ಕಾವೇರಿ ನದಿಗೆ ತ್ಯಾಜ್ಯ: ಅಯ್ಯಪ್ಪ ಭಕ್ತರ ಆಕ್ರೋಶ

| Published : Jan 17 2025, 12:45 AM IST

ಸಾರಾಂಶ

ಕೊಟ್ಟಮುಡಿ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿಯ ಒಡಲಲ್ಲಿ ಕೊಳೆತ ಮೀನಿನ ರಾಶಿ ಹಾಗೂ ಕೋಳಿ ತ್ಯಾಜ್ಯದ ಕಂಡುಬಂದಿದ್ದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಸಾಮಾಜಿಕ ಪ್ರಜ್ಞೆ ಇಲ್ಲದವರು ಈ ಕೃತಿ ಎಸಗಿದ್ದಾರೆ ಆರೋಪಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆಗಳ ಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕೊಟ್ಟಮುಡಿ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿಯ ಒಡಲಲ್ಲಿ ಕೊಳೆತ ಮೀನಿನ ರಾಶಿ ಹಾಗೂ ಕೋಳಿ ತ್ಯಾಜ್ಯದ ಕಂಡುಬಂದಿದ್ದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಸಾಮಾಜಿಕ ಪ್ರಜ್ಞೆ ಇಲ್ಲದವರು ಈ ಕೃತಿ ಎಸಗಿದ್ದಾರೆ ಆರೋಪಿಗಳ ಪತ್ತೆ ಹಚ್ಚಿ ಕಠಿಣ ಶಿಕ್ಷೆಗಳ ಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಗುರುವಾರ ಬೆಳಗ್ಗೆ ಶಬರಿಮಲೆಯಿಂದ ಹಿಂತಿರುಗಿದ ನಾಪೋಕ್ಲು ವ್ಯಾಪ್ತಿಯ ಸುಮಾರು 25 ಅಯ್ಯಪ್ಪ ಮಾಲಧಾರಿ ಭಕ್ತರು ಕಾವೇರಿ ಪುಣ್ಯ ಸ್ನಾನಕ್ಕೆ ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಶಬರಿಮಲೆಗೆ ತೆರಳಿದ ಭಕ್ತರು ಪ್ರತಿ ವರ್ಷದಂತೆ ಕಾವೇರಿ ನದಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪುಣ್ಯ ಸ್ನಾನ ಮಾಡಿ ತಮ್ಮ ತಮ್ಮ ಮನೆಗೆ ತರಳುವುದು ವಾಡಿಕೆ. ಈ ವರ್ಷ ಈ ದುಷ್ಕೃತ್ಯ ಗೋಚರಿಸಿದೆ.ಇದರಿಂದಾಗಿ ನದಿ ಕಲುಷಿತಗೊಳ್ಳುವಂತೆ ಮಾಡಿರುವ ಕಾರಣದಿಂದಾಗಿ ಪುಣ್ಯ ಸ್ನಾನ ಮಾಡದೆ ಹಿಂತಿರುಗ ಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಇದೇ ನೀರನ್ನು ಬಳಸುತ್ತಾರೆ. ಸ್ಥಳಿಯ ಪಟ್ಟಣಕ್ಕೆ ಇಲ್ಲಿಂದಲೇ ಕಾವೇರಿ ನೀರು ಸರಬರಾಜು ಆಗುತ್ತಿರುವುದರಿಂದ ಗ್ರಾಮ ಪಂಚಾಯಿತಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಯ್ಯಪ್ಪ ಮಾಲದಾರಿ, ವಿಶ್ವ ಹಿಂದೂ ಪರಿಷತ್ತಿನ ಮಡಿಕೇರಿ ತಾಲೂಕು ಸಂಚಾಲಕ ರಾಧಾಕೃಷ್ಣ ರೈ ಎಚ್ಚರಿಸಿದ್ದಾರೆ.

ಈ ಸಂದರ್ಭ ಎಂ.ಕೆ.ತಂಗ, ಸೂರ್ಯ ಕುಮಾರ್, ಜಗದೀಶ್ ಬಿ.ಜಿ, ಶೇಖರ್, ರಕ್ಷಿತ್, ಸುರೇಶ್, ಜಗ ಮತ್ತಿತರರಿದ್ದರು. ---------------------------------

ದುಷ್ಕೃತ್ಯದ ಕುರಿತು ದೂರು ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.-ರೇಣುಕೇಶ್, ಗ್ರಾ.ಪಂ. ಅಧ್ಯಕ್ಷ................ಪರಿಸರ ಕಲುಷಿತಗೊಳದಂತೆ ಅಲ್ಲಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದೆ. ನದಿ ನೀರಿಗೆ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು.

-ಚೊಂದಕ್ಕಿ, ಪಿಡಿಒ.

.