ನಾಳೆಗೆ........ಬೈಕ್‌ ರ್‍ಯಾಲಿ ಮೂಲಕ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ

| Published : Apr 04 2024, 01:00 AM IST

ನಾಳೆಗೆ........ಬೈಕ್‌ ರ್‍ಯಾಲಿ ಮೂಲಕ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಜಿಲ್ಲೆಯಲ್ಲಿ ೪೦ ಸಾವಿರ ಯುವ ಮತದಾರರು ತಮ್ಮ ಮತ ಚಲಾಯಿಸುತ್ತಿದ್ದಾರೆ, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ನಗರಸಭೆ ವ್ಯಾಪ್ತಿಗೊಳಪಡುವ ಎಲ್ಲ ೩೫ ವಾರ್ಡುಗಳಲ್ಲಿ ಮತದಾನ ಜಾಗೃತಿ ಜಾಥಾ ಏರ್ಪಡಿಸಲಾಗಿದೆ. ಕೆಜಿಎಫ್ ತಾಲೂಕಿನಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ಬೈಕ್ ರ್‍ಯಾಲಿ ಹಮ್ಮಿಕೊಂಡಿರುವುದಾಗಿ ಪೌರಾಯುಕ್ತ ಪವನ್‌ ಕುಮಾರ್ ತಿಳಿಸಿದರು.

ನಗರದ ಸೂರಜ್ ಮಲ್ ವೃತ್ತ, ಗೀತಾ ರಸ್ತೆ, ಪ್ರಿಚರ್ಡ್ ರಸ್ತೆ, ಗಾಂಧಿ ವೃತ್ತ, ಅಶೋಕ್‌ ನಗರ್, ಸ್ಕೂಲ್ ಆಫ್ ಮೈನ್ಸ್, ಕೋರಮಂಡಲ್, ಫೈವ್ ಲೈಟ್ಸ್, ಕೆಇಬಿ, ಚಾಂಪಿಯನ್ ರೀಫ್ಸ್, ಮಾರಿಕುಪ್ಪಂ, ಆಂಡರ್‌ಸನ್‌ಪೇಟೆ, ಗೌತಮನಗರ ಸೇರಿ ಇನ್ನಿತರ ಭಾಗಗಳಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಜಾಥಾ ನಡೆಸಿ ಇದೇ ತಿಂಗಳ ೨೬ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.

ಈ ಬಾರಿ ಜಿಲ್ಲೆಯಲ್ಲಿ ೪೦ ಸಾವಿರ ಯುವ ಮತದಾರರು ತಮ್ಮ ಮತ ಚಲಾಯಿಸುತ್ತಿದ್ದಾರೆ, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ನಗರಸಭೆ ವ್ಯಾಪ್ತಿಗೊಳಪಡುವ ಎಲ್ಲ ೩೫ ವಾರ್ಡುಗಳಲ್ಲಿ ಮತದಾನ ಜಾಗೃತಿ ಜಾಥಾ ಏರ್ಪಡಿಸಲಾಗಿದೆ. ಕೆಜಿಎಫ್ ತಾಲೂಕಿನಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ತಾಪಂ ಇಒ ಮಂಜುನಾಥ್ ಹರ್ತಿ ಮಾತನಾಡಿ, ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತಾಲೂಕು ಸ್ವೀಪ್ ಸಮಿತಿ ತನ್ನ ಚಟುವಟಿಕೆಯನ್ನು ಚುರುಕುಗೊಳಿಸಿದ್ದು, ಈ ಬಾರಿ ಕ್ಷೇತ್ರದಲ್ಲಿ ಗರಿಷ್ಠ ಮತದಾರರನ್ನು ಸೆಳೆಯಲು ಹಲವು ಕಾರ್‍ಯಕ್ರಮಗಳನ್ನು ರೂಪಿಸಿದೆ ಎಂದರು.

ಈಗಾಗಲೇ ತಾಲೂಕು, ಹೋಬಳಿ, ಗ್ರಾಪಂ ಮಟ್ಟದಲ್ಲಿ ಜಾಗೃತಿ ಚಟುವಟಿಕೆಗಳು ಆರಂಭವಾಗಿದೆ. ಜಾಥಾ, ಮಾನವ ಸರಪಳಿ, ಪಂಜಿನ ಮೆರವಣಿಗೆಯಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಗ್ರಾಪಂ ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಿ ಮತದಾನಕ್ಕೆ ಕರೆಸಿಕೊಳ್ಳಲಾಗುವುದು ಎಂದರು.

ನಗರಸಭೆ ವ್ಯವಸ್ಥಾಪಕ ಶಶಿಕುಮಾರ್, ಅಧಿಕಾರಿಗಳಾದ ಜಯರಾಂ, ಕೃಷ್ಣಮೂರ್ತಿ, ತಾಪಂ ಸಹಾಯಕ ನಿರ್ದೇಶಕ ರಾಜಾರಾಂ ಇದ್ದರು.