ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
2024-25ನೇ ಋತುವಿನ ಕರ್ನಾಟಕ ತಂಬಾಕು ಬೆಳೆ ನಿಯಮಗಳ ಪ್ರಕಾರ ನಿಲ್ ಸೋಲ್ಡ್ ಶೇ. 50ಕ್ಕಿಂತ ಮತ್ತು ಶೇ. 25 ಕ್ಕಿಂತ ಕಡಿಮೆ ತಂಬಾಕು ಮಾರಾಟ ಮಾಡಿರುವ ಎಫ್.ಸಿವಿ ತಂಬಾಕು ಬೆಳೆಗಾರರ ಮೇಲೆ ವಿಧಿಸಲಾಗಿದ್ದ ಎಲ್ಲ ರೀತಿಯ ದಂಡಗಳನ್ನು ಮನ್ನಾ ಮಾಡಲಾಗಿದೆ ಎಂದು ಮೈಸೂರು ಮತ್ತು ಪಿರಿಯಾಪಟ್ಟಣ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಜಿ. ಬುಲ್ಲಿ ಸುಬ್ಬರಾವ್ ಹೇಳಿದ್ದಾರೆ.ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎಲ್ಲ ಎಫ್.ಸಿವಿ ತಂಬಾಕು ಬೆಳೆಯುವ ಪ್ರದೇಶಗಳಲ್ಲಿ ಮೇ ತಿಂಗಳ ಮೂರನೇ ವಾರದಿಂದ ಇಲ್ಲಿಯವರೆಗೂ ವಾಡಿಗೆ ಗಿಂತ ಹೆಚ್ಚು ಹಾಗೂ ನಿರಂತರವಾಗಿ ಮಳೆಯಾಗುತ್ತಿದೆ, ಇದರಿಂದ ತಂಬಾಕು ಬೆಳೆಗೆ ಹಾನಿ ಉಂಟಾಗಿದೆ ಮತ್ತು ಬ್ಯಾರನ್ ಗಳಲ್ಲಿ ನಡೆಯುತ್ತಿರುವ ತಂಬಾಕು ಕ್ಯೂರಿಂಗ್ ಗಳ ಮೇಲೆ ಪರಿಣಾಮ ಬೀರಿದ್ದು, ಇಂತಹ ಪರಿಸ್ಥಿತಿಯಲ್ಲಿ ವ್ಯವಸ್ಥಾಪಕರು ಮತ್ತು ಹರಾಜು ಅಧ್ಯಕ್ಷರು ಕರ್ನಾಟಕದ ತಂಬಾಕು ಬೆಳೆಯುವ ಗ್ರಾಮಗಳಿಗೆ ಭೇಟಿ ಮಾಡುವಂತೆ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ನಿರ್ದೇಶಕರು ಸೂಚನೆಯನ್ನು ನೀಡಿ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯ ಸನ್ನಿವೇಶನದಲ್ಲಿ ಇರುವ ಬೆಳೆಯ ಪರಿಸ್ಥಿತಿ ಮತ್ತು ಬೆಳೆಗಾರರ ದುಸ್ಥಿತಿಯನ್ನು ತಿಳಿಸಲು ಕೇಂದ್ರ ತಂಬಾಕು ಮಂಡಳಿ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ಗುಂಟೂರಿನ ಪ್ರಧಾನ ಕಚೇರಿಯಿಂದ ವ್ಯವಸ್ಥಾಪಕರು ಎಫ್.