ಸಾರಾಂಶ
ಉಕ್ರೇನ್ ಯುದ್ದದಲ್ಲಿ ಅಮಾಯಕರು ಸತ್ತರು, ಯುದ್ದವೇ ಪರಿಹಾರವಲ್ಲ, ಅದು ಕೊನೆಯ ಅಸ್ತ್ರ ಎಂದು ಸಂಸದ ಸುನೀಲ್ ಬೋಸ್ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಉಕ್ರೇನ್ ಯುದ್ದದಲ್ಲಿ ಅಮಾಯಕರು ಸತ್ತರು, ಯುದ್ದವೇ ಪರಿಹಾರವಲ್ಲ, ಅದು ಕೊನೆಯ ಅಸ್ತ್ರ ಎಂದು ಸಂಸದ ಸುನೀಲ್ ಬೋಸ್ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಹಲ್ಗಾಮ್ ಘಟನೆಯ ಹಿಂದೆ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.
ಉಗ್ರರ ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಬೇಕು. ಘಟನೆಗೆ ಯಾರು ಹೊಣೆ ಎಂಬುದಕ್ಕಿಂತ ಹೆಚ್ಚಾಗಿ ಮುಂದೆ ಇಂತಹ ಘಟನೆ ಆಗದಂತೆ ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.ಪಾಕಿಸ್ತಾನಕ್ಕೆ ಉತ್ತರ ಕೊಡಲು ಭಾರತ ಬಲಿಷ್ಟವಾಗಿದೆ. ಭಾರತ ಸೌಹಾರ್ದತೆ ಬಯಸುವ ರಾಷ್ಟ್ರ, ಯಾವತ್ತು ನಾವೇ ಮೇಲೆ ಬಿದ್ದು ಯುದ್ದ ಮಾಡಿದ ಇತಿಹಾಸ ಇಲ್ಲ ಎಂದರು.
ಸಿಂಧೂ ನದಿ ನೀರು ನಿಲ್ಲಿಸಿದ್ರೆ ರಕ್ತ ಹರಿಯುತ್ತೆ ಎಂಬ ಪಾಕಿಸ್ತಾನಿ ಬಿಲಾವಲ್ ಬುಟ್ಟೊ ಹೇಳಿಕೆಗೂ ಪ್ರತಿಕ್ರಿಯಿಸಿ, ಒಕ್ಕೂಟ ವ್ಯವಸ್ಥೆಯಲ್ಲಿ ರೂಲ್ಸ್ ಎಂಡ್ ರೆಗ್ಯುಲೇಷನ್ ಇರುತ್ತದೆ ಅಲ್ಲವೇ ಎಂದರು. ಅಷ್ಟು ಮಂದಿ ಪ್ರವಾಸಿಗರು ಇದ್ದ ಮೇಲೆ ಸೆಕ್ಯೂಟಿರಿ ವ್ಯವಸ್ಥೆ ಮಾಡಬೇಕಿತ್ತು. ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವಿದು, ಎಲ್ ಓ ಸಿಯಲ್ಲಿ ಪದೇ ಪದೆ ಪಾಕ್ ನಿಂದ ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ಕೊಡೋಕೆ ಭಾರತ ಬಲಿಷ್ಟವಾಗಿದೆ ಎಂದರು.