ಸಾರಾಂಶ
ದಾಬಸ್‍ಪೇಟೆ: ಸ್ಥಳೀಯ ಕುಲುವನಹಳ್ಳಿ ಗ್ರಾಪಂ ವತಿಯಿಂದ, ಸ್ವಚ್ಛ ಸಂಕೀರ್ಣವನ್ನು ವ್ಯವಸ್ಥಿತವಾಗಿ ನಿರ್ಮಿಸಿ, ಘಟಕದ ಸುತ್ತಲೂ ಗಿಡ-ಮರಗಳನ್ನು ನೆಟ್ಟು ಉದ್ಯಾನವನದಂತೆ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಬೆಂಗ್ರಾ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಪ್ರಶಂಸಿಸಿದರು.

ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ದೊಡ್ಡೇರಿ ಕಾಲೋನಿ ಬಳಿ ಕುಲುವನಹಳ್ಳಿ ಗ್ರಾಪಂ ವತಿಯಿಂದ ನಿರ್ಮಿಸಿರುವ ಸುಸಜ್ಜಿತ ಕಸ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣವನ್ನು ವೀಕ್ಷಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ಕೊಡಬೇಕು. ಪಂಚಾಯತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಈ ಘಟಕವನ್ನು ಮಾದರಿಯಾಗಿ ನಿರ್ಮಿಸಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ದೊಡ್ಡೇರಿ ಗ್ರಾಮದ ಕೂಸಿನ ಮನೆ, ಅಂಗನವಾಡಿ ಕೇಂದ್ರದ ಆವರಣ, ಶಾಲಾ ಪರಿಸರ, ಕಲಿಕಾ ಸನ್ನಿವೇಶವನ್ನು ವೀಕ್ಷಿಸಿದರು.
ಈ ವೇಳೆ ಕುಲುವನಹಳ್ಳಿ ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷ ರಂಗನಾಥ್, ಸದಸ್ಯರು, ಪಿಡಿಒ ಮೋಹನ್ ಕುಮಾರ್, ಕಾರ್ಯದರ್ಶಿ ಧನಂಜಯ್ ಕುಮಾರ್, ಪಂಚಾಯತಿ ಸಿಬ್ಬಂದಿಗಳಾದ ಪವನ್, ರಂಗನಾಥ್, ದಿಲೀಪ್ ಇತರರಿದ್ದರು.ಫೆÇೀಟೋ 1 :
ಕುಲುವನಹಳ್ಳಿ ಗ್ರಾಪಂ ವತಿಯಿಂದ ದೊಡ್ಡೇರಿ ಕಾಲೋನಿ ಬಳಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣವನ್ನು ಬೆಂಗ್ರಾ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ವೀಕ್ಷಿಸಿದರು.