ಗೋಪಿನಾಥಂನಲ್ಲಿ ಗಮನ ಸೆಳೆದ ಮತದಾನ ಜಾಗೃತಿ

| Published : Apr 20 2024, 01:02 AM IST

ಸಾರಾಂಶ

ಇದೇ ಏ. 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಅಂಗವಾಗಿ ಜಿಲ್ಲೆಯ ಗಡಿ ಭಾಗದಲ್ಲಿರುವ ಗೋಪಿನಾಥಂ ಗ್ರಾಮದ ಶಕ್ತಿ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ತಾಪಂ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ದೀಪನಡಿಗೆ ನಾಗರಿಕರ ಕಣ್ಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇದೇ ಏ. 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಅಂಗವಾಗಿ ಜಿಲ್ಲೆಯ ಗಡಿ ಭಾಗದಲ್ಲಿರುವ ಗೋಪಿನಾಥಂ ಗ್ರಾಮದ ಶಕ್ತಿ ಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ತಾಪಂ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ದೀಪನಡಿಗೆ ನಾಗರಿಕರ ಕಣ್ಮನ ಸೆಳೆಯಿತು. ಗ್ರಾಮದ ಶಕ್ತಿ ಮಾರಿಯಮ್ಮ ದೇವಾಲಯದ ಪ್ರವೇಶದ್ವಾರದಲ್ಲಿ ಭಾರತ ನಕ್ಷೆಯ ಸುತ್ತಲು ದೀಪಗಳನ್ನು ಹಚ್ಚುವ ಮೂಲಕ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ದೀಪನಡಿಗೆ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ದೀಪನಡಿಗೆ ಮೆರವಣಿಗೆಯಲ್ಲಿ ಸ್ವೀಪ್ ತಂಡದ ಅಧಿಕಾರಿಗಳು, ಪೂರ್ಣಕುಂಭ ಹೊತ್ತ ಹೆಂಗೆಳೆಯರು ಸೇರಿದಂತೆ ಗ್ರಾಮದ ಸಾರ್ವಜನಿಕರು ಚುನಾವಣಾ ಘೋಷವಾಕ್ಯಗಳಾದ "ಚುನಾವಣಾ ಪರ್ವ-ದೇಶದ ಗರ್ವ ", ಮತದಾನ ನಮ್ಮ ಹಕ್ಕು, ಎಲ್ಲರೂ ನೈತಿಕ ಮತದಾನ ಬೆಂಬಲಿಸಿ, ಕಡ್ಡಾಯವಾಗಿ ಮತದಾನ ಮಾಡಿ, ಇನ್ನಿತರೆ ಮೈನವೀರೆಳಿಸುವ ಜಾಗೃತಿ ಘೋಷವಾಕ್ಯಗಳನ್ನು ಮೊಳಗಿಸಿ ನಾಗರಿಕರಿಗೆ ಮತದಾನದ ಅರಿವು ಮೂಡಿಸಿದರು.ಸಹಾಯಕ ನಿರ್ದೇಶಕರು, ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳು , ನರೇಗಾ ತಾಂತ್ರಿಕ ಸಹಾಯಕ ಎಂಜಿನಿಯರ್, ಬಿಎಫ್‌ಟಿ ಮತ್ತು ಎನ್‌ಆರ್‌ಎಲ್‌ಎಂ ಸದಸ್ಯರು ಹಾಜರಿದ್ದರು.