ಸಾರಾಂಶ
ವೃಷಭಾವತಿ ಯೋಜನೆ ಹೆಸರಿನಲ್ಲಿ ಕಲುಷಿತಗೊಂಡ ಕೊಳಚೆ ನೀರನ್ನು ತಾಲೂಕಿನ ಕೆರೆಗಳಿಗೆ ತುಂಬಿಸಿ ಜೀವಸಂಕುಲ ಹಾಗೂ ಮುಂದಿನ ಪೀಳಿಗೆಯನ್ನು ನಾಶ ಮಾಡಲು ಹೊರಟಿರುವ ಶಾಸಕರ ನಡೆ ಸರಿಯಲ್ಲ ತಾಲೂಕಿನ ಜನತೆಯ ಸುರಕ್ಷಿತಕ್ಕಾಗಿ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ನೆಲಮಂಗಲ
ವೃಷಭಾವತಿ ಯೋಜನೆ ಹೆಸರಿನಲ್ಲಿ ಕಲುಷಿತಗೊಂಡ ಕೊಳಚೆ ನೀರನ್ನು ತಾಲೂಕಿನ ಕೆರೆಗಳಿಗೆ ತುಂಬಿಸಿ ಜೀವಸಂಕುಲ ಹಾಗೂ ಮುಂದಿನ ಪೀಳಿಗೆಯನ್ನು ನಾಶ ಮಾಡಲು ಹೊರಟಿರುವ ಶಾಸಕರ ನಡೆ ಸರಿಯಲ್ಲ ತಾಲೂಕಿನ ಜನತೆಯ ಸುರಕ್ಷಿತಕ್ಕಾಗಿ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಆಗ್ರಹಿಸಿದರು.ನಗರದ ಅರಿಶಿಕುಂಟೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್. ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ಬೆಂಗಳೂರಿನ ಕೊಳಚೆನೀರು ವಿಷಪೂರಿತವಾಗಿದ್ದು, ಈ ನೀರಿನಿಂದ ಅಂರ್ತಜಲ ಕಲುಷಿತವಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ವೃಷಭಾವತಿ ಯೋಜನೆ ನೀರನ್ನು ತುಂಬಿಸಿ ಅಲ್ಲಿನ ಜನಗಳು ಅನುಭವಿಸುತ್ತಿರುವ ನರಕ ಯಾತನೆ ನೋಡಿದರೆ ಕರುಳು ಕಿವುಚುವಂತಿದೆ ಎಂದು ಹೇಳಿದ್ದಾರೆ.ರಾಸಾಯನಿಕ ವಸ್ತುಗಳಿಂದ ಕಲುಷಿತಗೊಂಡಂತ ನೀರನ್ನು ಕೇವಲ ಎರಡು ಹಂತದಲ್ಲಿ ಸಂಸ್ಕರಿಸಿದರೇ ಖಂಡಿತ ಈ ನೀರು ಸುರಕ್ಷಿತ ಅಲ್ಲ. ಈ ನೀರು ನೆಲಮಂಗಲ ಭಾಗದ ಕೆರೆಗಳಿಗೆ ಹರಿದರೆ ಖಂಡಿತ ಅಂರ್ತಜಲ ಕಲ್ಮಶವಾಗಿ ಕೆರೆಗಳು ವಿಷಗೊಳ್ಳಲಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಜೀವನದ ಮೇಲೆ ಪ್ರಭಾವ ಬೀರಲಿದ್ದು
ಕೊಳಚೆ ನೀರು ಹರಿದು ಬಂದರೆ, ಪೋರೈಡ್, ನೈಟ್ರೈಚ್, ರಂಜಕ, ಸಾರಜನಕ ಸೇರಿದಂತೆ ಅಪಾಯಕಾರಿ ವಿಷಯುಕ್ತ ಲೋಹದ ಅಂಶಗಳುಳ್ಳ ನೀರು ಮನುಷ್ಯನ ಜೀವನ ನರಕಕ್ಕೆ ದೂಡಲಿದೆ. ಅಂತ ನರಕಾಯಾನೇ ನಮ್ಮ ತಾಲೂಕಿನ ಜನತೆ ಅನುಭವಿಸಲು ನಾನು ಬಿಡುವುದಿಲ್ಲ ಪ್ರಾಣ ಹೋದರು ಸರಿಯೇ ಕೆಂಗೇರಿಯ ಕೊಳಚೆ ನೀರು ನಮ್ಮ ತಾಲೂಕಿಗೆ ತರಲು ಬಿಡುವುದಿಲ್ಲ ಎಂದರು.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ಶಾಸಕರು ಒಮ್ಮೆ ಕೋಲಾರಕ್ಕೆ ಭೇಟಿ ನೀಡಿ ವೃಷಭಾವತಿ ನೀರಿನಿಂದ ವ್ಯವಸಾಯ ಮಾಡುತ್ತಿರುವ ಕೋಲಾರದ ಜನತೆಯ ಅಭಿಪ್ರಾಯ ಪಡೆಯಲಿ ನೀರಿನಿಂದ ಆಗುತ್ತಿರುವ ತೊಂದರೆಗಳು ಕಷ್ಟಗಳು ತಿಳಿಯುತ್ತದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದಲೂ ರೈತರನ್ನು ಕರೆದುಕೊಂಡು ಹೋಗಿ ಕೋಲಾರದ ರೈತರನ್ನು ಭೇಟಿ ಮಾಡಿಸಲಾಗುವುದು ಎಂದರು.