ಸಾರಾಂಶ
ವಾರ್ಡ್-1ರ ಸ್ಕೇಟಿಂಗ್ ಮೈದಾನಕ್ಕೆ ಮಣ್ಣಿನಿಂದ ಸಮತಟ್ಟು ಮಾಡಿ ಚರಂಡಿ ಅಭಿವೃದ್ಧಿ ಹಾಗೂ ಫೆನ್ಸಿಂಗ್ ರಿಪೇರಿ ಮಾಡುವ ಕಾಮಗಾರಿ,
ಕನ್ನಡಪ್ರಭ ವಾರ್ತೆ ಮೈಸೂರು
ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 4, 1, 2 ರಲ್ಲಿ ಒಟ್ಟು 2.50 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು.ವಾರ್ಡ್-4ರ ಲೋಕನಾಯಕನಗರದ ಅಡ್ಡ ರಸ್ತೆಗಳು, ಅಕ್ಕ ಪಕ್ಕದ ರಸ್ತೆಗಳು ಮತ್ತು ಚರಂಡಿ, ಉದ್ಯಾನವನ ಅಭಿವೃದ್ಧಿ, ನಿಂಗಯ್ಯನಕೆರೆಯ ಮುಖ್ಯ ರಸ್ತೆಗೆ ಚರಂಡಿ ಹಾಗೂ ಡೆಕ್ ನಿರ್ಮಾಣ, ಭೈರವೇಶ್ವರ ನಗರದ ಅಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ವಾರ್ಡ್-1ರ ಸ್ಕೇಟಿಂಗ್ ಮೈದಾನಕ್ಕೆ ಮಣ್ಣಿನಿಂದ ಸಮತಟ್ಟು ಮಾಡಿ ಚರಂಡಿ ಅಭಿವೃದ್ಧಿ ಹಾಗೂ ಫೆನ್ಸಿಂಗ್ ರಿಪೇರಿ ಮಾಡುವ ಕಾಮಗಾರಿ, ಹೆಬ್ಬಾಳು 3ನೇ ಹಂತದ ಸುಬ್ರಮಣ್ಯನಗರ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಮತ್ತು ಚರಂಡಿ ಅಭಿವೃದ್ಧಿ, ಶುಭೋದಿನಿ ಛತ್ರದ ಬಳಿ ಡೆಕ್ ಸ್ಲಾಬ್ ನಿರ್ಮಾಣ, ಹೆಬ್ಬಾಳು 1ನೇ ಹಂತದ ಲಕ್ಷ್ಮೀಕಾಂತನಗರದ ಸಹಕಾರ ಸಂಘದ ಹತ್ತಿರ ಚರಂಡಿ ಹಾಗೂ ಹೊಯ್ಸಳ ವೃತ್ತದ ಪಕ್ಕ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.ಹಾಗೆಯೇ, ವಾರ್ಡ್-2ರ ಮಂಚೇಗೌಡನಕೊಪ್ಪಲಿನ ಅಭಿಷೇಕ್ ವೃತ್ತದ ಬಳಿ ಕಲ್ವರ್ಟ್ ವಿಸ್ತರಣೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗೇಟ್ ಅಳವಡಿಸುವ ಕಾಮಗಾರಿ, ಸರ್ವೇ ನಂ.89ರಲ್ಲಿ ಕಾಂಕ್ರೀಟ್ ರಸ್ತೆ ಎಂ.ಜಿ. ಕೊಪ್ಪಲಿನ ಲಾಯರ್ ಜಯರಾಂ ಅವರ ಮನೆ ಮುಂಭಾಗ ರಸ್ತೆಯಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ನಾಗಣ್ಣ, ಅಪ್ಪಾಜಿಗೌಡ, ಮಂಜು, ಶ್ರೀನಿವಾಸ್, ಅರವಿಂದ್, ವೆಂಕಟೇಶ್, ಜಯರಾಮೇಗೌಡ, ಕುಮಾರ್, ದಿನೇಶ್, ಭೈರಪ್ಪ, ಗೋಪಾಲಸ್ವಾಮಿ, ಪ್ರಶಾಂತ್, ಸಂತೋಷ್, ಜೇಕಬ್, ರವಿ, ರವಿ, ಶ್ರೀಧರ್, ಲೋಕೇಶ್, ಪುಟ್ಟರಾಜು, ಮಹದೇವಣ್ಣ, ಮೂರ್ತಿ, ಜಗದೀಶ್, ರಾಮಚಂದ್ರು, ರಮೇಶ್, ಮಹೇಶ್ ಮಸಿಯಪ್ಪ, ವೆಂಕಟೇಶ್, ಚಂದ್ರು, ಪಾಲಿಕೆ ಅಧಿಕಾರಿಗಳಾದ ಮನುಗೌಡ, ಅಶ್ವಿನಿ, ಪ್ರಭಾಮಣಿ ಇದ್ದರು.