ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮನೆಯಿಂದ ಮತದಾನಕ್ಕೆ ಏಪ್ರಿಲ್ 13 ರಿಂದ 18ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ ತಿಳಿಸಿದರು.ಮಹಾನಗರ ಪಾಲಿಕೆಯ ಆಯುಕ್ತರ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಮತದಾರರು ಹಾಗೂ 40% ಅಂಗವೈಕಲ್ಯ ಹೊಂದಿರುವವರಿಗೆ ಮನೆಯಿಂದಲೇ ಮತದಾನ ಮಾಡಲು ಫಾರಂ12ರ ಮೂಲಕ ಅವಕಾಶ ಮಾಡಿಕೊಟ್ಟಿದ್ದೆವು. ಅದರಲ್ಲಿ 43 ವಿಶೇಷ ಚೇತನ ಮತದಾರರು ಹಾಗೂ ೮೫ ವರ್ಷ ಮೇಲ್ಪಟ್ಟ 337 ಮತದಾರರು ಸೇರಿ ಒಟ್ಟು 380 ಮತದಾರರು ಮನೆಯಿಂದಲೇ ಮತದಾನ ಮಾಡುತ್ತಿದ್ದಾರೆ ಎಂದರು.ಒಟ್ಟಾರೆ 380 ಮತದಾರರಿಗೆ ಏಪ್ರಿಲ್ 13 ರಿಂದ 18 ರವರೆಗೆ ಮನೆಯಿಂದ ಮತದಾನ ಮಾಡಿಸುತ್ತಿದ್ದೇವೆ. ಇದಕ್ಕಾಗಿ 4 ತಂಡ ರಚನೆ ಮಾಡಲಾಗಿದೆ. ಶನಿವಾರ 7 ಗಂಟೆಯಿಂದ ಆರಂಭಿಸಲಾಗುವುದು. ನಾಲ್ಕು ರೂಟ್ ಮಾಡಿಕೊಂಡು ಮೂರು ದಿನದಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, 36 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಿಲಾಗಿದೆ. ವಿಶೇಷವಾಗಿ 5 ಮಹಿಳಾ ಮತಗಟ್ಟೆಗಳು, 1 ವಿಕಲಚೇತನ ಮತಗಟ್ಟೆಗಳು, 1 ಧ್ಯೇಯ ಅಧಾರಿತ ಮತಗಟ್ಟೆಗಳು, 1 ಯುವ ಅಧಿಕಾರಿಗಳ ಮತಗಟ್ಟೆ ಹಾಗೂ 1 ಸಾಂಪ್ರದಾಯಿಕ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.