ಸಾರಾಂಶ
ಉತ್ತರ ಪ್ರದೇಶದ ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಏಕೆಂದರೆ ಗಲಭೆ ನಡೆದ ಮಸೀದಿ ಬಳಿಯ ಕೋಟ್ ಗಾರ್ವಿ ಪ್ರದೇಶದಿಂದ ಪಾಕಿಸ್ತಾನ ನಿರ್ಮಿತ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಂಭಲ್: ಉತ್ತರ ಪ್ರದೇಶದ ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಏಕೆಂದರೆ ಗಲಭೆ ನಡೆದ ಮಸೀದಿ ಬಳಿಯ ಕೋಟ್ ಗಾರ್ವಿ ಪ್ರದೇಶದಿಂದ ಪಾಕಿಸ್ತಾನ ನಿರ್ಮಿತ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 6 ಖಾಲಿ ಶೆಲ್‌ಗಳು ಮತ್ತು ಎರಡು ಮಿಸ್‌ಫೈರ್ಡ್ ಕಾರ್ಟ್ರಿಡ್ಜ್‌ಗಳು ಇದರಲ್ಲಿ ಸೇರಿವೆ. ಇವು ಹಿಂಸೆಗೆ ಪಾಕಿಸ್ತಾನದ ಸಂಭವನೀಯ ಸಂಪರ್ಕವನ್ನು ಬಹಿರಂಗಪಡಿಸಿವೆ.
ಸಂಭಲ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಶಿರೀಶ್ ಚಂದ್ರ ಮಾತನಾಡಿ, ‘2 ಮಿಸ್‌ಫೈರ್ಡ್ 9 ಎಂಎಂ ಕಾರ್ಟ್ರಿಡ್ಜ್‌ಗಳು ಮತ್ತು ಪಾಕಿಸ್ತಾನ್ ಆರ್ಡನೆನ್ಸ್ ಫ್ಯಾಕ್ಟರಿ (ಪಿಒಎಫ್) ತಯಾರಿಸಿದ 1 ಖಾಲಿ ಶೆಲ್ ಜತೆಗೆ ಎರಡು 12 ಬೋರ್ ಶೆಲ್‌ಗಳು ಮತ್ತು ಎರಡು 32 ಬೋರ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಪಾಕ್ ನಿರ್ಮಿತ. ಇದು ನಮ್ಮ ತನಿಖೆಯನ್ನು ಮತ್ತೊಂದು ಆಯಾಮಕ್ಕೆ ಕೊಂಡೊಯ್ದಿದೆ’ ಎಂದರು.ಇದಲ್ಲದೆ ವಿಧಿವಿಜ್ಞಾನ ತಜ್ಞರು ಅಮೆರಿಕದಲ್ಲಿ ತಯಾರಿಸಿದ ಕಾರ್ಟ್ರಿಡ್ಜ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.