ಸಾರಾಂಶ
ಬೆಸ್ಟ್ ಲಿಫ್ಟರ್ ಬಾಲಕರ ವಿಭಾಗದಲ್ಲಿ ಆಕಾಶ್ ಎಜೆಇಐಟಿ ಮಂಗಳೂರು, ಬೆಸ್ಟ್ ಲಿಫ್ಟರ್ ಬಾಲಕಿಯರ ವಿಭಾಗದಲ್ಲಿ ರಿಕ್ತಕಿರಣ್ ಶ್ರೀನಿವಾಸ ಕಾಲೇಜು ಮಂಗಳೂರು. ಮಿಸ್ಟರ್ ವಿಟಿಯು ಆಳ್ವಾಸ್‌ನ ಭರತ್ ಪ್ರಶಸ್ತಿಯನ್ನು ಪಡೆದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾಢ್ಯ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಎನ್‌ಎಂಎಎಂಐಟಿ ನಿಟ್ಟೆ, ತೃತೀಯ ಸ್ಥಾನವನ್ನು ಯೆನಪೋಯ ಮೂಡುಬಿದಿರೆ ಕಾಲೇಜು ತಂಡ ಪಡೆದುಕೊಂಡಿತು.ಬಾಲಕಿಯರ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಯೆನೆಪೋಯ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು ಮೂಡುಬಿದಿರೆ, ದ್ವಿತೀಯ ಸ್ಥಾನವನ್ನು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರು, ತೃತೀಯ ಸ್ಥಾನವನ್ನು ಎನ್‌ಐಇ ಮೈಸೂರು ಪ್ರಶಸ್ತಿಯನ್ನು ಪಡೆಯಿತು. ದೇಹದಾಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜು ಬೆಳಗಾವಿ, ತೃತೀಯ ಸ್ಥಾನವನ್ನು ಜಿಎಂ ತಾಂತ್ರಿಕ ಕಾಲೇಜು, ದಾವಣಗೆರೆ ಪಡೆದುಕೊಂಡಿತು.
ಬೆಸ್ಟ್ ಲಿಫ್ಟರ್ ಬಾಲಕರ ವಿಭಾಗದಲ್ಲಿ ಆಕಾಶ್ ಎಜೆಇಐಟಿ ಮಂಗಳೂರು, ಬೆಸ್ಟ್ ಲಿಫ್ಟರ್ ಬಾಲಕಿಯರ ವಿಭಾಗದಲ್ಲಿ ರಿಕ್ತಕಿರಣ್ ಶ್ರೀನಿವಾಸ ಕಾಲೇಜು ಮಂಗಳೂರು. ಮಿಸ್ಟರ್ ವಿಟಿಯು ಆಳ್ವಾಸ್‌ನ ಭರತ್ ಪ್ರಶಸ್ತಿಯನ್ನು ಪಡೆದರು.ಬಹುಮಾನ ವಿತರಣಾ ಸಮಾರಂಭದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು ಮಿಜಾರಿನ ಪ್ರಾಂಶುಪಾಲರಾದ ಡಾ. ಪೀಟರ್ ಫರ್ನಾಂಡಿಸ್, ವಿಟಿಯು ವೀಕ್ಷಕರಾಗಿ ನಿಟ್ಟೆ ಕಾಲೇಜಿನ ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.