ಸಿಬಿ ತಂಬಾಕು ಬೆಳೆಯುವ ಹಳ್ಳಿಗಳಿಗೆ ಭೇಟಿ ನೀಡಿ ಬೆಳೆಗಾರರನ್ನು ಸಂಪರ್ಕಿಸಿ ಎರಡು ತಿಂಗಳಿಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಂಬಾಕು ಬೆಳೆಗಾರರ ಕುಂದು ಕೊರತೆಗಳು ಮತ್ತು ಬೆಳೆಯ ಪರಿಸ್ಥಿತಿಯ ಮೊದಲ ಮಾಹಿತಿಯನ್ನು ತೆಗೆದುಕೊಳ್ಳಲು ಬೆಳೆಗಾರ ಸಭೆಯನ್ನು ಏರ್ಪಡಿಸಿ ಎಂದು ಅವರು ತಿಳಿಸಿದ್ದಾರೆ.ಕಾರ್ಯನಿರ್ವಾಹಕ ನಿರ್ದೇಶಕರು ತಂಬಾಕು ಮಂಡಳಿಯ ರೈತರ ಈ ಚಿಂತಾಜನಕ ಪರಿಸ್ಥಿತಿಯನ್ನು ತಿಳಿದು ಪರಿಹಾರ ಕ್ರಮಗಳನ್ನು ಘೋಷಿಸಿದೆ ಆಂಧ್ರಪ್ರದೇಶದಲ್ಲಿ 2023ನೇ ಡಿಸೆಂಬರ್ ತಿಂಗಳಲ್ಲಿ ಚೆಂಡಮಾರುತದಿಂದಾಗಿ ತಂಬಾಕು ಬೆಳೆ ಹಾನಿಗೊಳಿಗಾಗಿ ಪ್ರತಿ ಬೆಳೆಗಾರರಿಗೆ 10 ಸಾವಿರ ನೀಡಿದಂತೆ ಬೆಳೆಗಾರರ ಕಲ್ಯಾಣ ನಿಧಿ ಯೋಜನೆಯಿಂದ ಕರ್ನಾಟಕದಲ್ಲಿಯೂ ಕೂಡ ಬಡ್ಡಿರಹಿತ ಸಾಲದ ರೂಪದಲ್ಲಿ ತಂಬಾಕು ಬೆಳೆ ಹಾನಿಗೊಳಗಾದ ಬೆಳೆಗಾರರಿಗೆ 25 ಸಾವಿರ ನೀಡಲು ಭಾರತ ಸರ್ಕಾರದ ವಾಣಿಜ್ಯ ಇಲಾಖೆಗೆ ಮನವಿ ಮಾಡಲು ಮಂಡಳಿ ನಿರ್ಧರಿಸಿದೆ.
ತಂಬಾಕು ಬೆಳೆ ಹಾನಿಗೊಳಗಾದ ಬೆಳೆಗಾರರಿಗೆ ಪರಿಹಾರವನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರವನ್ನು ಮಂಡಳಿಯು ಕೋರಲಾಗಿದೆ ತಂಬಾಕು ಬೆಳೆ ಹಾನಿಗೊಳಗಾದ ಬೆಳೆಗಾರರಿಗೆ ಪರಿಹಾರದ ಕ್ರಮವಾಗಿ ಮತ್ತೊಮ್ಮೆ ತಂಬಾಕು ನಾಟಿ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ, ಇದಕ್ಕಾಗಿ ತಂಬಾಕು ಬೆಳೆಗಾರರು ಸಂಬಂಧಪಟ್ಟ ಹರಾಜು ಅಧೀಕ್ಷಕರುಗಳಿಗೆ ಮತ್ತೊಮ್ಮೆ ತಂಬಾಕನ್ನು ನಾಟಿ ಮಾಡುವುದಕ್ಕೆ ಅವಕಾಶ ನೀಡಲು ಅರ್ಜಿ ಸಲ್ಲಿಸಬೇಕು, ಇಲ್ಲಿವರೆಗೂ ರಿನಿವಲ್ ಆಗದೆ ಇರುವ ತಂಬಾಕು ಬೆಳೆಗಾರರು ಸಲ್ಲಿಸಿರುವ ನೋಂದಣಿಯ ಅರ್ಜಿಗಳನ್ನು ಪ್ರಧಾನ ಕಚೇರಿ ಗುಂಟೂರುನಲ್ಲಿ ಅರ್ಹತೆ ಸ್ಥಿತಿಯನ್ನು ಪರಿಶೀಲಿಸುವ ಮೂಲಕ ಪರಿಗಣಿಸಲು ನಿರ್ಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.