ಕನ್ನಡಪ್ರಭ ವಾರ್ತೆ ಮೈಸೂರುನಗರದ ಧಾನ್ ಫೌಂಡೇಷನ್ ವತಿಯಿಂದ ಶನಿವಾರ ಬೆಳಗ್ಗೆ ನಗರದ ಅರಮನೆ ಉತ್ತರ ದ್ವಾರದಿಂದ ವಸ್ತು ಪ್ರದರ್ಶನ ಆವರಣದವರೆಗೆ ವಾಕಥಾನ್ ಆಯೋಜಿಸಲಾಗಿತ್ತು.ಮಾರ್ಗದರ್ಶಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಕೃಷ್ಣಮೂರ್ತಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಸುಕಾಂತ್ ಶೇಖರ್, ಕೆನರಾ ಬ್ಯಾಂಕ್ ನ ವಿಭಾಗೀಯ ವ್ಯವಸ್ಥಾಪಕ ಉತ್ತಮ್ ಸುಧಾಂಶು, ಹಿರಿಯ ವ್ಯವಸ್ಥಾಪಕ ಶೇಖರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಹರೀಶ್, ಇಂಡಿಯ್ ಓವರ್ ಸೀಸ್ ಬ್ಯಾಂಕ್ ನ ಕುವೆಂಪುನಗರ ಶಾಖೆಯ ಹಿರಿಯ ವ್ಯವಸ್ಥಾಪಕ ಜತಿನ್, ಬನ್ನೂರು ಶಾಖೆಯ ಹಿರಿಯ ವ್ಯವಸ್ಥಾಪಕ ಜೋಸೆಫ್, ಫೌಂಡೇಷನ್ ನ ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್ ವಾಕಥಾನ್ ಗೆ ಚಾಲನೆ ನೀಡಿದರು.ಧಾನ್ ಫೌಂಡೇಷನ್ ನ ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್, ವಾಕಥಾನ್ ನ ಉದ್ದೇಶವನ್ನು ವಿವರಿಸಿದರು.ಜಿಲ್ಲಾ ಮುಂಚೂಣಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಕೃಷ್ಣಮೂರ್ತಿ ಅವರು ಬ್ಯಾಂಕ್ ಗಳ ಮೂಲಕ ಲಭ್ಯವಿರುವ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಜೀವಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಿದರು ಹಾಗೂ ಸದಸ್ಯರು ವ್ಯಕ್ತಪಡಿಸಿದ ಸಂಶಯಗಳಿಗೆ ಸ್ಪಷ್ಟನೆ ನೀಡಿದರು.ಕೆನರಾ ಬ್ಯಾಂಕ್ ನ ವಿಭಾಗೀಯ ವ್ಯವಸ್ಥಾಪಕ ಉತ್ತಮ್ ಸುಧಾಂಶು ಅವರು ಸ್ವಸಹಾಯ ಗುಂಪುಗಳ ಪಾತ್ರ, ಬ್ಯಾಂಕ್ ಗಳೊಂದಿಗೆ ಸುಲಭ ಪ್ರವೇಶ ಮತ್ತು ವಿವಿಧ ಯೋಜನೆಗಳ ಮಹತ್ವವನ್ನು ವಿವರಿಸಿದರು. ಕುಟುಂಬದ ಆರ್ಥಿಕ ಭದ್ರತೆಗೆ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ನೋಂದಣಿ ಅತ್ಯಗತ್ಯ ಎಂದು ತಿಳಿಸಿದರು.ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ಜೋಸೆಫ್ ಅವರು ಬ್ಯಾಂಕ್ ಸೇರ್ಪಡೆ ಮತ್ತು ಬ್ಯಾಂಕಿಂಗ್ ಸೇವೆಗಳ ಕುರಿತು ಸ್ಪಷ್ಟನೆ ನೀಡಿದರು. ನಂತರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ಹರೀಶ್ ಅವರು ಸೈಬರ್ ವಂಚನೆ ಕುರಿತು ಜಾಗೃತಿ ಮೂಡಿಸಿ, ಯೂನಿಯನ್ ಬ್ಯಾಂಕ್ ಒದಗಿಸುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಧಾನ್ ಫೌಂಡೇಷನ್ ಸಿಬ್ಬಂದಿ ಪ್ರಭು, ಭಾಗ್ಯ, ಸುನೀತಾ, ಕೃತಿಕಾ ಮತ್ತು ಸಂಧ್ಯಾರಾಣಿ, ಬೇಬಿ ಜೊತೆಗೆ ಸಿಎಫ್‌ಎಲ್ ಸಿಬ್ಬಂದಿ, ಫೆಡರೇಷನ್ ಗಳ ಸ್ವಯಂ ಸೇವಕರು ಹಾಗೂ ಎಲ್ಲಾ ಫೆಡರೇಷನ್ ಗಳ ನಾಯಕರು ಮತ್ತು ಸದಸ್ಯರು ಭಾಗವಹಿಸಿದ್ದರು.
ಧಾನ್ ಫೌಂಡೇಷನ್ ನಿಂದ ವಾಕಥಾನ್
ರು ಸ್ವಸಹಾಯ ಗುಂಪುಗಳ ಪಾತ್ರ, ಬ್ಯಾಂಕ್ ಗಳೊಂದಿಗೆ ಸುಲಭ ಪ್ರವೇಶ ಮತ್ತು ವಿವಿಧ ಯೋಜನೆಗಳ ಮಹತ್ವ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.