ಸಾರಾಂಶ
ಕಾಗವಾಡದ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ ಮಾತನಾಡಿ, ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಎಂದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಸಿದ್ಧೇಶ್ವರ ಶ್ರೀಗಳು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅಂತೆಯೇ ಅವರನ್ನು ಶ್ರೀಸಾಮಾನ್ಯರು ನಡೆದಾಡುವ ದೇವರೆಂದು ಕರೆಯುತ್ತಾರೆ ಎಂದು ಕಾಗವಾಡದ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ ಹೇಳಿದರು.ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ಗುರುಸ್ಮರಣೆ ಕಾರ್ಯಕ್ರಮದ ಮಾತನಾಡಿದರು. ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿ.ಎಸ್.ತುಗಶೆಟ್ಟಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಎಸ್.ಪಿ.ತಳವಾರ, ಡಾ.ಎ.ಎಂ.ಜಕ್ಕಣ್ಣವರ ಮಾತನಾಡಿದರು.
ಗುರು ಸ್ಮರಣೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ.ಪೂ.ರ ಜೀವನ ಸಾಧನೆ ಕುರಿತು ಪ್ರಬಂಧ ಮತ್ತು ಆಯ್ದ ಪ್ರವಚನಗಳ ಮೇಲೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಪ್ರೊ.ಜೆ.ಕೆ. ಪಾಟೀಲ, ಪ್ರೊ.ವಿ.ಬಿ.ಬುರ್ಲೆ, ಪ್ರೊ.ಎಸ್.ಎಸ್.ಮೋರೆ ಭಾಗವಹಿಸಿದ್ದರು. ಈ ಸಮಯದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು. ಪ್ರೊ.ಸೋನಾಲಿ ಪಡತರೆ ನಿರೂಪಿಸಿದರು. ಗ್ರಂಥಪಾಲಕ ಪಿ.ಎಂ.ದೊಡಮನಿ ಸ್ವಾಗತಿಸಿದರು. ಪ್ರೊ.ಎಸ್.ಎಂ.ಘೋರ್ಪಡೆ ವಂದಿಸಿದರು.