ಸಾರಾಂಶ
ವಕ್ಫ್ ಕಾಯ್ದೆ ತಿದ್ದುಪಡಿಗೆ ನಾವು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದೆವು. ಜೆಪಿಸಿ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಾವು ಸಾಕಷ್ಟು ಪ್ರಶ್ನೆ ಕೇಳಿದ್ವಿ, ಆದ್ರೂ ಒಂದೇ ಉದ್ದೇಶ ಎಂಬಂತೆ ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ಸಾಗಿದೆ, ಏನಾಗುತ್ತದೋ ನೋಡೋಣವೆಂದು ರಾಜ್ಯಸಬಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ವಕ್ಫ್ ಕಾಯ್ದೆ ತಿದ್ದುಪಡಿಗೆ ನಾವು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದೆವು. ಜೆಪಿಸಿ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಾವು ಸಾಕಷ್ಟು ಪ್ರಶ್ನೆ ಕೇಳಿದ್ವಿ, ಆದ್ರೂ ಒಂದೇ ಉದ್ದೇಶ ಎಂಬಂತೆ ವಕ್ಫ್ ಕಾಯಿದೆಗೆ ತಿದ್ದುಪಡಿ ಮಾಡಿದ್ದಾರೆ. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ಸಾಗಿದೆ, ಏನಾಗುತ್ತದೋ ನೋಡೋಣವೆಂದು ರಾಜ್ಯಸಬಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮುಜರಾಯಿ ಇಲಾಖೆ, ಸಿಖ್ ಕಮಿಟಿ, ಕ್ರಿಶ್ಚಿಯನ್ ಸೇರಿದಂತೆ ದೇಶದಲ್ಲಿ ಸಾಕಷ್ಟು ಕಾಯ್ದೆಗಳಿವೆ, ಈ ಎಲ್ಲಾ ಆ್ಯಕ್ಟ್‌ಗಳಿಗೆ ದೇಶದಲ್ಲಿ ಒಂದೇ ಥರ ರೂಲ್ಸ್ ರೆಗೂಲೆಶನ್ಸ್ ಮಾಡೋಣ ಅಂದೆವು. ಆದರೆ ನಮ್ಮ ಯಾವ ಮನವಿ ಪುರಸ್ಕರಿಸದೇ ವಕ್ಫ್ ಕಾಯ್ದೆ ತಿದ್ದುಪಡಿ ಮಾಡೋ ಒಂದೇ ಮೈಂಡ್‌ಸೆಟ್‌ನಿಂದ ಈ ಕಾಯಿದೆ ತಿದ್ದುಪಡಿಯಾಗಿದೆ ಎಂದರು.
ರಾಜ್ಯಸಭಾ, ಲೋಕಸಭಾ ಎರಡು ಕಡೆ ಬಹುಮತ ಅವರದ್ದಿದೆ, ಈ ಕಾರಣ ಬಿಲ್ ಪಾಸ್ ಮಾಡಿದ್ದಾರೆ. ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ಸಾಕಷ್ಟು ಜನ ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡಿದ್ದಾರೆ. ಸರ್ಕಾರ ಯಾವುದೇ ಕಾಯ್ದೆಗೆ ತಿದ್ದುಪಡಿ ಮಾಡಿದ್ರೆ ಪ್ರತಿಭಟನೆ ಮಾಡಲು ಜನರಿಗೆ ಅವಕಾಶವಿದೆ. ವಕ್ಫ್ ಕಾಯ್ದೆ ತಿದ್ದುಪಡಿ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆಯಿದೆ, ಏನಾಗುತ್ತೆ ನೋಡೊಣ ಎಂದರು.ಕೇಂದ್ರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಿ :
ಭಾರತದಲ್ಲಿನ ಪಾಕ್ ಪ್ರಜೆಗಳನ್ನ ಹೊರಹಾಕೋ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ನಾಸೀರ್ ಹುಸೇನ್ ಹೇಳಿದರು.ಉಗ್ರರಿಗೆ ಪಾಕಿಸ್ತಾನದ ಬೆಂಬಲವಿತ್ತು ಅನ್ನೊದು ಸಾಬೀತಾಗಿದೆ, ಪಾಕ್ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳೊ ಕ್ರಮಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದರು. ಭಾರತದಲ್ಲಿ ಉಗ್ರರು ಮತ್ತೆಂದು ದಾಳಿ ನಡೆಸದ ಹಾಗೇ ಪಾಕ್‌ಗೆ ಕೇಂದ್ರ ಸರ್ಕಾರ ಪಾಠ ಕಲಿಸಬೇಕು,
ಇಂಡಿಯಾ ಅಲಯನ್ಸ್ ಅಷ್ಟೇ ಅಲ್ಲ, ಎಲ್ಲಾ ಪಕ್ಷಗಳು ಈ ವಿಚಾರದಲ್ಲಿ ಕೇಂದ್ರದ ಬೆನ್ನಿಗೆ ನಿಲ್ಲಲಿವೆ ಎಂದೂ ನಾಸೀರ್ ಹುಸೇನ್ ಹೇಳಿದರು.