ನೂತನ ದಂಪತಿಗಳಿಂದ ಮತಚಲಾವಣೆ

| Published : Apr 27 2024, 01:00 AM IST / Updated: Apr 27 2024, 01:01 AM IST

ನೂತನ ದಂಪತಿಗಳಿಂದ ಮತಚಲಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಪದ ವಿಜಾಪುರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಕಾಲಿಟ್ಟ ಅರುಣ್ ಮತ್ತು ಕಾವ್ಯ ಮತಚಲಾವಣೆ ಮಾಡಿ ಮಾದರಿಯಾಗಿದ್ದಾರೆ.

ಸಿರಿಗೆರೆ: ಸಮೀಪದ ವಿಜಾಪುರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಕಾಲಿಟ್ಟ ಅರುಣ್ ಮತ್ತು ಕಾವ್ಯ ಮತಚಲಾವಣೆ ಮಾಡಿ ಮಾದರಿಯಾಗಿದ್ದಾರೆ. ಮಾಂಗಲ್ಯಸೂತ್ರ ಧಾರಣೆ ನಂತರ ಮತಗಟ್ಟೆ 13ಕ್ಕೆ ತೆರಳಿ ಸರತಿ ಸಾಲಿನಲ್ಲಿನಿಂತು ಇಬ್ಬರೂ ಮತ ಚಲಾಯಿಸಿದ್ದಾರೆ. ಅರುಣ್ ಮತ್ತು ಕಾವ್ಯ ಇಬ್ಬರೂ ವಿಜಾಪುರ ಗ್ರಾಮದವರು.

ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿಯ ಮತಗಟ್ಟೆ ಸಂಖ್ಯೆ ೭೮ರಲ್ಲಿ ಮತದಾನದ ದಿನದಂದೇ ಮದುವೆಯಾದ ನವಜೋಡಿಯೊಂದು ವಿವಾಹ ಕಾರ್ಯದ ಜೊತೆಯಲ್ಲೇ ಮತದಾನ ಮಾಡುವ ಮೂಲಕ ಮತದಾನ ಮೌಲ್ಯ ಎತ್ತಿ ಹಿಡಿದಿದ್ದಾರೆ. ಅಶೋಕ ಸ್ಪೋರ್ಟ್ ಕ್ಲಬ್ ಸಂಸ್ಥಾಪಕ ನಾರಾಯಣ ಮೋಹಿತೆಯವರ ಪುತ್ರ, ದೈಹಿಕ ಶಿಕ್ಷಕ ಅಶೋಕ್‌ ಮೋಹಿತೆ ಮತದಾನ ದಿನದಂದೇ ಮದುವೆಯಾಗಿ ಮದುವೆ ಶಾಸ್ತ್ರ ಮುಗಿಸಿಕೊಂಡು ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ತನ್ನ ಮತದಾನದ ಮಹತ್ವವನ್ನು ಸಾರಿದ್ದು, ಪತ್ನಿ ಸುಶ್ಮಿತಳೊಂದಿಗೆ ಆಗಮಿಸಿ ಮತಚಲಾಯಿಸಿದ್ದಾರೆ.