ಸಾರಾಂಶ
ಕ್ರೀಡಾಪಟುಗಳು ಕ್ರೀಡೆಗೆ ನೀಡಿದಷ್ಟೇ ಆದ್ಯತೆಯನ್ನು ತಮ್ಮ ವರ್ತನಗಳಿಗೂ ನೀಡಬೇಕು. ವರ್ತನೆಗಳು ಜಿಲ್ಲೆಯ ಗೌರವವನ್ನು ಕಾಪಾಡುತ್ತವೆ. ಈ ಜವಾಬ್ದಾರಿ ಕ್ರೀಡಾಪಟುಗಳ ಮೇಲಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಜವಬ್ದಾರಿಯುತವಾಗಿ ನಿಭಾಯಿಸುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗಕ್ರೀಡಾಪಟುಗಳು ಕ್ರೀಡೆಗೆ ನೀಡಿದಷ್ಟೇ ಆದ್ಯತೆಯನ್ನು ತಮ್ಮ ವರ್ತನಗಳಿಗೂ ನೀಡಬೇಕು. ವರ್ತನೆಗಳು ಜಿಲ್ಲೆಯ ಗೌರವವನ್ನು ಕಾಪಾಡುತ್ತವೆ. ಈ ಜವಾಬ್ದಾರಿ ಕ್ರೀಡಾಪಟುಗಳ ಮೇಲಿದ್ದು, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಜವಬ್ದಾರಿಯುತವಾಗಿ ನಿಭಾಯಿಸುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಜಯಗಳಿಸಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದಾಗ ನಿಮ್ಮ ಹೆಸರಿನ ಜತೆಗೆ ಚಿತ್ರದುರ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದೀರಿ ಎಂದು ಗುರುತಿಸಲಾಗುತ್ತದೆ. ಹಾಗಾಗಿ ವರ್ತನೆಗಳು ಸರಿಯಾಗಿರಬೇಕೆಂದರು.ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಉತ್ತಮವಾಗಿ ತಮ್ಮ ಸಾಮರ್ಥ್ಯ ಹೊರಹಾಕುವ ಮೂಲಕ ಮುಂದಿನ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಗೆದ್ದಾಗ ಗೆಲುವನ್ನು ಯಾವ ರೀತಿ ಸ್ವೀಕರಿಸುವಿರೋ, ಸೋತಾಗಲೂ ಕೂಡ ಅದೇ ಮನಸ್ಥಿತಿಯಲ್ಲಿ ಸ್ವೀಕರಿಸಬೇಕು. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಿ ಹೆಚ್ಚಿನ ಪದಕಗಳನ್ನು ತರಬೇಕೆಂದು ವಿನಂತಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಾಲಿಬಾಲ್, ಫುಟ್ಬಾಲ್, ಖೋಖೋ, ಕಬಡ್ಡಿ, ಬಾಸ್ಕೆಟ್ಬಾಲ್, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ಬ್ಯಾಂಡ್ಮಿಂಟನ್, ಯೋಗ ಸೇರಿದಂತೆ ವಿವಿಧ ಅಥ್ಲೆಟಿಕ್ಸ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸಚೇತಾ ಎಂ. ನೆಲವಿಗಿ, ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಜಯ್, ಸೇರಿದಂತೆ ಜಿಲ್ಲೆಯ 6 ತಾಲೂಕಿನ ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿ ವಿಜೇತರಾದ ಮಹಿಳಾ, ಪುರುಷ ಮತ್ತು ಹಿರಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.