ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ: ಟಿ.ಆರ್.ಶ್ರೀಧರ್

| Published : Apr 24 2024, 02:15 AM IST

ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ: ಟಿ.ಆರ್.ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಬೇಕೆಂದು ಚಿಕ್ಕಮಗಳೂರು ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್ ಹೇಳಿದ್ದಾರೆ.

ತರೀಕೆರೆಯಲ್ಲಿ ಮತದಾರರಿಗೆ ಜಾಗೃತಿ ಶಿಬಿರ

ಕನ್ನಡಪ್ರಭ ವಾರ್ತೆ, ತರೀಕೆರೆ

ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಬೇಕೆಂದು ಚಿಕ್ಕಮಗಳೂರು ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್ ಹೇಳಿದ್ದಾರೆ.ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಟ್ಟಣದ ಯೋಜನೆಯ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಮತದಾರರಿಗೆ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮತದಾರರಿಗೆ ಕರ ಪತ್ರ ವಿತರಿಸಿ ಮಾತನಾಡುತ್ತಿದ್ದರು.ಐದು ವರ್ಷಕ್ಕೊಮ್ಮೆ ಸಿಗುವ ಅವಕಾಶವನ್ನು ಬಳಸಿಕೊಂಡು, ಹಣ ಮತ್ತು ಮದ್ಯದಂತಹ ಯಾವುದೇ ಆಮಿಷಕ್ಕೆ ಒಳಗಾಗಗದೆ, ಕಾಳಜಿಯಿಂದ ಯಾವುದೇ ಚುನಾವಣೆ ಇರಲಿ ಮತದಾನ ಮಾಡುವುದರ ಮೂಲಕ ಮತದಾನದ ಪಾವಿತ್ರ್ಯತೆ ಕಾಪಾಡಬೇಕು. ಈ ವಿಚಾರಗಳನ್ನು ನಿಮ್ಮ ಊರಿನ ನೆರೆಹೊರೆಯವರಿಗೆ ತಿಳಿಸಿ ಜಾಗೃತಿಗೊಳಿಸಬೇಕು ಎಂದು ಹೇಳಿದರು.ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಮಾತನಾಡಿ ಯೋಜನೆಯಿಂದ ಮಾಸಾಶನ, ವಿಶೇಷ ಚೇತನರಿಗೆ ಸಲಕರಣೆಗಳ ವಿತರಣೆ, ಮಕ್ಕಳಿಗೆ ಸುಜ್ಞಾನ ನಿಧಿ, ದೇವಸ್ಥಾನಗಳ ನಿರ್ಮಾಣಕ್ಕೆ ನೆರವು, ದುಶ್ಟಟಗಳ ವಿರುದ್ಧ ಜಾಗೃತಿ ಶಿಬಿರ, ಶಾಲಾ ಕಾಲೇಜುಗಳಲ್ಲಿ ಚಿಕ್ಕವಯಸ್ಸಿನವರಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನ ಶಿಬಿರ, ಮತದಾರರಿಗೆ ಜಾಗೃತಿ ಶಿಬಿರ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ನವಜೀವನ್ ಸಂಸ್ಥೆ ಅಧ್ಯಕ್ಷ ಸತೀಶ್, ಯೋಜನೆ ಮೇಲ್ವಿಚಾರಕ ಸಿದ್ದಯ್ಯ, ಒಕ್ಕೂಟದ ಪದಾಧಿಕಾರಿಗಳು, ಯೋಜನೆ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತದಾರರಿಗೆ ಜಾಗೃತಿ ಕರ ಪತ್ರಗಳನ್ನು ವಿತರಿಸಲಾಯಿತು.

23ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಮತದಾರರಿಗೆ ಜಾಗೃತಿ ಶಿಬಿರದಲ್ಲಿ ಚಿಕ್ಕಮಗಳೂರು ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಟಿ.ಆರ್.ಶ್ರೀಧರ್ ಜಾಗೃತಿ ಕರ ಪತ್ರ ವಿತರಿಸಿದರು. ಯೋಜನಾಧಿಕಾರಿ ಕುಸುಮಾಧರ್, ಯೋಜನೆ ಮೇಲ್ವಿಚಾರಕ ಸಿದ್ದಯ್ಯ ಮತ್ತಿತರರು ಭಾಗವಹಿಸಿದ್ದರು.