿ, ಅರುಂಡಿ ನಾಗರಾಜ, ಸುವರ್ಣ, ವಾರದ ನಿಯಾಜ್, ಯು.ಕೊಟ್ರೇಶ ನಾಯ್ಕ, ಕೆ.ಉಚ್ಚಂಗೆಪ್ಪ, ಪುನೀತ್ ದೊಡ್ಡಮನಿ, ಭಾಗ್ಯಮ್ಮ, ಮೀರಾಬಾಯಿ ಇದ್ದರು.ಶಾಸಕ ಕೃಷ್ಣನಾಯ್ಕ, ವಿಧಾನಪರಿಷತ್ ಸದಸ್ಯ ಬಿ. ರವಿಕುಮಾರ್ ಮಾತನಾಡಿದರು.