ಭ್ರಷ್ಟ ಸಂಸದ ಬೇಕಾ? ಸಾದಾಸೀದಾ ವ್ಯಕ್ತಿ ಬೇಕಾ?

| Published : Mar 30 2024, 12:47 AM IST

ಭ್ರಷ್ಟ ಸಂಸದ ಬೇಕಾ? ಸಾದಾಸೀದಾ ವ್ಯಕ್ತಿ ಬೇಕಾ?
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಡಿ.ಕೆ.ಸುರೇಶ್ 12 ವರ್ಷ ಸಂಸದರಾಗಿದ್ದವರು. ನಾಮಪತ್ರ ಸಲ್ಲಿಕೆ ವೇಳೆ ಅವರ ಆದಾಯ 600 ಕೋಟಿ ಅಂತ ತೋರಿಸಿದ್ದಾರೆ. ಏನೂ ಇಲ್ಲದ ವ್ಯಕ್ತಿ ೬೦೦ ಕೋಟಿ ತೋರಿಸಿದ್ದಾರೆ. ಭ್ರಷ್ಟ ಸಂಸದ ಬೇಕಾ..? ಸಾದಸೀದಾ ವ್ಯಕ್ತಿತ್ವವುಳ್ಳ ಮಂಜುನಾಥ್ ಅವರು ಬೇಕಾ.. ದೇಶ ಒಡೆಯುವ ವ್ಯಕ್ತಿ ಬೇಕಾ.? ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.

ಚನ್ನಪಟ್ಟಣ: ಡಿ.ಕೆ.ಸುರೇಶ್ 12 ವರ್ಷ ಸಂಸದರಾಗಿದ್ದವರು. ನಾಮಪತ್ರ ಸಲ್ಲಿಕೆ ವೇಳೆ ಅವರ ಆದಾಯ 600 ಕೋಟಿ ಅಂತ ತೋರಿಸಿದ್ದಾರೆ. ಏನೂ ಇಲ್ಲದ ವ್ಯಕ್ತಿ ೬೦೦ ಕೋಟಿ ತೋರಿಸಿದ್ದಾರೆ. ಭ್ರಷ್ಟ ಸಂಸದ ಬೇಕಾ..? ಸಾದಸೀದಾ ವ್ಯಕ್ತಿತ್ವವುಳ್ಳ ಮಂಜುನಾಥ್ ಅವರು ಬೇಕಾ.. ದೇಶ ಒಡೆಯುವ ವ್ಯಕ್ತಿ ಬೇಕಾ.? ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರಶ್ನಿಸಿದರು.

ತಾಲೂಕಿನ ಕೋಡಂಬಳ್ಳಿ ಗ್ರಾಮದ ಬಳಿ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಆರ್ಥಿಕ ಮಂತ್ರಿಯಾಗಿದ್ದಾರೆ. ಅವರು ಚುನಾವಣೆಗೆ ನಿಲ್ಲಬೇಕು ಅಂದ್ರೆ ದುಡ್ಡಿಲ್ಲ ಅಂದ್ರು, ಇದರ ಅರ್ಥ ಪ್ರಾಮಾಣಿಕವಾಗಿ ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಕುಡಿಯೋದಕ್ಕೆ ನೀರಿಲ್ಲ, ಕರೆಂಟ್ ಇಲ್ಲದೆ ಜನ ಪರದಾಡುವಂತಾಗಿದೆ. ಅವರು ಚನ್ನಪಟ್ಟಣದಲ್ಲಿ ಸೀರೆ, ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ. ಆದರೆ, ಮಂಜುನಾಥ್ ಪರವಾಗಿ ಜನರೇ ಎದ್ದು ನಿಂತಿದ್ದಾರೆ ಎಂದರು.

ಚುನಾವಣೆ ಆದ್ಮೆಲೆ ಗ್ಯಾರಂಟಿ ಇರಲ್ಲ:

ಡಾ. ಮಂಜುನಾಥ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಯದೇವ ಆಸ್ಪತ್ರೆ ಕೀರ್ತಿ ಹೆಚ್ಚಿಸಿದವರು. ಡಾಕ್ಟರ್ ಮಂಜುನಾಥ್ ಚುನಾವಣೆ ಸ್ಪರ್ಧೆಗೆ ಒಪ್ಪಿರಲಿಲ್ಲ. ನಾವೆಲ್ಲರೂ ಸೇರಿ ಅವರ ಒಪ್ಪಿಸಿ ಕರೆತಂದಿದ್ದೇವೆ. ನರೇಂದ್ರ ಮೋದಿಯವರ ಸಂಫುಟದಲ್ಲಿ ಮಂತ್ರಿಯಾಗಿ ಆರೋಗ್ಯ ಕ್ಷೇತ್ರದ ಕೆಲಸ ಮಾಡಬೇಕು ಎಂಬುದು ಎಲ್ಲರ ಆಸೆ ಎಂದರು.

