ಸ್ವೀಪ್ ವತಿಯಿಂದ ವಿವಿಧೆಡೆ ಮತದಾನ ಜಾಗೃತಿ

| Published : Apr 01 2024, 12:54 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಚುನಾವಣೆ ಸಂಬಂಧ, ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾದ ಬೂತ್ ಸಂಖ್ಯೆ, 26 ರ ಹಳೆ ಬೊಮ್ಮನಕಟ್ಟೆಯಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಸ್ವೀಪ್ ವತಿಯಿಂದ ಮತದಾನದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪುರುಷರು ಮತ್ತು ಮಹಿಳೆಯರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ಪಾಸ್ ಇನ್ ದ ಬಾಲ್ ಆಟ ಆಡಿಸುವ ಮೂಲಕ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆ ಹಿನ್ನೆಲೆ ಶನಿವಾರ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಲವಡೆ ಮತದಾನ ಜಾಗೃತಿ ಮೂಡಿಸಲಾಯಿತು.

ಸೊರಬ ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿಗಳು ಕಚೇರಿಯ ಎಲ್ಲ ಸಿಬ್ಬಂದಿ, ಪೌರಕಾರ್ಮಿಕರು ಮತ್ತು ನೀರು ಸರಬರಾಜು ಸಿಬ್ಬಂದಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿ, ಸಾರ್ವಜನಿಕರಲ್ಲಿ ಮತದಾನ ಕುರಿತು ಅರಿವು ಮೂಡಿಸುವಂತೆ ತಿಳಿಸಿದರು.ಆಗುಂಬೆಯಲ್ಲಿ ಮತದಾನ ಜಾಗೃತಿ

ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಗುಂಬೆ ಭಾಗದಲ್ಲಿ ಚುನಾವಣೆ ಪ್ರಕ್ರಿಯೆ, ಮತದಾನದ ಮಹತ್ವ ಮತ್ತು ಜವಾಬ್ದಾರಿ ಕುರಿತು ಕಾರ್ಯಾಗಾರ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಕಾರ್ಯಾಗಾರದಲ್ಲಿ ಮತದಾರರಿಗೆ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ಸೊರಬ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶೈಲಾ ಎನ್, ಪಿಡಿಒ ಲಕ್ಷ್ಮೀ ಇತರರಿದ್ದರು.

ಇದೇ ಸಂದರ್ಭ ಎಸ್‍ವಿಎಸ್ ಪ್ರೌಢಶಾಲೆಯಲ್ಲಿ ಭಾರತ ನಕ್ಷೆ ಬಿಡಿಸಿ ಕ್ಯಾಂಡಲ್ ಹಚ್ಚಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು.

ಬೊಮ್ಮನಕಟ್ಟೆಯಲ್ಲಿ ಮತದಾನ ಜಾಗೃತಿ

ಶಿವಮೊಗ್ಗ ಲೋಕಸಭಾ ಚುನಾವಣೆ ಸಂಬಂಧ, ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾದ ಬೂತ್ ಸಂಖ್ಯೆ, 26 ರ ಹಳೆ ಬೊಮ್ಮನಕಟ್ಟೆಯಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಸ್ವೀಪ್ ವತಿಯಿಂದ ಮತದಾನದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪುರುಷರು ಮತ್ತು ಮಹಿಳೆಯರಿಗೆ, ಸ್ವಸಹಾಯ ಸಂಘದ ಸದಸ್ಯರಿಗೆ ಪಾಸ್ ಇನ್ ದ ಬಾಲ್ ಆಟ ಆಡಿಸುವ ಮೂಲಕ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಲಾಯಿತು.

ಜಾಗೃತಿ ಕಾರ್ಯಕ್ರಮದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ ಟಿ.ಆರ್, ಸುಪ್ರಿಯಾ, ರತ್ನಾಕರ್, ರೇಣು. ಗೀತಾ ಮತ್ತು ಅಧಿಕಾರಿ ಸಿಬ್ಬಂದಿ, ಬಿಎಲ್ ಒ ಮತ್ತು ಮೇಲ್ವಿಚಾರಕರು, ಹಾಜರಿದ್ದರು.

ಅಕ್ರಮ ಮದ್ಯ ವಶ

ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟ ಪರಿಶೀಲಿಸಲಾಗುತ್ತಿದ್ದು, ಶನಿವಾರ ಪೊಲೀಸ್ ಇಲಾಖೆ ವತಿಯಿಂದ 1400 ರು. ಮೊತ್ತದ 3.15 ಲೀಟರ್‌, ಅಬಕಾರಿ ಇಲಾಖೆಯಿಂದ 6420 ರು.ಮೊತ್ತದ 12.84 ಲೀಟರ್‌ ಒಟ್ಟು 7820 ರು. ಮೌಲ್ಯದ 15.99 ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.