ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ಮೇಲಿನ ನೇರ ದಾಳಿ: ಆರೋಪ

| Published : Apr 05 2025, 12:47 AM IST

ಸಾರಾಂಶ

ವಕ್ಫ್ ತಿದ್ದುಪಡಿ ಮಸೂದೆ-2024 ವಿರೋಧಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ನಗರದ ಹಳೇ ಪಿ.ಬಿ. ರಸ್ತೆಯ ಮದೀನಾ ಮಸೀದಿ ಸಮೀಪ ಶುಕ್ರವಾರ ಪ್ರತಿಭಟಿಸಲಾಯಿತು. ಅಲ್ಲದೇ, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ-2025 ವಿರುದ್ಧ ಘೋಷಣೆ ಕೂಗಿದರು.

ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ-2024 ವಿರೋಧಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ನಗರದ ಹಳೇ ಪಿ.ಬಿ. ರಸ್ತೆಯ ಮದೀನಾ ಮಸೀದಿ ಸಮೀಪ ಶುಕ್ರವಾರ ಪ್ರತಿಭಟಿಸಲಾಯಿತು. ಅಲ್ಲದೇ, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ-2025 ವಿರುದ್ಧ ಘೋಷಣೆ ಕೂಗಿದರು.

ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ತಾಹೀರ್ ಸಮೀರ್ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಹಕ್ಕುಗಳ ಮೇಲೆ ನೇರ ದಾಳಿಯಾಗಿದೆ. ಭಾರತ ಸಂವಿಧಾನದ ಧಾರಾ 25, 26 ಮತ್ತು 30ರ ಸ್ಪಷ್ಟ ಉಲ್ಲಂಘನೆಯಾಗಿದೆ. ಧಾರಾ 25 ಧರ್ಮವನ್ನು ಅಭ್ಯಾಸ ಮಾಡುವ, ಪಾಲನೆ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕು ನೀಡುತ್ತದೆ. ಧಾರಾ 26 ಧಾರ್ಮಿಕ ಸಂಸ್ಥೆಗಳಿಗೆ ಸ್ವತಂತ್ರವಾಗಿ ನಿರ್ವಹಣೆಯ ಹಕ್ಕು ನೀಡುತ್ತದೆ. ಧಾರಾ 30 ಅಲ್ಪಸಂಖ್ಯಾತ ಸಮುದಾಯಗಳಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆಯ ಹಕ್ಕನ್ನು ಒದಗಿಸುತ್ತದೆ ಎಂದರು.

ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವ ಪ್ರತಿಜ್ಞೆ ಮಾಡಿದ್ದೇವೆ. ದೇಶವ್ಯಾಪಿ ಮುಸ್ಲಿಮರು ಹೋರಾಟ ಮುಂದುವರಿಸುತ್ತಾರೆಂಬ ವಿಶ್ವಾಸವೂ ಇದೆ ಎಂದು ತಾಹೀರ್ ಸಮೀರ್ ಹೇಳಿದರು.

ಒಕ್ಕೂಟದ ಶೋಯಬ್ ಅಹಮ್ಮದ್‌, ಸೈಯದ್ ಅಹಮ್ಮದ್, ಖಮರ್ ಅಲಿ, ಸೈಯದ್ ತಾಹೀರ್, ಗೌಸ್, ಮೊಹಿದ್ದೀನ್, ಶಹನವಾಜ್‌, ನದೀಮ್, ಕಬೀರ್ ಲಾಲ್, ಅಹಮ್ಮದ್ ಅಲಿ, ರಹೀಂ ಇತರರು ಪ್ರತಿಭಟನೆಯಲ್ಲಿದ್ದರು.

- - -

-4ಕೆಡಿವಿಜಿ3, 4: