ಪ್ರಜಾಪ್ರಭುತ್ವದಲ್ಲಿ ಮತದಾನ ದೊಡ್ಡ ಆಯುಧ: ವಿ.ಪ್ರಕಾಶ

| Published : Apr 26 2024, 12:46 AM IST

ಸಾರಾಂಶ

ರ್ಕಾರದ ಯೋಜನೆಗಳು ಹಾಗೂ ಸೌಲಭ್ಯ ಪಡೆಯುವ ಜನರು ಮತದಾನದಿಂದ ದೂರ ಉಳಿಯಬಾರದು, ಅರ್ಹ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ಮತದಾನ ಮಹತ್ವಕ್ಕೆ ಶಕ್ತಿ ತುಂಬಬೇಕು

ಸಿರವಾರ : ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಕೊಟ್ಟಿರುವ ದೊಡ್ಡ ಆಯುಧವೇ ಮತದಾನವಾಗಿದ್ದು, ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರಿಯಾಗೋಣ ಎಂದು ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವಿ.ಪ್ರಕಾಶ ಹೇಳಿದರು.

ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ತಾಪಂ, ಗ್ರಾಪಂ ಸಂಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯ ಪಡೆಯುವ ಜನರು ಮತದಾನದಿಂದ ದೂರ ಉಳಿಯಬಾರದು, ಅರ್ಹ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ಮತದಾನ ಮಹತ್ವಕ್ಕೆ ಶಕ್ತಿ ತುಂಬಬೇಕು ಎಂದರು.

ಮೇ.7ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೆ ನಿರ್ಭಯವಾಗಿ ಮಾತದಾನ ಮಾಡಬೇಕು ಎಂದು ಕರೆ ನೀಡಿದರು. ತಾಪಂ ಇಒ ಅಧಿಕಾರಿ ಬಸವರಾಜ ಶರಭೈ ಮಾತನಾಡಿದರು. ಕೂಲಿಕಾರರಿಗೆ ಮತದಾನ ಕುರಿತು ಪ್ರತಿಜ್ಞೆ ವಿಧಿಬೋಧನೆ ಮಾಡಿ ಬಲೂನ್ ಹಾರಿ ಬಿಡಲಾಯಿತು.

ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಗೇರಾ, ಸಹಾಯಕ ನಿರ್ದೇಶಕ (ಪಂ.ರಾ) ಬಸವರಾಜ, ಪಿಡಿಒ ದೇವಪ್ಪ, ವಸತಿ ನೋಡಲ್ ಅಧಿಕಾರಿ ಗೋಪಾಲ, ಲೆಕ್ಕಾ ವ್ಯವಸ್ಥಾಪಕ ಬಸವರಾಜ, ತಾಂತ್ರಿಕ ಸಂಯೋಜಕ ವಿನೋದ ಕುಮಾರ, ತಾಂತ್ರಿಕ ಸಹಾಯಕ ಅನಂತರೆಡ್ಡಿ, ಐಇಸಿ ಸಂಯೋಜಕ ರಾಜೇಂದ್ರ ಕುಮಾರ, ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕ ಉಮೇಶ, ಸುನೀತಾ, ಶ್ರೀಧರ, ಗ್ರಾಪಂ ಸಿಬ್ಬಂದಿ, ಮೇಟ್, ಕೂಲಿಕಾರರು ಭಾಗವಹಿಸಿದ್ದರು.