ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಇದೇ ಅ. 23 ರಂದು ಮತದಾನ ನಡೆಯಲಿದ್ದು ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡಿವೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಇದೇ ಅ. 23 ರಂದು ಮತದಾನ ನಡೆಯಲಿದ್ದು ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡಿವೆ.ಚುನಾವಣಾ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಕಲಬುರಗಿ ವಿಭಾಗದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಬರಲಿವೆ. ಅ.23 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಆಯೋಗವು ನಿಗದಿಪಡಿಸಿರುವ 14 ದಾಖಲೆಗಳಲ್ಲಿ ಒಂದನ್ನುತೋರಿಸಿ ಮತ ಚಲಾಯಿಸಬಹುದಾಗಿದೆ.ನಿಷ್ಪಕ್ಷಪಾತ, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚನಾವಣೆ ನಡೆಸಲು ಅ. 23ರಂದು ನಡೆಯುವ ಮತದಾನ ಮತ್ತು ಅ. 27 ರಂದು ನಡೆಯುವ ಮತ ಎಣಿಕೆಗೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.*34,784 ಮತದಾರರು, ಕಲಬುರಗಿಲೇ ಗರಿಷ್ಠ: ಈಶಾನ್ಯ ಶಿಕ್ಷಕರ ಕ್ಷೇತ್ರದಾದ್ಯಂತ ಪುರುಷ 20,040 ಹಾಗೂ ಮಹಿಳಾ 14,744 ಸೇರಿದಂತೆ ಒಟ್ಟು 34,784 ಮತದಾರರು ಮತ ಚಲಾವಣೆಗೆ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 1,813 ಪುರುಷ, 1,580 ಮಹಿಳೆ ಸೇರಿ 3,393, ವಿಜಯನಗರ ಜಿಲ್ಲೆಯಲ್ಲಿ 2,190 ಪುರುಷ, 1,136 ಮಹಿಳೆ ಸೇರಿ 3,326, ಬೀದರ ಜಿಲ್ಲೆಯಲ್ಲಿ 3,794 ಪುರುಷ, 3,244 ಮಹಿಳೆ ಸೇರಿ 7,038, ಕಲಬುರಗಿ ಜಿಲ್ಲೆಯಲ್ಲಿ 5,672 ಪುರುಷ, 4,980 ಮಹಿಳೆ ಸೇರಿ 10,652, ಯಾದಗಿರಿ ಜಿಲ್ಲೆಯಲ್ಲಿ 1,548 ಪುರುಷ, 711 ಮಹಿಳೆ ಸೇರಿ 2,259, ಕೊಪ್ಪಳ ಜಿಲ್ಲೆಯಲ್ಲಿ 1,845 ಪುರುಷ, 869 ಮಹಿಳೆ ಸೇರಿ 2,714 ಹಾಗೂ ರಾಯಚೂರು ಜಿಲ್ಲೆಯಲ್ಲಿ 3,178 ಪುರುಷ, 2,224 ಮಹಿಲೆ ಸೇರಿ 5,402 ಮತದಾರರು ಇದ್ದಾರೆ.

* 144 ಮತಗಟ್ಟೆ ಸ್ಥಾಪನೆ: ಕಲಬುರಗಿ-40, ಬೀದರ-33, ರಾಯಚೂರು-16, ಬಳ್ಳಾರಿ-9, ಕೊಪ್ಪಳ-20, ಯಾದಗಿರಿ-8, ವಿಜಯನಗರ-18 ಮತಗಟ್ಟೆಗಳು ಸೇರಿದಂತೆ ಕ್ಷೇತ್ರದಾದ್ಯಂತ ಒಟ್ಟು 144 ಮತಗಟ್ಟೆಗಳು ಸ್ಥಾಪಿಸಲಾಗಿದೆ. ಅ.27ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಹಾಲ್‌ನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಹೀರಾ ನಸೀಮ್ ತಿಳಿಸಿದರು.ಈ ಚುನಾವಣೆಯಲ್ಲಿ ಮತದಾನವು ಮತಪತ್ರ ಮುಖಾಂತರ ಪ್ರಾಶಸ್ತ ಮತ ನೀಡಲು ಅವಕಾಶವಿದ್ದು, ನೋಟಾಗೆ ಅವಕಾಶವಿಲ್ಲ. ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗೂ ಪ್ರಾಶಸ್ತ್ಯದ ರೂಪದಲ್ಲಿ ಮತದಾರ ಮತ ನೀಡಬಹುದು. ಪ್ರಾಶಸ್ತ್ಯ ಮತ ನೀಡುವಾಗ ಕ್ರಮ ಸಂಖ್ಯೆ ಕೈಬಿಟ್ಟು ಚಲಾಯಿಸಿದ ನಂತರದ ಮತಗಳು ಅಮಾನ್ಯವಾಗಲಿದ್ದು, ಮತದಾರರು ಇದನ್ನು ಮುಖ್ಯವಾಗಿ ಗಮನಿಸಬೇಕು. ಇನ್ನು ಮತಪತ್ರದಲ್ಲಿ ಆಯೋಗದಿಂದ ನೀಡಲಾಗಿರುವ ನೆರಳೆ ಬಣ್ಣದ (Violet sketch Pen) ಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ ಮತ ಚಲಾಯಿಸಬೇಕು. ಬೇರೆ ಇತರೆ ಬಣ್ಣದ ಪೆನ್ನಿನಿಂದ ಮತ ಚಲಾಯಿಸಿದ್ದಲ್ಲಿ ಹಾಗೂ ಗುರುತುಗಳನ್ನೊಳಗೊಂಡ ಚಲಾಯಿಸಲಾದ ಮತಗಳು ಅಮಾನ್ಯಗೊಳ್ಳಲಿವೆ. ಅಭ್ಯರ್ಥಿಗಳು ತಮ್ಮ ಮತಗಟ್ಟೆ ಏಜೆಂಟರನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವಿವರ ಸಲ್ಲಿಸುವ ಮೂಲಕ ನೇಮಕ ಮಾಡಿಕೊಳ್ಳಬಹುದು. ಮತದಾನ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಮತದಾನದ ದಿನ ಮದ್ಯ ಮಾರಾಟ ಹಾಗೂ ಸೇವನೆ ನಿಷೇಧಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಹೀರಾ ನಸೀಮ್‌ ತಿಳಿಸಿದರು.13 ಅಭ್ಯರ್ಥಿಗಳ ವಿವರ ಹೀಗಿದೆಹೆಸರುಪಕ್ಷ

ಶರಣಪ್ಪ ಮಟ್ಟೂರಕಾಂಗ್ರೆಸ್‌ ಶಶಿಲ್‌ ನಮೋಶಿಬಿಜೆಪಿ

ಸಾಯಬಣ್ಣಾಆಮ್‌ ಆದ್ಮಿ ಪಕ್ಷ

ಶಂಕರೆಡ್ಡಿ ಪಾಟೀಲಜನತಾದಳ (ಸಂಯುಕ್ತ) ಪಕ್ಷೇತರ

ಕವಿರಾಜ

ತುಳಸಪ್ಪ ದಾಸರ

ಮಹಬೂಬ್ ವಂಟೇಲಿ

ರಾಜಕುಮಾರ

ರಾಜು ದೇವಪ್ಪ

ಶರಣಬಸಪ್ಪ ಪೀರಪ್ಪ

ಶಶಿಧರ

ಶಿವಶಂಕರ

ಡಾ.ಸುರೇಶ