ವೃಷಭಾವತಿ ಯೋಜನೆ ಟೀಕಾಕಾರರಿಗೆ ತಿರುಗೇಟು

| Published : Mar 16 2025, 01:47 AM IST

ವೃಷಭಾವತಿ ಯೋಜನೆ ಟೀಕಾಕಾರರಿಗೆ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ವೃಷಭಾವತಿ ವ್ಯಾಲಿ ಯೋಜನೆಯನ್ನು ಶಾಸಕ ಸುರೇಶ್‌ಗೌಡರು, ಬಿಜೆಪಿ ಸರ್ಕಾರದ ಯೋಜನೆ, ಅಂದಿನ ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಮಾಧುಸ್ವಾಮಿ ಘೋಷಣೆ ಮಾಡಿದ ಯೋಜನೆ ಎನ್ನುತ್ತಾರೆ. ಆದರೆ, ನೆಲಮಂಗಲದಲ್ಲಿ ಅವರ ಶಿಷ್ಯರನ್ನು ಈ ಯೋಜನೆ ವಿರುದ್ಧ ಹೋರಾಟಕ್ಕೆ ಬಿಟ್ಟು ಯೋಜನೆ ವಿರುದ್ಧ ಅಪಪ್ರಚಾರ ಮಾಡಿಸುತ್ತಿದ್ದಾರೆ. ಇದು ಸರಿಯೇ? ವೃಷಭಾವತಿ ವ್ಯಾಲಿ ಯೋಜನೆ ರೈತ ಪರ, ಎಂದಿಗೂ ಯೋಜನೆ ನಿಲ್ಲುವುದಿಲ್ಲ ಎಂದು ಯೋಜನೆಯ ಟೀಕಾಕಾರರಿಗೆ ನೆಲಮಂಗಲ ಶಾಸಕ ಶ್ರೀನಿವಾಸ್ ಸದನದಲ್ಲಿ ತಿರುಗೇಟು ನೀಡಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಅಂತರ್ಜಲ ವೃದ್ಧಿಗಾಗಿ ಶುದ್ಧೀಕರಿಸಿದ ವೃಷಭಾವತಿ ನೀರನ್ನು ನೆಲಮಂಗಲ ತಾಲೂಕಿನ 69 ಕೆರೆಗಳಿಗೆ ತುಂಬಿಸುವ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಆದರೆ, ಬಿಜೆಪಿ, ಜೆಡಿಎಸ್ ಮುಖಂಡರು ವಿರೋಧಿಸಿ ಜನತೆಯ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.

ಬಿಜೆಪಿ ಶಾಸಕರೇ ಸಲಹೆ ನೀಡಿದ್ದು:

ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಯೋಜನೆ ಬಗ್ಗೆ ಸಂಪೂರ್ಣ ಅರ್ಥ ಮಾಡಿಕೊಂಡಿದ್ದು, ಅವರ ಗ್ರಾಮದ ಕೆರೆಗೆ ನೀರು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ಲಾಭ ಪಡೆಯುವಂತೆ ನನಗೂ ಸಲಹೆ ನೀಡಿದ್ದಾರೆ. ಜೊತೆಗೆ ದೊಡ್ಡಬಳ್ಳಾಪುರದ ಕೆರೆಗಳು, ಯಶವಂತಪುರದ ಕೆಲ ಕೆರೆಗಳಿಗೂ ಈ ನೀರು ಹೋಗಲಿದೆ. ಈ ಯೋಜನೆಯನ್ನು ವಿಜ್ಞಾನಿಗಳು ಉತ್ತಮ ಯೋಜನೆ ಎಂದು ವರದಿ ನೀಡಿದ್ದಾರೆ. ಆದರೆ ಕೆಲವರು ಅಪಪ್ರಚಾರಕ್ಕೆ ಮುಂದಾಗುವುದು ಎಷ್ಟರ ಮಟ್ಟಿಗೆ ಎಂದು ಪ್ರಶ್ನಿಸಿದರು.

ತಿರುಗೇಟು ಕೊಟ್ಟ ಶಾಸಕ:

ಶಾಸಕ ಕೃಷ್ಣಪ್ಪ ಅವರು ಕೆ.ಸಿ.ವ್ಯಾಲಿ ನೀರನ್ನು ನಮ್ಮ ಭಾಗದ ಕೆರೆಗಳಿಗೆ ನೀಡಿದಲ್ಲಿ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್‍ಗೌಡ ಸದನದಲ್ಲಿ ಬಂದು ವೃಷಭಾವತಿ ವ್ಯಾಲಿ ನಮ್ಮ ಸರ್ಕಾರ ತಂದಿದ್ದು, ಮಾಧುಸ್ವಾಮಿ ಸಚಿವರಾಗಿದ್ದಾಗ ಮಾಡಿರುವುದು ಎನ್ನುತ್ತಿದ್ದಾರೆ. ಆದರೆ ನೆಲಮಂಗಲ ಕ್ಷೇತ್ರದಲ್ಲಿ ಸುರೇಶ್‍ಗೌಡರ ಶಿಷ್ಯರು ವೃಷಭಾವತಿ ಯೋಜನೆಯಿಂದ ಕೆರೆಗಳಿಗೆ ವಿಷನೀರು ಬರುತ್ತಿದ್ದು, ಬಳಕೆಗೆ ಯೋಗ್ಯವಿಲ್ಲ ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸುರೇಶ್ ಗೌಡರು ಯೋಜನೆ ನಮ್ಮದು ಅಂತ ಹೇಳುವ ಮೊದಲು, ಹಣ ನೀಡಿದ್ದು ನಮ್ಮ ಸರ್ಕಾರ ಎಂಬುದನ್ನು ಮರೆಯಬಾರದು ಎಂದು ಶಾಸಕ ಶ್ರೀನಿವಾಸ್ ತಿರುಗೇಟು ನೀಡಿದರು.

(ಮಗ್‌ಶಾಟ್‌ ಮಾತ್ರ)