ಮಂಗಳ ಮುಖಿಯವರಿಂದ ಮತದಾನ ಜಾಗೃತಿ

| Published : Apr 06 2024, 12:48 AM IST

ಸಾರಾಂಶ

ದೇಶ ಸ್ವಾತಂತ್ರ್ಯವಾದ ನೈಜತೆ ಮತ್ತು ಪಾರದರ್ಶಕವಾದ ಪ್ರಜಾಪ್ರಭುತ್ವದ ಆಡಳಿತವನ್ನು ಹೊಂದಿದ್ದು, ಬಲಿಷ್ಠವಾದ ರಾಷ್ಟ ನಿರ್ಮಾಣಕ್ಕೆ ನಾವೆಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ಮಂಗಳ ಮುಖಿ ಮಧು ತಿಳಿಸಿದರು.

ತುರ್ವಿಹಾಳ: ದೇಶ ಸ್ವಾತಂತ್ರ್ಯವಾದ ನೈಜತೆ ಮತ್ತು ಪಾರದರ್ಶಕವಾದ ಪ್ರಜಾಪ್ರಭುತ್ವದ ಆಡಳಿತವನ್ನು ಹೊಂದಿದ್ದು, ಬಲಿಷ್ಠವಾದ ರಾಷ್ಟ ನಿರ್ಮಾಣಕ್ಕೆ ನಾವೆಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ಮಂಗಳ ಮುಖಿ ಮಧು ಅವರು ಏಳು ಮೇಲ್ ಕ್ಯಾಂಪ್‌ನಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಲು ತಪ್ಪದೇ ಶೇ.100ರಷ್ಟು ಮತದಾನ ಮಾಡೋಣ ಎಂದರು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವಂತ ಜವಾಬ್ದಾರಿ ಕೆಲಸವನ್ನು ಮಾಡುತ್ತೇನೆ ಎಂದುರು.

ನಂತರ ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕ ವೀರಭದ್ರಗೌಡ ಗಚ್ಚಿನಮನಿ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಮಂಗಳಮುಖಿ ತಂಡದ ನಾಯಕಿ ಜಮಲಮ್ಮ, ಕಾವೇರಿ, ಶಿಲ್ಪಾ, ಕಾಂಚನ, ಅನಿತಾ ಹಾಗೂ ಅಕ್ಷರ ದಾಸೋಹ ತಾಲೂಕು ಅಧಿಕಾರಿ ಶ್ಯಾಮಣ್ಣ ವಗ್ಗರ, ಆರ್ಡಬ್ಲ್ಯೂಎಸ್ ತಂಡದ ಶಾಂತಮೂರ್ತಿ, ಐಇಸಿ ಸಂಯೋಜಕ ಥಾಮಸ್, ದಡೆಸಗೂರು ಮುಖ್ಯ ಶಿಕ್ಷಕಿ ಚಂದ್ರ ಮುಖಿ ಇದ್ದರು.