ದೆಹಲಿಯಲ್ಲಿ ನಮ್ಮ ವರಿಷ್ಠರು ಸಭೆ ಕರೆದಿದ್ದರು. ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ ಎಲ್ಲರೂ ಸಭೆ ನಡೆಸಿದರು. ರಾಜ್ಯದಲ್ಲಿ ೨೮ ಕ್ಷೇತ್ರ ಗೆಲ್ಲಬೇಕು ಅಂತ ಸಭೆ ಮಾಡಲಾಗಿದೆ. ಈ ವಿಚಾರವಾಗಿ ಸಮನ್ವಯ ಸಭೆ ಮಾಡಲಾಗಿದೆ. ಸಭೆಯಲ್ಲಿ ದೇವೇಗೌಡರು ಮೋದಿಯವರ ಕೈ ಬಲಪಡಿಸಬೇಕು. ಇದು ಅವರ ಕೊನೆಯ ಆಸೆ ಅಂತ ಸಭೆಯಲ್ಲಿ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎರಡೂ ಪಕ್ಷದ ಮುಖಂಡರು ಒಂದಾಗಿ ಚುನಾವಣೆ ನಡೆಸಿದ್ದಲ್ಲಿ ಲಕ್ಷಕ್ಕೂ ಅಧಿಕ ಮತಗಳಲ್ಲಿ ಮಂಜುನಾಥ್ ಗೆಲ್ಲುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು, ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಮು, ಎಸ್.ಲಿಂಗೇಶ್ ಕುಮಾರ್, ಹಾಪ್‌ಕಾಮ್ಸ್ ದೇವರಾಜು, ಸಿ.ಪಿ.ರಾಜೇಶ್ ಇತರರಿದ್ದರು.

ಬಾಕ್ಸ್.................

ಸುರೇಶ್ ಮೊದಲ ಚುನಾವಣೆ ವೇಳೆ ಆದಾಯ ಎಷ್ಟಿತ್ತು?

ಚನ್ನಪಟ್ಟಣ: ಸುರೇಶ್ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಸುಮಾರು 600 ಕೋಟಿ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ. ತಿಂಗಳಿಗೆ 4 ಕೋಟಿ ಸಂಪಾದನೆ ಅಂತ ತೋರಿಸಿದ್ದಾರೆ. ಇದರಿಂದಲೇ ಪ್ರಾಮಾಣಿಕವಾಗಿ ಯಾರು ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಟ್ ಕಾಲರ್ ವ್ಯಕ್ತಿ ಬೇಕೋ, ಜನರ ಕಷ್ಟಕ್ಕೆ ಸ್ಪಂದಿಸೋ ವ್ಯಕ್ತಿ ಬೇಕೋ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳೆದ ೧೨ ವರ್ಷಗಳ ಹಿಂದೆ ಡಿ.ಕೆ.ಸುರೇಶ್ ಮೊದಲ ಬಾರಿ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗ ಅವರ ಆದಾಯ ಎಷ್ಟಿತ್ತು.? ಈಗ ಅವರ ಆದಾಯ ಎಷ್ಟಿದೆ? ಇದರಿಂದಲೇ ಗೊತ್ತಾಗುತ್ತೆ ಪ್ರಾಮಾಣಿಕವಾಗಿ ಯಾರು ಕೆಲಸ ಮಾಡಿದ್ದಾರೆಂದು. ವೈಟ್ ಕಾಲರ್ ಬಂದ್ರೆ ಏನು ಪ್ರಯೋಜನ ಅಂತ ಜನ ತೀರ್ಮಾನ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು. ಪೊಟೋ೨೯ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಬಳಿ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಯನ್ನು ಡಾ.ಮಂಜುನಾಥ್‌, ಮಾಜಿ ಸಚಿವ ಯೋಗೇಶ್ವರ್‌ ಇತರರು ಉದ್ಘಾಟಿಸಿದರು.