ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇಂದಿನ ಬಹುಪಾಲು ಮಾಧ್ಯಮಗಳು ಮಾಹಿತಿ ನೀಡುವುದರ ಜತೆಗೆ ಜನರ ಅಭಿಪ್ರಾಯ ರೂಪಿಸುತ್ತಿವೆ ಎಂದು ಪತ್ರಕರ್ತ ರಮಾಕಾಂತ್ ಆರ್ಯನ್ ಹೇಳಿದರು.ಮೈಸೂರು ವಿವಿ ರಾಣಿ ಬಹದ್ದೂರ್‌ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಜರ್ನೋತ್ರಿ 24 ಮಾನಸ ಮಾಧ್ಯಮ ಹಬ್ಬ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಕಾಲಘಟ್ಟ ಮತ್ತು ಜನರ ಅಭಿರುಚಿಗೆ ತಕ್ಕಂತೆ ಮಾಧ್ಯಮ ರಂಗವೂ ಬದಲಾಗಿದೆ. ಟಿ.ಆರ್.ಪಿ ರೇಟಿಂಗ್, ಜನಗಳ ಆಸಕ್ತಿಯ ಪ್ರತಿಫಲನವನ್ನೇ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ ಎಂದರು.
ಸಭಾಂಗಣದಲ್ಲಿರುವ 200 ಜನರು ದೇಶದ ಸಮಸ್ಯೆಗಳನ್ನು ಪರಿಹರಿಸಬಲ್ಲರು. ರಾಜ್ಯಕ್ಕೆ ಸತ್ಯವನ್ನು ಗಟ್ಟಿಯಾಗಿ ಪ್ರತಿಪಾದಿಸುವ ಒಂದರೆಡು ದೃಶ್ಯ ಮಾಧ್ಯಮ, ಒಂದು ಒಳ್ಳೆಯ ಪತ್ರಿಕೆ ಇದ್ದರೆ ಸಾಕು. ಇವುಗಳು ಇಂಡಿಯಾದ ಗಟ್ಟಿ ದನಿಯಾದರೆ ಗುಲಾಮಗಿರಿ ಇಲ್ಲದ ದನಿಯಾದರೆ ಒಳ್ಳೆಯ ಫಲಿತಾಂಶ ಕಾಣಬಹುದು ಎಂದು ಅವರು ಹೇಳಿದರು.ಪ್ರಜಾಪ್ರಭುತ್ವದಲ್ಲಿ ಯಾವುದೇ ಅಂಗ ಉಚಿತವಲ್ಲ. ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ತಿಳಿಸುವುದು ಮಾಧ್ಯಮಗಳ ಜವಾಬ್ದಾರಿ. ಇಂದಿನ ಬಹುಪಾಲು ಮಾಧ್ಯಮಗಳು ಮಾಹಿತಿ ನೀಡುವುದರ ಜತೆಗೆ ಜನರ ಅಭಿಪ್ರಾಯ ರೂಪಿಸುತ್ತಿವೆ ಎಂದು ನುಡಿದರು.
ಪತ್ರಕರ್ತರಾದವರ ಬಳಿ ಸತ್ಯದ ಪ್ರತಿಗಳು ಇದ್ದಾಗ ಅವರು ಫೈರ್ ಆಗುತ್ತಾರೆ. ಸತ್ಯದ ಹಾದಿಯಲ್ಲಿ ನಡೆದಾಗ ದ್ವೇಷ ಸಾಧಿಸುತ್ತಾರೆ. ಅನೇಕರು ಸಿಟ್ಟು ಮಾಡಿಕೊಳ್ಳುತ್ತಾರೆ. ಸಾವಿರು ಜನರು ನಮ್ಮ ವಿರುದ್ಧ ನಿಲ್ಲಲಿ. ಆದರೆ ಪತ್ರಕರ್ತರು ತಾವು ಪ್ರತಿಪಾದಿಸುವುದನ್ನು ಸುಳ್ಳಾಗಿ ನಿರೂಪಿಸುವಂತಾಗಬಾರದು ಎಂದು ಅವರು ಹೇಳಿದರು.ಬಳಿಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ರಮಾಕಾಂತ್ ಉತ್ತರಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಎಂ.ಎಸ್. ಸಪ್ನಾ ಮಾತನಾಡಿ, ನಮ್ಮಮಾತಿಗಿಂತ ನಮ್ಮ ಕೆಲಸ ಮಾತನಾಡಬೇಕು ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಜರ್ನೋತ್ರಿ ಕನಸು ಕಂಡೆ. ಅದನ್ನು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಸೇರಿ ಯಶಸ್ವಿಗೊಳಿಸಿದ್ದಾಗಿ ಹೇಳಿದರು.
19 ವರ್ಷಗಳ ವೃತ್ತಿ ಜೀವನದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖಸ್ಥೆಯಾಗಿ ನಮ್ಮ ವಿಭಾಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಗರ ಪ್ರದೇಶ, ಗ್ರಾಮಾಂತರ ಪ್ರದೇಶ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಶೈಕ್ಷಣಿಕವಾಗಿ ಮುಂದೆ ತ ರಲು ಪ್ರಯತ್ನಿಸಿದ್ದೇನೆ ಎಂದು ಅವರು ತಿಳಿಸಿದರು.ಜರ್ನೋತ್ರಿ 24: ತುಮಕೂರು ವಿವಿ ಚಾಂಪಿಯನ್
ಜರ್ನೋತ್ರಿ 24 ಮಾನಸ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಮೇಲುಗೈ ಸಾಧಿಸಿದ ತುಮಕೂರು ವಿಶ್ವವಿದ್ಯಾನಿಲಯದ ತಂಡ ಸತತ 2ನೇ ವರ್ಷವೂ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.ಪ್ರಜಾಸತ್ಯ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಕೆ. ಮಧುಸೂದನ್, ವಿಕ್ರಾಂತ್ ಗೌಡ, ಎಚ್.ಎಂ. ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮುತ್ತುರಾಜು, ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ ಇದ್ದರು. ವಿದ್ಯಾರ್ಥಿ ದೀಕ್ಷಿತ್ ನಾಯರ್ ನಿರೂಪಿಸಿದರು.