ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಕ್ಫ್ ಸದಸ್ಯರಿಗೆ ಸನ್ಮಾನ

| Published : Feb 13 2024, 12:48 AM IST

ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಕ್ಫ್ ಸದಸ್ಯರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರ: ಪಟ್ಟಣದ ಮದರಸಾ ಏ ದಾರೂಲ್ ಉಲೂಮ್ ಎಜುಕೇಶನ್ ಸೊಸೈಟಿಯಲ್ಲಿ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಆಸೀಫ್ ಅಲಿ ಅವರನ್ನು ಸಂಸ್ಥೆಯ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆಸೀಫ್ ಅಲಿ, ವಾರ್ಷಿಕ ಸ್ನೇಹ ಸಮ್ಮೇಳನಗಳು ಶೈಕ್ಷಣಿಕ ಉನ್ನತಿಗೆ ಪ್ರೇರಣೆ ನೀಡುತ್ತವೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಟ್ಟಣದ ಮದರಸಾ ಏ ದಾರೂಲ್ ಉಲೂಮ್ ಎಜುಕೇಶನ್ ಸೊಸೈಟಿಯಲ್ಲಿ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಆಸೀಫ್ ಅಲಿ ಅವರನ್ನು ಸಂಸ್ಥೆಯ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆಸೀಫ್ ಅಲಿ, ವಾರ್ಷಿಕ ಸ್ನೇಹ ಸಮ್ಮೇಳನಗಳು ಶೈಕ್ಷಣಿಕ ಉನ್ನತಿಗೆ ಪ್ರೇರಣೆ ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ವೇದಿಕೆಗಳ ಸದುಪಯೋಗ ಪಡೆದುಕೊಂಡು ಗುಣಾತ್ಮಕ ಚಿಂತನೆಯಲ್ಲಿ ತೊಡಗಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಶಾಲಾಭಿವೃದ್ಧಿ ಸಲುವಾಗಿ ವಕ್ಫ್ ಸದಸ್ಯರಿಗೆ ಶಾಲಾ ಆಡಳಿತ ಮಂಡಳಿ ಮನವಿ ಸಲ್ಲಿಸಿತು. ಮೌ.ಝಕ್ರಿಯಾಸಾಹೇಬ್, ಅಂಜುಮನ್ ಅಧ್ಯಕ್ಷ ಸಜನಸಾಬ್‌ ಪೆಂಡಾರಿ, ವಕ್ಫ್‌ ಸದಸ್ಯ ನಬಿ ಯಕ್ಸಂಬಿ, ಹಿರಿಯರಾದ ನಜೀರ್ ಅತ್ತಾರ, ದಾವಲಸಾಬ ನಗಾಚಾರ್‌, ಡಾ.ಜಬ್ಬಾರ್‌ ಯಕ್ಸಂಬಿ, ಜಮೀರ್‌ ಯಕ್ಸಂಬಿ, ಮೆಹಬೂಬ್‌ ಜೀರಗಾಳ, ಸಿರಾಜ್ ಪಾಂಡು, ಶಿಕ್ಷಕರಾದ ಮೂಸಾ ಆಲಾಸ್‌, ಯಾಕೂಬ್ ಆಲಾಸ್‌, ಅಸ್ಗರ್‌ ಫೆಂಡಾರಿ, ಬಂದೆನವಾಜ್‌ ಸಿಂದಗಿ, ರಾಜೇಸಾಬ ಐನಾಪೂರ, ಶಿಕಂದರ್‌ ಮೋಪಗಾರ, ಯಾಸೀನ್ ಐನಾಪೂರ ಹಾಗೂ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ಹಾಗೂ ಪಾಲಕ ಪೋಷಕರು ಪಾಲ್ಗೊಂಡಿದ್ದರು.