ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಪಾವಗಡ ನಗರದ ಉತ್ತರ ಭಾಗಕ್ಕಿರುವ ಅತ್ಯಂತ ಹಿಂದುಳಿದ ಗುಟ್ಟಹಳ್ಳಿ ಹಾಗೂ ಪಶ್ಚಿಮ ಭಾಗದ ರೈನ್‌ಗೆಜ್ ಬಡಾವಣೆಯ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಹೆಚ್ಚು ಅನುದಾನ ಕಲ್ಪಿಸಿ ಪ್ರಗತಿಗೆ ಆದ್ಯತೆ ನೀಡುವುದಾಗಿ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹೇಳಿದರು.ಕಾಲ್ನೆಡಿಗೆ ಮೂಲಕ ಪಟ್ಟಣದ 23ವಾರ್ಡ್ ಗಳ ಪರ್ಯಾಟನೆ ನಡೆಸಿ, ಮೂಲಭೂತ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿದ ಶಾಸಕರು, ನಗರದ ವಿನಾಯಕ ನಗರ, ರೆಡ್ಡಿ ಕಾಲೋನಿ, ಬನಶಂಕರಿ, ಶಾಂತಿ ನಗರ, ಹಳೇಕುಂಬಾರರ ಬೀದಿ, ಗಾಂಧಿನಗರ ಕನ್ ಮಾನ್ ಚೆರ್ಲು, ಗುಟ್ಟಹಳ್ಳಿ ಆದರ್ಶ ನಗರ, ಇತರೆ 23 ವಾರ್ಡ್ ಗಳ ಭೇಟಿ ಪರಿಶೀಲನೆ ನಡೆಸಿದರು.
ರೈಜ್‌ಗೆಜ್ ಬಡಾವಣೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನತೆಯ ಅಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿದ್ದು ಚುನಾವಣೆ ವೇಳೆ ಜನತೆಗೆ ನೀಡಿದ ಭರವಸೆ ಈಡೇರಿಸಲು ಬದ್ಧರಿದ್ದೇವೆ. ಕೊಟ್ಟ ಮಾತಿನಂತೆ ವಿವಿಧ ಯೋಜನೆ ಅಡಿ ನಗರ ಹಾಗೂ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ . ತಾಲೂಕಿನ ಬೊಮ್ಮತನಹಳ್ಳಿಯಿಂದ ಭೋವಿ ಕಾಲೋನಿ ರಸ್ತೆ ಪ್ರಗತಿಗೆ 50ಲಕ್ಷ ವಿನಿಯೋಗಿಸಿದ್ದು, ರೈನ್‌ಗೆಜ್ ಬಡಾವಣೆಯಲ್ಲಿ ಸಿಸಿರಸ್ತೆ ಪ್ರಗತಿಗೆ 10ಲಕ್ಷ ಹಾಗೂ ಸಿದ್ದಲಿಂಗಪ್ಪ ಮನೆ ಬಳಿ ಆನಾಹುತ ತಪ್ಪಿಸಲು ರಕ್ಷಣೆ ಗೋಡೆ, ಗುಟ್ಟಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ, ಶೌಚಗೃಹ, ಹಾಗೂ ಸೊಳ್ಳೆ ಹಂದಿ ಇತರೇ ಕ್ರಿಮಿ ಕೀಟದ ಹಾವಳಿ ತಪ್ಪಿಸಲು ಚರಂಡಿಯ ಮೇಲ್ಬಾಗದ ಮುಚ್ಚಳ, ನೈರ್ಮಲ್ಯ, ಹಾಗೂ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿ ಮಾದರಿ ವಾರ್ಡ್‌ನ್ನಾಗಿ ರೂಪಿಸಲು ಮುಖ್ಯಾಧಿಕಾರಿ ಜಾಫರ್ ಷರೀಫ್‌ಗೆ ಆದೇಶಿಸಲಾಗಿದೆ ಎಂದರು.ಮನೆಮನೆಯ ಕುಡಿಯುವ ನೀರು ಸರಬರಾಜ್‌ನ ಪೈಪ್ ಲೈನ್ ಕಾಮಗಾರಿ ತ್ವರಿತವಾಗಿ ಪೂರೈಸಿ, ಗುಂಡಿಗಳನ್ನು ಸಿಮೆಂಟ್‌ನಲ್ಲಿ ಮುಚ್ಚುವಂತೆ ,ಅಮೃತ್ ಯೋಜನೆ ವಿಭಾಗದ ಎಂಜಿನಿಯರ್ ಚಂದ್ರಶೇಖರ್‌ಗೆ ಆದೇಶಿಸಿದ್ದು, ಶ್ರೀನಿವಾಸ ನರದ ಜೈನ್ ದೇವಾಲಯ ನಿರ್ಮಾಣಕ್ಕೆ 10ಲಕ್ಷ ಹಾಗೂ ಭೋವಿ ಕಾಲೋನಿಯ ಸಮುದಾಯ ಭವನಕ್ಕೆ 10ಲಕ್ಷ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಕಲ್ಪಿಸಲು ಈಗಾಗಲೇ ಭರವಸೆ ವ್ಯಕ್ತಪಡಿಸಿರುವುದಾಗಿ ಹೇಳಿದರು. ಸರ್ಕಾರಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ಕ್ರೀಡಾಂಗಣದಲ್ಲಿ 6 ಹೈ ಮಾಸ್ಕ್ ಲೈಟ್, ವಾಕಿಂಗ್ ಪಾತ್ ಮತ್ತು ಗಿಡಗಳನ್ನು ಬೆಳೆಸುವುದಕ್ಕೆ ಕ್ರಿಯಾಯೋಜನೆ ಸಿದ್ದಪಡಿಸುವಂತೆ ಕೆಆರ್ ಐಡಿಎಲ್ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು.ಇದೇ ವೇಳೆ ಪುರಸಭೆ ಅಧ್ಯಕ್ಷರಾದ ಸುದೇಶ್‌ಬಾಬು, ಮುಖ್ಯಾಧಿಕಾರಿ ಜಾಫರ್ ಷರೀಫ್,ಆರೋಗ್ಯಾಧಿಕಾರಿ ಶಂಷುದ್ದೀನ್, ಎಂಜಿನಿಯರ್ ಯಂಜೇಶ್‌ಬಾಬು, ಅಮೃತ್ ಯೋಜನೆಯ ಎಂಜಿನಿಯರ್ ಚಂದ್ರಶೇಖರ್ , ಮುಖಂಡರಾದ ಎ.ಶಂಕರರೆಡ್ಡಿ, ಮಹಮ್ಮದ್ ಇತರರಿದ್ದರು.