ಸಾರಾಂಶ
ಕರ್ನಾಟಕದಲ್ಲಿ ವಕ್ಫ್ ಆಡಳಿತ ಮಂಡಲಿ ಕಬಳಿಸಿರುವ ಭೂಮಿ, ಇನ್ನಿತರೆ ವಿಚಾರಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಲು ಪಕ್ಷದ ವತಿಯಿಂದ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ನಡೆಸಿ ಮಾಹಿತಿಯನ್ನು ರಾಜ್ಯ ಬಿಜೆಪಿ ಮೂಲಕ ಕೇಂದ್ರ ಸರ್ಕಾರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್ ತಿಳಿಸಿದ್ದಾರೆ.
ಚಳ್ಳಕೆರೆ: ಕರ್ನಾಟಕದಲ್ಲಿ ವಕ್ಫ್ ಆಡಳಿತ ಮಂಡಲಿ ಕಬಳಿಸಿರುವ ಭೂಮಿ, ಇನ್ನಿತರೆ ವಿಚಾರಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಲು ಪಕ್ಷದ ವತಿಯಿಂದ ಮೂರು ತಂಡಗಳು ರಾಜ್ಯಾದ್ಯಂತ ಪ್ರವಾಸ ನಡೆಸಿ ಮಾಹಿತಿಯನ್ನು ರಾಜ್ಯ ಬಿಜೆಪಿ ಮೂಲಕ ಕೇಂದ್ರ ಸರ್ಕಾರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ, ಚಳ್ಳಕೆರೆ ನಗರದಲ್ಲೂ ಸಹ ಚರ್ಮದ ಮಂಡಿ ಹಾಗೂ ಬೆಂಗಳೂರು ರಸ್ತೆಯ ಈದ್ಗಾ ಮೈದಾನದ ಪಕ್ಕದ ಜಾಗವನ್ನು ವಕ್ಫ್ ಮಂಡಳಿ ಹೆಸರಿಗೆ ನೊಂದಾಯಿಸಬೇಕೆಂಬ ಪುಕಾರು ಎದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿನಾರಾಯಣಸ್ವಾಮಿ, ಸಿ.ಟಿ. ರವಿ, ಎಂಎಲ್‌ಸಿ ಕೆ.ಎಸ್. ನವೀನ್, ಜಿಲ್ಲಾಧ್ಯಕ್ಷ ಎ. ಮುರುಳಿ ತಂಡ ಗುರುವಾರ ಸಂಜೆ 5ಕ್ಕೆ ಭೇಟಿ ನೀಡಲಿದೆ ಎಂದು ಮಾಹಿತಿ ನೀಡಿದರು.ಮಾದಿಗ ಮಹಾಸಭಾ ಹರ್ಷ ಚಳ್ಳಕೆರೆ ನಗರದ ಮಾದಿಗ ಸಮುದಾಯದ ಆಸ್ತಿಯನ್ನು ವಕ್ಪ್ ಮಂಡಳಿ ತಮಗೆ ವರ್ಗಾಯಿಸುವಂತೆ ಮನವಿ ನೀಡಿದ ಬಗ್ಗೆ ಪರಿಶೀಲನೆ ನಡೆಸಲು ಬಿಜೆಪಿ ತಂಡ ಆಗಮಿಸುತ್ತಿರುವುದನ್ನು ಜಿಲ್ಲಾ ಮಾದಿಗ ಮಹಾಸಭಾದ ಅಧ್ಯಕ್ಷ ಎಂ. ಶಿವಮೂರ್ತಿ ಸ್ವಾಗತಿಸಿದ್ದಾರೆ. ಕಳೆದ ಸುಮಾರು 60 ವರ್ಷಗಳಿಂದ ಮಾದಿಗ ಸಮುದಾಯದ ಚರ್ಮ ಉದ್ಯಮದವರಿಗೆ ಈ ಜಾಗ ಮೀಸಲಿದ್ದರೂ, ಇಲ್ಲಿನ ಕೆಲವರು ಜಾಗದ ಪರಾಭಾರೆಗೆ ಯತ್ನಿಸಿದ್ದನ್ನು ಅವರು ಖಂಡಿಸಿದ್ದಾರೆ. ಬಿಜೆಪಿ ಸಂಶೋಧನಾ ತಂಡದ ಆಗಮನದಿಂದ ಸಮುದಾಯಕ್ಕೆ ನ್ಯಾಯಸಿಗಲಿದೆ ಎಂಬ ನಂಬಿಕೆ ನನ್ನದು ಎಂದಿದ್ದಾರೆ.