ರವೀಂದ್ರ ಕೈಯಲ್ಲಿ ಅರಳಿದ ಮತದಾನ ಜಾಗೃತಿ ಕಲಾಕೃತಿ

| Published : May 07 2024, 01:00 AM IST

ಸಾರಾಂಶ

ದಾವಣಗೆರೆಯಲ್ಲಿ ಕಲಾವಿದ ರವೀಂದ್ರ ಅರಳಗುಪ್ಪಿ ನಿರ್ಮಿಸಿರುವ ಮತದಾನ ಜಾಗೃತಿ ಕಲಾಕೃತಿ

ದಾವಣಗೆರೆ: ನಗರದ ಸಂಕಲನ ಸಮೂಹ ಸಂಸ್ಥೆಯಿಂದ ಮತದಾನ ಜಾಗೃತಿಗಾಗಿ ಚಿತ್ರ ಮತ್ತು ಶಿಲ್ಪಗಳ ಮೂಲಕ ಅರಿವು ಮೂಡಿಸುವ ಪ್ರದರ್ಶನ ಕಾರ್ಯಕ್ರಮವನ್ನು ಮೇ 6 ಮತ್ತು 7 ರಂದು ಬಿಐಇಟಿ ರಸ್ತೆ, ಹಳೆ ಆರ್‌ಟಿಓ ಕಚೇರಿ ಸಮೀಪದ ವೃತ್ತ, ಎಂಸಿಸಿಬಿ ಬ್ಲಾಕ್‌ನಲ್ಲಿ ನಡೆಸಲಾಗಿದೆ.

ನನ್ನ ಮತ ನನ್ನ ಹಕ್ಕು ಎಂಬ ಶಿರ್ಷಿಕೆಯಡಿ ಯಕ್ಷಗಾನದ ಕಲಾಕೃತಿ ನಿರ್ಮಿಸಿದ್ದು, ಮತ ಚಲಾಯಿಸಿದವರು ಈ ಕಲಾಕೃತಿಯಲ್ಲಿ ಸೆಲ್ಪಿ ತೆಗೆದುಕೊಳ್ಳಬಹುದಾಗಿದೆ. ಹಲವಾರು ಘೋಷ ವಾಕ್ಯಗಳನ್ನು ಸಹ ಬರೆಯಲಾಗಿದೆ.

ಸಂಸ್ಥೆಯ 25ನೇ ವರ್ಷಾಚರಣೆ ಸಂದರ್ಭದಲ್ಲಿ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಸೆಲ್ಫಿ ಕಾರ್ನರ್ ಮಾಡಿ, ಮತದಾನ ಜಾಗೃತಿ ಸಾರುವ 5/8 ಅಡಿ ಚಿತ್ರ ಕಲಾ ಕೃತಿ ಕೂಡ ಇಡಲಾಗಿದೆ. ಈ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ರವೀಂದ್ರ, ಉಷಾ ಅರಳಗುಪ್ಪಿ (9481584447) ಮನವಿ ಮಾಡಿದ್ದಾರೆ.