ವಿಪ ಚುನಾವಣೆ: 3ರಂದು 6 ಸ್ಥಾನಗಳಿಗೆ ಮತದಾನ

| Published : Jun 01 2024, 12:46 AM IST

ವಿಪ ಚುನಾವಣೆ: 3ರಂದು 6 ಸ್ಥಾನಗಳಿಗೆ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಜೂನ್ 3ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

- ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಜೂನ್ 3ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರ ಅಭ್ಯರ್ಥಿಗಳ ವಿವರ:

ಡಾ. ವೈ.ಎ.ನಾರಾಯಣಸ್ವಾಮಿ- ಭಾರತೀಯ ಜನತಾ ಪಾರ್ಟಿ, ಡಿ.ಟಿ.ಶ್ರೀನಿವಾಸ್- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಕಿಶನ್ ಎಂ.ಜಿ- ಕರ್ನಾಟಕ ರಾಷ್ಟ್ರ ಸಮಿತಿ, ಪಕ್ಷೇತರರಾಗಿ ಡಾ. ಜಿ.ಎಚ್.ಇಮ್ರಾಪೂರ, ಕಪನಿಗೌಡ, ಎನ್.ಈ ನಟರಾಜ, ವೈ.ಆರ್. ನಾರಾಯಣಸ್ವಾಮಿ, ವೈ.ಎಂ. ನಾರಾಯಣಸ್ವಾಮಿ, ವೈ.ಸಿ. ನಾರಾಯಣಸ್ವಾಮಿ, ಬಾಬು ಯೋಗೀಶ್ ಆರ್., ಲೋಕೇಶ್ ತಾಳಿಕಟ್ಟೆ, ವನಿತಾ ಎಸ್., ವಿನೋದ್ ಶಿವರಾಜ್, ಶ್ರೀನಿವಾಸ ಬಿ., ಸೈಯದ್ ಆಫಾಖ್ ಅಹಮದ್ ಚುನಾವಣಾ ಕಣದಲ್ಲಿದ್ದಾರೆ.

ನೈಋತ್ಯ ಶಿಕ್ಷಕರ ಕ್ಷೇತ್ರ:

ಎಸ್.ಎಲ್.ಭೋಜೆಗೌಡ- ಜನತಾದಳ, ಡಾ. ಕೆ.ಕೆ.ಮಂಜುನಾಥ್ ಕುಮಾರ್- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಪಕ್ಷೇತರರಾಗಿ ಡಾ.ಅರುಣ್ ಹೊಸಕೊಪ್ಪ, ಡಾ.ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಭಾಸ್ಕರ ಶೆಟ್ಟಿ ಟಿ., ಕೆ.ಕೆ.ಮಂಜುನಾಥ್ ಕುಮಾರ್, ಪಕ್ಷೇತರ, ಡಾ. ಎಸ್.ಆರ್. ಹರೀಶ್ ಆಚಾರ್ಯ ಚುನಾವಣಾ ಕಣದಲ್ಲಿದ್ದಾರೆ.

ನೈಋತ್ಯ ಪದವೀಧರರ ಕ್ಷೇತ್ರ:

ಆಯನೂರು ಮಂಜುನಾಥ- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಡಾ.ಧನಂಜಯ ಸರ್ಜಿ- ಬಿಜೆಪಿ, ಜಿ.ಸಿ.ಪಾಟೀಲ್- ಸರ್ವ ಜನತಾ ಪಾರ್ಟಿ, ಪಕ್ಷೇತರರಾಗಿ ದಿನಕರ ಉಳ್ಳಾಲ್, ಎಸ್.ಪಿ.ದಿನೇಶ್, ಬಿ.ಮಹಮ್ಮದ್ ತುಂಬೆ, ಕೆ.ರಘುಪತಿ ಭಟ್, ಡಾ.ಶೇಕ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ ಚುನಾವಣಾ ಕಣದಲ್ಲಿದ್ದಾರೆ.

- - - ಬಾಕ್ಸ್‌ ಜಿಲ್ಲಾ ಸಹಾಯವಾಣಿ ಕೇಂದ್ರ ಸ್ಥಾಪನೆ ದಾವಣಗೆರೆ: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಮತದಾರರ ಸಹಾಯಕ್ಕೆ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆ ವ್ಯಾಪ್ತಿಯಲ್ಲಿನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲೂಕುಗಳ ಶಿಕ್ಷಕ ಮತದಾರರು ಹಾಗೂ ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಮತದಾರರಿಗೆ ಸಹಕರಿಸುವ ನಿಟ್ಟಿನಲ್ಲಿ 24*7 ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.

ಮತದಾರರು ಅಗತ್ಯ ಮಾಹಿತಿಯನ್ನು ಟೋಲ್ ಫ್ರೀ 18004250380 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

- - - (* ಸಾಂದರ್ಭಿಕ ಚಿತ್ರ)

(ಮೇಲ್ಮನೆ ಚುನಾವಣೆ)