ಶಸ್ತ್ರಚಿಕಿತ್ಸೆ ಒಳಗಾಗಬೇಕಿದ್ದ ವ್ಯಕ್ತಿಯಿಂದ ಮತದಾನ

| Published : Apr 27 2024, 01:01 AM IST

ಶಸ್ತ್ರಚಿಕಿತ್ಸೆ ಒಳಗಾಗಬೇಕಿದ್ದ ವ್ಯಕ್ತಿಯಿಂದ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯಲ್ಲಿ ತೆರದ ಹೃದಯ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 63 ವರ್ಷದ ನಾಸಿರ್ ಅಲಿ ಖಾನ್‌ ತುಮಕೂರು ನಗರದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ತುಮಕೂರು: ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆಯಲ್ಲಿ ತೆರದ ಹೃದಯ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 63 ವರ್ಷದ ನಾಸಿರ್ ಅಲಿ ಖಾನ್‌ ತುಮಕೂರು ನಗರದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಆಸ್ಪತ್ರೆಯಲ್ಲಿ ಏ. 20 ರಿಂದ ಹೃದಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ನಾಸಿರ್ ಅಲಿ ಖಾನ್‌ಗೆ ಶುಕ್ರವಾರ ಓಪನ್‌ ಹಾರ್ಟ್ ಸರ್ಜರಿಗೆ ಒಳಗಾಗಬೇಕಿತ್ತು. ಆದರೆ ಅವರು ಮತದಾನದಲ್ಲಿ ಭಾಗವಹಿಸಬೇಕೆಂಬ ಮಹದಾಸೆ ವ್ಯಕ್ತಪಡಿಸಿದ್ದರಿಂದ ಹೃದಯತಜ್ಞ ಡಾ.ತಮೀಮ್‌ ಅಹಮ್ಮದ್‌ ಎಲ್ಲ ರೀತಿ ವೈದ್ಯಕೀಯ ನೆರವು ನೀಡಿದರು. ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದ್ದರಿಂದ ನಗರದ ಕುರಿಪಾಳ್ಯದ ಮತಗಟ್ಟೆ ಸಂಖ್ಯೆ 82 ರಲ್ಲಿ ಬಂಧುಗಳ ಸಹಾಯದಿಂದ ಮತ ಚಲಾಯಿಸಿದರು.