ಸಾರಾಂಶ
ನದಿಯಲ್ಲಿ ಕ್ಯಾರಿಬ್ಯಾಗ್, ಬಟ್ಟೆ, ಮಾಂಸ, ಕಲ್ಯಾಣ ಮಂಟಪಗಳಲ್ಲಿ ಊಟದ ಟೇಬಲ್‌ಗೆ ಹಾಕುವ ಪ್ಲಾಸ್ಟಿಕ್, ಕಾಗದದ ಶೀಟ್ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯಗಳನ್ನು ತಂದು ಹಾಕಿರುವುದರಿಂದ ತ್ಯಾಜ್ಯ ಗುಡ್ಡೆಗಳು ಶೇಖರಣೆಯಾಗಿವೆ
ಗೌರಿಬಿದನೂರು : ಉತ್ತರಪಿನಾಕಿನಿ ಒಡಲಿಗೆ ಕೊಳಚೆನೀರು ಸೇರುತ್ತಿರುವುದು ಒಂದೆಡೆಯಾದರೆ, ನದಿಪಾತ್ರದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಸುರಿಯಲಾಗುತ್ತಿದೆ. ಪರಿಣಾಮ, ಕಸದ ರಾಶಿಯೇ ಅಲ್ಲಿ ಶೇಖರಣೆಯಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ನದಿಗೆ ಜನರು ವಿಷ ಉಣಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆಗಳು ಮಾತ್ರ ಕಣ್ಣುಮುಚ್ಚಿ ಕುಳಿತಿವೆ. ನದಿಯ ಮೇಲೆ ಕಟ್ಟಲಾಗಿರುವ ಸೇತುವೆಯ ಇಕ್ಕೆಲಗಳಲ್ಲಿ ಕಸದರಾಶಿಯೇ ತುಂಬಿಕೊಂಡಿದೆ. ಸೇತುವೆ ಮೇಲೆ ಹೋಗುವ ಸಾರ್ವಜನಿಕರುತ್ಯಾಜ್ಯವನ್ನು ರಾಶಿಯನ್ನು ನದಿಗೆ ಹಾಕುತ್ತಿದ್ದಾರೆ. ಇದರೊಂದಿಗೆ ಮದ್ಯಸೇವಿಸಿದ ಬಳಿಕ ಬಾಟಲಿಗಳನ್ನೂ ಅಲ್ಲಿಯೇ ಬಿಸಾಡುತ್ತಾರೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಭಾರಿ ಪ್ರಮಾಣದಲ್ಲಿ ಬಾಟಲಿಗಳು ಕಾಣುತ್ತಿವೆ. ಸ್ಥಳೀಯ ಆಡಳಿತ ಮೌನ
ನದಿಯಲ್ಲಿ ಕ್ಯಾರಿಬ್ಯಾಗ್, ಬಟ್ಟೆ, ಮಾಂಸ, ಕಲ್ಯಾಣ ಮಂಟಪಗಳಲ್ಲಿ ಊಟದ ಟೇಬಲ್‌ಗೆ ಹಾಕುವ ಪ್ಲಾಸ್ಟಿಕ್, ಕಾಗದದ ಶೀಟ್ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯಗಳನ್ನು ತಂದು ಹಾಕಿರುವುದರಿಂದ ತ್ಯಾಜ್ಯ ಗುಡ್ಡೆಗಳು ಶೇಖರಣೆಯಾಗಿವೆ ಹಾಗೂ ಮತ್ತೊಂದೆಡೆ, ನದಿಪಾತ್ರದ ಎರಡು ಕಡೆಗಳಲ್ಲಿ ತಾಲೂಕಿನ ಹಲವು ಕಡೆ ನದಿಯ ಜಾಗವನ್ನೇ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದಾರೆ. ಮತ್ತೆ ಕೆಲವರು ವ್ಯವಸಾಯಕ್ಕೆ ಬಳಸುತ್ತಿದ್ದಾರೆ. ಇಷ್ಟಾದರೂ ಸ್ಥಳೀಯ ಆಡಳಿತ ಮೈನವಾಗಿದೆ.ಇದರ ಜೊತೆಗೆ ನಗರದ ಹಲವು ಭಾಗಗಳ ಕೊಳಚೆ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಭಾಗಗಳಲ್ಲಿ ಗಿಡಗಳು ಬೆಳೆದ ಹಂದಿಗಳ ವಾಸ ಸ್ಥಾನವಾಗಿವೆ. ಇದು ನದಿಯೊ, ಕೊಳಚೆ ಪ್ರದೇಶವೂ ಎಂದು ಭಾಸವಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಆಡಳಿತ ಅಧಿಕಾರಿಗಳು ತ್ಯಾಜ್ಯವನ್ನು ನದಿಗೆ ಎಸೆಯದಂತೆ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೂಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಉತ್ತರ ಪಿನಾಕಿನಿ ನದಿಯನ್ನು ಚರಂಡಿ ಎಂದು ಗುರುತಿಸುವ ಸ್ಥಿತಿ ಬರುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಾಜಿ ಶಾಸಕ ಎನ್.