ಸಾರಾಂಶ
೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂದೇ ಬೆಂಗಳೂರಿನ ತ್ಯಾಜ್ಯವನ್ನು ಕೆಜಿಎಫ್ ಪ್ರದೇಶದಲ್ಲಿ ತಂದು ಎಸೆಯಲು ಹುನ್ನಾರ ನಡೆಸಿದ್ದರು. ಅಂದು ಕರವೇ ಘಟಕ ಸೇರಿದಂತೆ ಇತರೇ ಸಂಘ ಸಂಸ್ಥೆಗಳು ಹೋರಾಟ ಮಾಡಿ ಸೆರೆ ಮನೆ ವಾಸ ಸಹ ಅನುಭವಿಸಿದ್ದರು
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯವನ್ನು ಕೆಜಿಎಫ್ ಸುತ್ತಮುತ್ತ ಡಂಪ್ ಮಾಡಿದರೆ ಸುಮ್ಮನಿರುವುದಿಲ್ಲ ಯಾವುದೇ ತ್ಯಾಗಕ್ಕೂ ಸಿದ್ದ ದೇಶಕ್ಕೆ ಚಿನ್ನ ನೀಡಿದ ನಗರಕ್ಕೆ ಸರ್ಕಾರ ಕಸ ಭಾಗ್ಯ ನೀಡಲು ಮುಂದಾಗಿರುವುದನ್ನು ಕರವೇ ನಗರ ಘಟಕದ ಅಧ್ಯಕ್ಷ ಚಲಪತಿ ಖಂಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂದೇ ಬೆಂಗಳೂರಿನ ತ್ಯಾಜ್ಯವನ್ನು ಕೆಜಿಎಫ್ ಪ್ರದೇಶದಲ್ಲಿ ತಂದು ಎಸೆಯಲು ಹುನ್ನಾರ ನಡೆಸಿದ್ದರು. ಅಂದು ಕರವೇ ಘಟಕ ಸೇರಿದಂತೆ ಇತರೇ ಸಂಘ ಸಂಸ್ಥೆಗಳು ಹೋರಾಟ ಮಾಡಿ ಸೆರೆ ಮನೆ ವಾಸ ಸಹ ಅನುಭವಿಸಿದ್ದರು ಎಂದು ತಿಳಿಸಿದರು.ಡೀಸಿ ಜಾಗ ನೀಡಬಾರದು
ಹತ್ತು ವರ್ಷಗಳ ಬಳಿಕ ಈಗ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ಮತ್ತೆ ಅದೇ ತಪ್ಪನ್ನು ಮಾಡಲು ಹೊರಟಿದ್ದಾರೆ. ಕೆಜಿಎಫ್ ನಗರಕ್ಕೆ ವಿಶ್ವದಲ್ಲೆ ಒಂದು ಉತ್ತಮ ಹೆಸರುಇದೆ. ಇಂತಹ ಸ್ಥಳದಲ್ಲಿ ಬೆಂಗಳೂರಿನ ತ್ಯಾಜ್ಯ ತಂದು ಎಸೆದರೆ ಇಲ್ಲಿನ ಜನರ ಸ್ಥಿತ ಏನಾಗಬಹುದು ಎಂಬುದನ್ನು ಸರ್ಕಾರ ಯೋಚಿಸಬೇಕು. ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಅಕ್ರಂಪಾಷ ಇತ್ತೀಚಿಗೆ ಕೆಜಿಎಫ್‌ಗೆ ಭೇಟಿ ನೀಡಿ ಬಿಜಿಎಂಎಲ್‌ನ ೩೦೦ಎಕರೆ ಪ್ರದೇಶವನ್ನು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಯತ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕವನ್ನು ಕೆಜಿಎಫ್‌ನಲ್ಲಿ ತೆರೆಯಲು ಜಾಗ ನೀಡಬಾರದು.ಜಾಗ ನೀಡಿದರೆ ಹೋರಾಟ
ಜಿಲ್ಲೆಯ ಜನರು ಕೃಷಿಯನ್ನು ನಂಬಿ ಜೀವನ ನಡೆಸಲಾಗುತ್ತಿದೆ, ನೂರಾರು ರೈತರು ಕೃಷಿಯನ್ನು ಅವಲಂಬಿತರಾಗಿದ್ದಾರೆ, ಈಗ ಬಿಬಿಎಂಪಿ ಕಸವನ್ನು ಇಲ್ಲಿ ತಂದು ಎಸೆದರೆ ಕೃಷಿಗೆ ಮಾರಕವಾಗಲಿದೆ. ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಕೆಜಿಎಫ್‌ನಲ್ಲಿ ಕೈಗಾರಿಕಾ ಹಬ್ ಮಾಡಲಾಗುವುದು ಎಂದು ಹೇಳಿ ಈಗ ಸದ್ದಿಲ್ಲದೆ ಕಸದ ಹಬ್ ಮಾಡಲು ಹೊರಟಿದೆ. ಇದರ ವಿರುದ್ಧ ಕರವೇ ಹೋರಾಟ ನಡೆಸಲಿದೆ ಎಂದರು.