15ರಂದು ಕಾರವಾರದಲ್ಲಿ ವಾಕ್ ಥಾನ್

| Published : Dec 12 2024, 12:33 AM IST

ಸಾರಾಂಶ

ಎಲ್ಲ ವಿಭಾಗದಲ್ಲಿಯೂ ಮೊದಲ ಸ್ಥಾನ ಪಡೆದವರಿಗೆ 6 ಹಾಗೂ ಎರಡನೇ ಸ್ಥಾನ ಪಡೆದವರಿಗೆ ₹3 ಸಾವಿರ ಬಹುಮಾನ ಜತೆಗೆ ಟ್ರೋಫಿ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್‌, ಕ್ಯಾಪ್, ಪ್ರಮಾಣಪತ್ರ ಮತ್ತು ಲಘು ಉಪಾಹಾರದ ವ್ಯವಸ್ಥೆ ಇರಲಿದೆ.

ಕಾರವಾರ: ರೋಟರಿ ಕ್ಲಬ್ ಪಶ್ಚಿಮದಿಂದ ನಗರದಲ್ಲಿ ಡಿ. 15ರಂದು ವಾಕ್‌ಥಾನ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಲಕ್ಷ್ಮೀಕಾಂತ ತೆಂಡೂಲ್ಕರ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಮಾಲಾದೇವಿ ಮೈದಾನದಲ್ಲಿ ಡಿ. 15ರಂದು ಬೆಳಗ್ಗೆ 6.30ಕ್ಕೆ ವಾಕ್‌ಥಾನ್‌ಗೆ ಚಾಲನೆ ದೊರೆಯಲಿದೆ. ಸ್ಪರ್ಧೆಯಲ್ಲಿ 15 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಟಟ್ಟ ಗಂಡು ಹಾಗೂ ಹೆಣ್ಣುಮಕ್ಕಳು ಭಾಗವಹಿಸಬಹುದು. 15 ವರ್ಷದೊಳಗಿನ ಹಾಗೂ 55 ವರ್ಷ ಮೇಲ್ಟಟ್ಟವರಿಗೆ 5 ಕಿಮೀ ವಾಕಥಾನ್ ಸ್ಪರ್ಧೆ, 16ರಿಂದ 34 ವರ್ಷದವರಿಗೆ ಹಾಗೂ 35ರಿಂದ 54 ವರ್ಷದವರಿಗೆ 10 ಕಿಮೀ ವಾಕ್ ಥಾನ್ ಇರಲಿದೆ.

ಎಲ್ಲ ವಿಭಾಗದಲ್ಲಿಯೂ ಮೊದಲ ಸ್ಥಾನ ಪಡೆದವರಿಗೆ 6 ಹಾಗೂ ಎರಡನೇ ಸ್ಥಾನ ಪಡೆದವರಿಗೆ ₹3 ಸಾವಿರ ಬಹುಮಾನ ಜತೆಗೆ ಟ್ರೋಫಿ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್‌, ಕ್ಯಾಪ್, ಪ್ರಮಾಣಪತ್ರ ಮತ್ತು ಲಘು ಉಪಾಹಾರದ ವ್ಯವಸ್ಥೆ ಇರಲಿದೆ ಎಂದರು. ಈ ಮ್ಯಾರಥಾನ್‌ಗೆ ರೋಟರಿ ಕ್ಲಬ್‌ ರಾಜ್ಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಚಾಲನೆ ನೀಡಲಿದ್ದಾರೆ. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದೆ. ಭಾಗವಹಿಸುವವರು ಮೊ. ೯೯೮೬೪೭೩೭೯೭ ಅಥವಾ ೯೦೯೬೬೫೩೬೦೨ ಸಂಪರ್ಕಿಸಬಹುದು ಎಂದರು.ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅರವಿಂದ ನಾಯಕ ಮಾತನಾಡಿ, ಪ್ರತಿವರ್ಷವೂ ನಡೆಸುತ್ತಿರುವ ವಾಕಥಾನ್ ಸ್ಪರ್ಧೆ ಬಳಿಕ ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಕಳೆದ ಬಾರಿಯೂ ಹಲವು ಶಾಲೆಗಳಿಗೆ ಬ್ಯಾಗ್ ಹಾಗೂ ವಿಶೇಷ ಚೇತನ ಮಕ್ಕಳಿರುವ ಶಾಲೆಗೆ ಹಣಕಾಸಿನ ಸಹಾಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ರೋ. ಜಯದೀಪ್ ಪಾಟೀಲ್, ಸಂದೀಪ್, ಪ್ರೀತಮ್ ವೆರ್ಣೇಕರ್, ಪ್ರಸಾದ್ ಮಹಾಜನ್, ರಾಜೇಶ ಶೆಣೈ, ರತ್ನಾಕರ್, ಹೇಮಲಾ, ಪಲ್ಲವಿ ಡಿಸೋಜಾ, ರಮೇಶ ತನ್ನಾ ಸೇರಿದಂತೆ ಮತ್ತಿತರರು ಇದ್ದರು.ವಿಜಯಪುರದ ಕಾರಾಗೃಹದಲ್ಲಿ ಭಗವದ್ಗೀತಾ ಅಭಿಯಾನ

ಶಿರಸಿ: ವಿಜಯಪುರದ ಜಿಲ್ಲಾ ಕಾರಾಗೃಹದಲ್ಲಿ ಸುಮಾರು 100ಕ್ಕೂ ಹೆಚ್ಚು ಕೈದಿಗಳಿಗೆ ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯದ ಶ್ಲೋಕಗಳನ್ನು ಒಂದು ವಾರಗಳ ಕಾಲ ಹೇಳಿಕೊಡಲಾಯಿತು.ಅಭಿಯಾನದ ನೇತೃತ್ವ ವಹಿಸಿರುವ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಿದರು.ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಸಮಾಜದ ಯಾರೂ ಒಬ್ಬರನ್ನು ಬಿಡದೆ ಎಲ್ಲರಿಗೂ ಭಗವದ್ಗೀತೆ ಮುಟ್ಟಬೇಕು. ಭಗವದ್ಗೀತೆಯು ಕೊಟ್ಟ ಒಳ್ಳೆಯ ಮೌಲ್ಯಗಳು ಪ್ರತಿಯೊಬ್ಬರನ್ನೂ ತಲುಪಬೇಕು ಎಂಬ ಪರಮ ಉದ್ದೇಶವೂ ಇಂದು ಭಗವದ್ಗೀತಾ ಅಭಿಯಾನವು ಜೈಲಿನಲ್ಲೂ ನೆರವೇರುವ ಹಾಗೆ ಆಯಿತು ಎಂದರು.

ಈ ವೇಳೆ ಅಭಿಯಾನದ ಪ್ರಮುಖರು, ಅಧಿಕಾರಿಗಳು ಇದ್ದರು.