ದಾರ್ಶನಿಕರ ಮಾರ್ಗದಲ್ಲಿ ನಡೆಯುವುದು ಜೀವನದ ಸಾರ್ಥಕತೆ

| Published : Apr 03 2025, 02:45 AM IST

ದಾರ್ಶನಿಕರ ಮಾರ್ಗದಲ್ಲಿ ನಡೆಯುವುದು ಜೀವನದ ಸಾರ್ಥಕತೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ನಾಡಿನ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದರಿಂದ ಜೀವನದ ಸಾರ್ಥಕತೆ ಅಡಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ನಾಡಿನ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದರಿಂದ ಜೀವನದ ಸಾರ್ಥಕತೆ ಅಡಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ವಡಗಾವಿಯ ಸಫಾರಗಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಜರುಗಿದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ತತ್ವಗಳು ಹಾಸುಹೊಕ್ಕಾಗಿ ವಿಸ್ತರಿಸಿದ್ದು ವಚನಕಾಲದ ದೊಡ್ಡ ಆಂದೋಲನವೆಂದು ಅವರು ಬಣ್ಣಿಸಿದರು. ಗುಳೇದಗುಡ್ಡದ ಗುರುಸಿದ್ಧೇಶ್ವರ ಬೃಹನ್ಮಠ, ಪಟ್ಟಸಾಲಿ ಗುರುಪೀಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣ ದೇವರ ದಾಸಿಮಯ್ಯ ಜಯಂತಿ ಉತ್ಸವ ಅರ್ಥಪೂರ್ಣ ಸಂದೇಶ ಕೊಡುವ ಜಯಂತಿ ಇದಾಗಿದೆ. ಶರಣ ದೇವರ ದಾಸಿಮಯ್ಯನವರು ಕೇವಲ ಒಂದೇ ಸಮಾಜಕ್ಕೆ ಸೀಮಿತವಾಗದೇ ಅವರು ವಿಶ್ವಮಾನ್ಯ ಶರಣರು ಎಂದು ನುಡಿದರು.ಮಾನವನ ಶರೀರವನ್ನು ಮುಚ್ಚುವಂತ ನೇಕಾರ ಕಾಯಕ ದೇವರ ದಾಸಿಮಯ್ಯರವರದು. ತಮ್ಮ ಕಾಯಕ ದಾಂಪತ್ಯ ಜೀವನದ ಮೂಲಕ ದೇವನನ್ನೇ ಒಲಿಸಿಕೊಂಡ ಮಹಾನ ಶರಣ ದಾಸಿಮಯ್ಯನವರು. ಸಮಾಜದಲ್ಲಿ ಮೇಲು-ಕೀಳು, ಲಿಂಗ ತಾರತಮ್ಯ ಹೀಗೆ ಮುಂತಾದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಹುಟ್ಟಿಕೊಂಡ ಶ್ರೇಷ್ಠ ಶರಣರು ದೇವರ ದಾಸಿಮಯ್ಯ ನವರು, ನಾಗರಿಕ ಸಮಾಜಕ್ಕೆ ಸಂಜೀವಿನಿ ಸಂತ. ದೇವರ ದಾಸಿಮಯ್ಯನವರ ಬಗ್ಗೆ ಸಮಾಜದ ಜನರು ಅಧ್ಯಯನ ಮಾಡಿ ತಿಳಿದುಕೊಳ್ಳಬೇಕು. ಈಗಿನ ಸಮಾಜ ನಮ್ಮ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡು ಜೀವನ ನಡೆಸಬೇಕು. ನೇಕಾರ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.ಗಜಾನನ ಗುಂಜೇರಿ ಮಾತನಾಡಿ, ದೇವರ ದಾಸಿಮಯ್ಯನವರು ಮಹಾನ ಮಹಿಳಾವಾದಿಗಳು, ವಚನಕಾರರು, ಇವರು ರಚಿಸಿದ ೧೭೬ ವಚನಗಳನ್ನು ಲಂಡನನಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ. ಈ ಶರಣರ ವಚನಗಳು ತುಂಬಾ ಮಾರ್ಮಿಕವಾಗಿವೆ ಅವುಗಳನ್ನು ಓದಿ ತಿಳಿದುಕೊಳ್ಳಬೇಕು. ದೇವರ ದಾಸಿಮಯ್ಯ ಆದರ್ಶಪ್ರಿಯ ಶರಣರು; ಸಮಾಜದ ಜನರು ತಮ್ಮ ದಾಂಪತ್ಯ ಜೀವನ ಸುಖಕರವಾಗಿ ನಡೆಸಲು ದೇವರ ದಾಸಿಮಯ್ಯನವರ ದಾಂಪತ್ಯ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. ಅನೇಕ ಶರಣರು ಎಲ್ಲವುಗಳನ್ನು ಮೀರಿ ಸಮ-ಸಮಾಜದ ಸಲುವಾಗಿ ದುಡಿದಿದ್ದಾರೆ. ಶರಣರ ಸಮಾಜ ಸುಧಾರಣೆಯ ವಿಷಯಗಳನ್ನು ತಿಳಿದುಕೊಂಡು ಜೀವನ ನಡೆಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮೇಯರ್‌ ಮಂಗೇಶ ಪವಾರ, ಉಪಮೇಯರ್‌ ವಾಣಿ ವಿಲಾಸ ಜೋಶಿ, ಪ್ರೀತಿ ಕಾಮಕರ, ರೇಷ್ಮಾ ಕಾಮಕರ, ದೀಪಾಲಿ ಚೊಸಗಿ, ಲಕ್ಷ್ಮೀ ಲೋಕರಿ, ಉದಯ ಉಪರಿ, ಶಿವಾನಂದ ಉಪರಿ, ಲೋಹಿತ ಮೋರಕರ, ಬಸವರಾಜ ಢವಳಿ, ವೆಂಕಟೇಶ ವನಹಳ್ಳಿ, ಮಾರುತಿ ಬಂಗೋಡಿ, ಕಿಶೋರ ಬಡಗಾವಿ, ಪ್ರಸನ್ನ ಲಟ್ಟಿ, ರಮೇಶ ಸೊಂಟಕ್ಕಿ, ಬಸವರಾಜ ಜಡಪನ್ನವರ, ವಿ.ಜಿ. ನೀರಲಗಿಮಠ, ಹಾಗೂ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅದ್ಧೂರಿ ಮೆರವಣಿಗೆ:

ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಉತ್ಸವದ ಅಂಗವಾಗಿ ಖಾಸಭಾಗದ ಬಸವೇಶ್ವರ ವೃತ್ತದಲ್ಲಿ ದೇವರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಸಕರಾದ ಅಭಯ ಪಾಟೀಲ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಶಾಸಕರಾದ ಅಭಯ ಪಾಟೀಲ, ಗುಳೇದಗುಡ್ಡದ ಗುರುಸಿದ್ಧೇಶ್ವರ ಬೃಹನ್ಮಠ, ಪಟ್ಟಸಾಲಿ ಗುರುಪೀಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ನೇಕಾರ ಸಮಾಜದ ಬಾಂಧವರು ಭವ್ಯ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರವಾದದ್ದು. ಇವರು ತಮ್ಮ ವಚನಗಳ ಮೂಲಕ ಗುರುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ. ಗುರುಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಂತಹ ದೇವರ ದಾಸಿಮಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

-ಅಭಯ ಪಾಟೀಲ, ಶಾಸಕರು.