ಬೀದಿಬದಿ ವ್ಯಾಪಾರಿಗಳಿಗೆ ಮತದಾನ ಜಾಗೃತಿ

| Published : Apr 30 2024, 02:03 AM IST

ಬೀದಿಬದಿ ವ್ಯಾಪಾರಿಗಳಿಗೆ ಮತದಾನ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ ತಾಲೂಕು ಸ್ವೀಪ್‌ ಸಮಿತಿ, ಮುಧೋಳ ನಗರಸಭೆ ವತಿಯಿಂದ ಕರಪತ್ರ ಹಂಚುವ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮುಧೋಳ

ತಾಲೂಕು ಸ್ವೀಪ್‌ ಸಮಿತಿ, ಮುಧೋಳ ನಗರಸಭೆ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕರಪತ್ರ ಹಂಚುವ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.ನಗರದ ಬೀದಿಬದಿ ವ್ಯಾಪಾರಿಗಳು ಲೋಕಸಭೆ ಚುನಾವಣೆ ನಿಮಿತ್ತ ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುವಂತೆ ಸಹಾಯಕ ಚುನಾವಣಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ನಗರಸಭೆ ಪೌರಾಯುಕ್ತೆ ಸಂಗೀತಾ ಕಲಬುರ್ಗಿ ಮನವಿ ಮಾಡಿದರು. ಕಚೇರಿ ವ್ಯವಸ್ಥಾಪಕಿ ಭಾರತಿದೇವಿ ಜೋಶಿ ಹಾಗೂ ಸಿಬ್ಬಂದಿ ಇದ್ದರು.