ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಿಧಾನಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ. 23ರಂದು ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ.
ಧಾರವಾಡ:
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಿಧಾನಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ. 23ರಂದು ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಹಾಗೂ ಕಾಂಗ್ರೆಸ್ಸಿನ ಮೋಹನ ಲಿಂಬಿಕಾಯಿ ಸೇರಿದಂತೆ 14 ಜನ ಅಭ್ಯರ್ಥಿಗಳಿದ್ದು, ಅವರ ಭವಿಷ್ಯ ಈ ಮತದಾನದ ಮೂಲಕ ಬಹಿರಂಗವಾಗಬೇಕಿದೆ.ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 97,398 ಮತದಾರರಿದ್ದಾರೆ. ಚುನಾವಣೆಯನ್ನು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಒಟ್ಟು 137 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 128 ಮುಖ್ಯ ಮತಗಟ್ಟೆ ಹಾಗೂ 9 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಮತದಾನ ಕಾರ್ಯಕ್ಕೆ ಅಗತ್ಯವಿರುವ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ನಿಯೋಜಿಸಲಾಗಿದೆ.
ಗುರುವಾರ ಎಲ್ಲ ಮತಗಟ್ಟೆ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದ್ದಾರೆ. ಆಯಾ ಅಭ್ಯರ್ಥಿಗಳು ತಮ್ಮ ಏಜೆಂಟರನ್ನು ಸಹ ನಿಯೋಜಿಸಿದ್ದಾರೆ. ಅವರಿಗೆ ಬೇಕಾದ ಸೂಚನೆಗಳನ್ನು ಚುನಾವಣಾ ಆಯೋಗವು ಸ್ಪಷ್ಟವಾಗಿ ನೀಡಿದೆ ಎಂದು ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಮಾಹಿತಿ ನೀಡಿದರು.14 ಜನ ಅಭ್ಯರ್ಥಿಗಳು:
ಬಿಜೆಪಿಯ ಎಸ್.ವಿ. ಸಂಕನೂರ, ಕಾಂಗ್ರೆಸ್ಸಿನಿಂದ ಮೋಹನ ಲಿಂಬಿಕಾಯಿ, ಪಕ್ಷೇತರ ಅಭ್ಯರ್ಥಿಗಳಾಗಿ ನಿಶಾಂತ ಬಂಕಾಪೂರ, ಮಲ್ಲಿಕಾರ್ಜುನ ಗಂಗಾಧರ, ತಳವಾರ ಶಿವಕುಮಾರ, ಕಾಂತಕುಮಾರ, ಬಸವರಾಜ ಕೊಟಗಿ, ಜಿಶಾನ ಪಠಾಣ, ಸಂತೋಷ ವೆರ್ಣೇಕರ, ಉಮೇಶ ದೈವಜ್ಞ, ಕೃಷ್ಣ, ಜಿಶಾನ ಸಿರಸಂಗಿ, ಅಬ್ದುಲ ಮುನ್ನನ, ಜಿ.ಎಚ್. ಇಮ್ರಾಪುರ ಅಂತಿಮ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ. ಎಲ್ಲ ಅಭ್ಯರ್ಥಿಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಯಾರಿಗೆ ವಿಜಯಲಕ್ಷ್ಮೀ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಮತದಾನ ನಂತರ ನಾಲ್ಕು ಜಿಲ್ಲೆಗಳ ಮತಪೆಟ್ಟಿಗೆಗಳನ್ನು ಧಾರವಾಡದ ಕೃಷಿ ವಿವಿಗೆ ತಂದು ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ. ಅ. 27ರಂದು ಮತ ಏಣಿಕೆಯನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುತ್ತದೆ. ಹೀಗೆ ಮತ ಹಾಕಿ....ಈ ಚುನಾವಣೆಯು ಮತಪತ್ರಗಳ ಮೂಲಕ ನಡೆಯಲಿದ್ದು, ಮತದಾರರು ಜಾಗೃತೆಯಿಂದ ಮತ ಹಾಕಬೇಕು. ಮೇಲಿನ ಯಾರೂ ಅಲ್ಲ (ನೋಟಾ) ಆಯ್ಕೆಯ ಅವಕಾಶ ಇಲ್ಲ. ಕಳೆದ ಚುನಾವಣೆಯಲ್ಲಿ ಸುಮಾರು 8,000 ಮತಗಳು ಅಸಿಂಧುವಾಗಿದ್ದವು. ಬ್ಯಾಲೆಟ್ ಪೇಪರ್ ಮೇಲೆ ಮತದಾರರು ತಮ್ಮ ಆದ್ಯತೆಯನ್ನು 1, 2, 3 ಎಂದು ಸಂಖ್ಯೆಗಳಲ್ಲಿ ಅಥವಾ ರೋಮನ್ ಅಂಕಿಗಳಲ್ಲಿ / ಕನ್ನಡ ಸಂಖ್ಯೆಗಳಲ್ಲಿ) ಮಾತ್ರ ಬರೆಯಬೇಕು. ಬ್ಯಾಲೆಟ್ ಪೇಪರ್ ಮೇಲೆ ಬೇರೆ ಯಾವುದೇ ರೀತಿಯ ಹೆಸರು, ''''''''''''''''one'''''''''''''''', ಅಥವಾ ಇನ್ಯಾವುದೇ ಬರಹಗಳನ್ನು ಬರೆಯುವಂತಿಲ್ಲ, ಹಾಗೆ ಬರೆದರೆ ಆ ಮತಗಳು ಅಸಿಂಧುಗೊಳ್ಳುತ್ತವೆ.