ಬೀದಿ ನಾಟಕ ಮೂಲಕ ಮತದಾನ ಜಾಗೃತಿ

| Published : Apr 26 2024, 12:51 AM IST

ಸಾರಾಂಶ

ಬಾದಾಮಿ ತಾಲೂಕಿನ ಗೋವಿನಕೊಪ್ಪದ ಆದಿಶಕ್ತಿ ಸಂಸ್ಕೃತಿಕ ಜನಪದ ಮಹಿಳಾ ಕಲಾ ತಂಡದವರು ತೇರದಾಳ ಪಟ್ಟಣದ ಗುಡ್ಡಿ ಗಲ್ಲಿ, ದೇವರಾಜ ನಗರ, ದಾಸರ ಮಡ್ಡಿ, ಪೇಠಭಾಗ, ಪ್ರಭು ಮಹಾದ್ವಾರ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಕೈ ಕೂಡ ಬೆಚ್ಚಗಾಗಿಲ್ಲ, ಬಾಯಿಯೂ ಬೆಚ್ಚಗಾಗಿಲ್ಲ. ಹಿಂಗಾದ್ರ ನಾವೇನ ಮತ ಹಾಕೋದಿಲ್ಲ, ಏ ತಮ್ಮಾ ಏ ತಂಗಿ, ಕೈ-ಬಾಯಿ ಬೆಚ್ಚಗಾದರಷ್ಟೇ ಮತ ಹಾಕಬೇಕೇನು. ಜಗತ್ತಿನಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವಕ್ಕ ಹೆಸರಾಗಿದೆ. ಯಾವುದೇ ಆಸೆ-ಆಮಿಷಗಳಿಗೆ ಬಲಿ ಆಗಬಾರದು. ವಿಚಾರ ಮಾಡಿ ಒಳ್ಳೆಯ ಪ್ರತಿನಿಧಿಗೆ ಮತ ಹಾಕಬೇಕು. ತಪ್ಪದೆ ಮತದಾನ ಮಾಡಿ ಭದ್ರ ಭಾರತ ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ...ಪಟ್ಟಣದ ವಿವಿಧೆಡೆಯಲ್ಲಿ ಮತದಾನ ಜಾಗೃತಿಗೆ ಪ್ರದರ್ಶನಗೊಳ್ಳುತ್ತಿರುವ ಬೀದಿನಾಟಕದ ಸಂದೇಶವಿದು. ಬಾದಾಮಿ ತಾಲೂಕಿನ ಗೋವಿನಕೊಪ್ಪದ ಆದಿಶಕ್ತಿ ಸಂಸ್ಕೃತಿಕ ಜನಪದ ಮಹಿಳಾ ಕಲಾ ತಂಡದವರು ಪಟ್ಟಣದ ಗುಡ್ಡಿ ಗಲ್ಲಿ, ದೇವರಾಜ ನಗರ, ದಾಸರ ಮಡ್ಡಿ, ಪೇಠಭಾಗ, ಪ್ರಭು ಮಹಾದ್ವಾರ ಬಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಾಲಿನಿ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಭರಮು ದನಗರ, ಗೌರಿ ಮಾಲಾಪೂರ, ಪ್ರವೀಣ ದಾನಿಗೊಂಡ ಸೇರಿದಂತೆ ಹಲವರು ಇದ್ದರು.