ಸಾರಾಂಶ
ನರಸಿಂಹರಾಜಪುರ, ಕಳೆದ 10 ವರ್ಷದಿಂದಲೂ ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ರಕ್ತ ದಾನ ಶಿಬಿರ ಏರ್ಪಡಿಸುತ್ತಿದೆ ಎಂದು ಮುತ್ತಿನಕೊಪ್ಪ ಜನ ಜಾಗ್ರತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ತಿಳಿಸಿದರು.
ಜನ ಜಾಗೃತಿ ವೇದಿಕೆಯಿಂದ ನಡೆದ ರಕ್ತ ದಾನ ಶಿಬಿರದಲ್ಲಿ 53 ಯೂನಿಟ್ ರಕ್ತ ಸಂಗ್ರಹ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಳೆದ 10 ವರ್ಷದಿಂದಲೂ ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ರಕ್ತ ದಾನ ಶಿಬಿರ ಏರ್ಪಡಿಸುತ್ತಿದೆ ಎಂದು ಮುತ್ತಿನಕೊಪ್ಪ ಜನ ಜಾಗ್ರತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ತಿಳಿಸಿದರು.
ಭಾನುವಾರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ನೇತೃತ್ವದಲ್ಲಿ ಶಿವಮೊಗ್ಗ ರೆಡ್ ಕ್ರಾಸ್ ಸಂಸ್ಥೆ, ತುಂಬಾ ಭದ್ರ ಸ್ಪೋರ್ಟ್ಸ್ ಕ್ಲಬ್, ಬುರ್ಜನ , ಸಿದ್ದೇಶ್ವರ ಸೇವಾ ಸಂಘ, ಸೇಂಟ್ ಮೇರೀಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಸ್ಥಳೀಯ ಸಂಘಗಳ ಸಹಕಾರದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ರಕ್ತದಾನ ಶಿಬಿರದ ಜೊತೆಗೆ ಮತದಾರರನ್ನು ಜಾಗೃತಿ ಗೊಳಿಸುತ್ತಿದೆ. ಇಂದಿನ ರಕ್ತದಾನ ಶಿಬಿರದಲ್ಲಿ 53 ಯೂನಿಟ್ ರಕ್ತ ಸಂಗ್ರಹವಾಗಿದೆ. ಪ್ರಸ್ತುತ ರಾಜ್ಯದಲ್ಲಿ ರಕ್ತದ ಕೊರತೆ ಕಾಣುತ್ತಿದೆ. ತುರ್ತು ಸಂದರ್ಭದಲ್ಲಿ ರಕ್ತ ಬೇಕಾದರೆ ಜನ ಜಾಗೃತಿ ವೇದಿಕೆ ಸದಸ್ಯರನ್ನು ಸಂಪರ್ಕಿಸಿದರೆ ರಕ್ತ ನೀಡಲಾಗುವುದು ಎಂದರು.ಶಿವಮೊಗ್ಗದ ಸಂಜೀವಿನಿ ರೆಡ್ ಕ್ರಾಸ್ ಸಂಸ್ಥೆ ಮುಖ್ಯಸ್ಥೆ ಶೃತಿ ಮಾತನಾಡಿ, ಒಬ್ಬರು ರಕ್ತ ನೀಡಿದರೆ 3 ಜನರ ಪ್ರಾಣ ಉಳಿಸಬಹುದು.18 ವರ್ಷದಿಂದ 60 ವರ್ಷದವರೆಗೆ ಆರೋಗ್ಯವಂತರು ರಕ್ತವನ್ನು ದಾನವಾಗಿ ನೀಡಬಹುದು. ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಗ್ರಾಮೀಣ ಮಟ್ಟ ದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಸಂತಸದ ವಿಷಯ ಎಂದರು.
ಎಲ್ಲಾ ರಕ್ತದಾನಿಗಳಿಗೆ ಸರ್ಟಿಫಿಕೇಟ್ ನೀಡಲಾಯಿತು. ಈ ಸಂದರ್ಭದಲ್ಲಿ ಕಣಿವೆ ನಾಗಚಂದ್ರ ಪ್ರತಿಷ್ಠಾನದ ಮುಖ್ಯಸ್ಥ ಕಣಿವೆ ವಿನಯ್, ಜನಜಾಗೃತಿ ವೇದಿಕೆ ಕಾರ್ಯದರ್ಶಿ ಶ್ರೀಕಾಂತ್, ಸ್ಥಳೀಯ ಮುಖಂಡರಾದ ಬಿ.ಎಂ.ಗೋಪಿನಾಥ್, ಸೈಯ್ಯದ್, ಹೈದರ್, ರಂಜಿತ್, ಬುರ್ಜನ ಪ್ರಶಾಂತ್, ಬಿನೋಯ್, ಕಣಬೂರು ಸಚಿನ್, ಸಂತೋಷ್ ಇದ್ದರು.