ಎಚ್ ಶಿವಶಂಕರರೆಡ್ಡಿ ನದಿಯ ಸ್ವಚ್ಛತೆ ಮತ್ತು ಮರಳು ಗಾಣಿಗಾರಿಕೆ ನಡೆಯಲು ನದಿಯ ಎರಡು ಕಡೆ ಕಬ್ಬಿಣದ ಜಾಲರಿ ಅಳವಡಿಸಲು ಕ್ರಮವಹಿಸಿದ್ದರು. ಆ ಜಾಲರಿಗಳು ಕೆಲವು ತುಕ್ಕು ಹಿಡಿದು ಹಾಳಾದರೆ ಬಹಳಷ್ಟು ಕಳ್ಳರಪಾಲಾಗಿವೆ. ಉತ್ತರ ಪಿನಾಕಿನಿ ನದಿಗೆ ತಿಪ್ಪ ಗಾನಹಳ್ಳಿ ಕೆರೆ, ಶ್ರೀನಿವಾಸ್ ಸಾಗರ ಅಣೆಕಟ್ಟು, ಮಂಚೇನಹಳ್ಳಿ ಕೆರೆ, ದಂಡಿಗಾನಹಳ್ಳಿ ಕೆರೆ ಸೇರಿದಂತೆ ಹಲವು ಭಾಗಗಳಿಂದ ನೀರು ಸೇರುತ್ತದೆ.ನದಿ ಭಾಗದ ಗಡಿ ಗುರುತಿಲ್ಲದ ಕಾರಣ ಒತ್ತುವರಿ ಹೆಚ್ಚಾಗಿದೆ. ಎರಡೂ ಮಂಡೆಯ ಭಾಗದಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಿಲ್ಲ. ವರ್ಷಪೂರ್ತಿ ನೀರು ಹರಿಯಲು ಮೂಲಕಾರಣವಾದ ಜಲಾನಯನ ಪ್ರದೇಶದ ನೈಸರ್ಗಿಕ ಅರಣ್ಯ ಕಾಪಾಡುವ. ಜವಾಬ್ದಾರಿ ತಾಲ್ಲೂಕು ಆಡಳಿತದ ಮೇಲೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಯಾರಿಗೂ ಕಾಳಜಿ ಇಲ್ಲ
ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಂ.ಆರ್.ಲಕ್ಷ್ಮಿನಾರಾಯಣ್ ಪ್ರತಿಕ್ರಿಯೆ ನೀಡಿದ್ದು, ಜೀವನದಿಯಾಗಿ ವರ್ಷಪೂರ್ತಿ ಹರಿಯುತ್ತಿದ್ದ ಉತ್ತರಪಿನಾಕಿನಿ ಬರಡಾಗಿದೆ. ಈ ವರ್ಷ ಸುರಿದ ಮಳೆಗೆ ನದಿಗೆ ಮತ್ತೆ ಜೀವಕಳೆಬಂದಿದೆ. ಆದರ ಅಸ್ತಿತ್ವ ಕಾಪಾಡಬೇಕಾದ ಅಧಿಕಾರಿಗಳಾಗಲಿ, ಇಲಾಖೆಗಳಾಗಲಿ, ಸಾರ್ವಜನಿಕರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗಾಗಲೇ ನದಿಪಾತ್ರ ಒತ್ತುವರಿಯಾಗಿದೆ. ನದಿ, ಚರಂಡಿಯಂತಾಗಿದೆ, ಕಟ್ಟಡದ ತ್ಯಾಜ್ಯ, ಚರಂಡಿ ನೀರು, ಪ್ಲಾಸ್ಟಿಕ್ ಎಲ್ಲವೂ ನದಿಗೆ ಸೇರಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ..
ತಹಸೀಲ್ದಾರ್ ಏನಂತಾರೆ?
ನಗರಸಭೆಯಿಂದ ಸರ್ವೆ ನಡೆಯುತ್ತಿದೆ. ನದಿ ದಡದಲ್ಲಿ ಒಟ್ಟು 810 ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದಾರೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಂತಹವರಿಗೆ ಉಚಿತ ನಿವೇಶನಗಳನ್ನು ಹಂಚಿಕೆ ಮಾಡಲು ಪ್ರಾರಂಭಿಸಿದ ನಂತರ ನದಿ ಒತ್ತುವರಿ ತೆರವುಗೊಳಿಸಲಾಗುವುದು, ನದಿ ಪಾತ್ರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಸಾರ್ವವನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಹೇಳಿದ್ದಾರೆ.