ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ ನೀರಿನ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದರ ನಿಗದಿ ಪಡಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಗುರುವಾರ ಆದೇಶಿಸಿದ್ದಾರೆ.
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲೀಕರು ಸಾರ್ವಜನಿಕರಿಂದ ದುಬಾರಿ ದರ ವಸೂಲಿ ಮಾಡುತ್ತಿದ್ದಾರೆ.
ಅಡ್ಡಾದಿಡ್ಡಿ ದರ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ದರ ನಿಗದಿ ಪಡಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಬೆಂಗಳೂರು ನಗರ ಜಿಲ್ಲೆಯ ನೀರು ಸರಬರಾಜಿಗೆ ತಾತ್ಕಾಲಿಕವಾಗಿ ನಾಲ್ಕು ತಿಂಗಳ ಅವಧಿಗೆ 200 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಲು ಹಾಗೂ ದರ ನಿಗದಿಪಡಿಸಲು ಕೋರಲಾಗಿತ್ತು.
ಅದರಂತೆ ಟ್ಯಾಂಕರ್‌ಗಳಿಗೆ ದರ ನಿಗದಿಪಡಿಸಲು ರಚಿಸಿದ್ದ ತಾಂತ್ರಿಕ ಸಮಿತಿ ಶಿಫಾರಿಸಿನ ಮೇರೆಗೆ ದರ ನಿಗದಿಪಡಿಸಲಾಗಿದೆ. 6ರಿಂದ 12 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‌ವರೆಗೆ ಸರಬರಾಜು ವೆಚ್ಚ, ಜಿಎಸ್‌ಟಿ ಸೇರಿಸಿ ದರ ನಿಗದಿ ಪಡಿಸಲಾಗಿದೆ.
6 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗೆ ಪ್ರತಿ ದಿನದ ಬಾಡಿಗೆ ₹5,200, 12 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗೆ ಪ್ರತಿ ದಿನದ ಬಾಡಿಗೆ ₹7,100 ದರ ನಿಗದಿ ಪಡಿಸಲಾಗಿದೆ.
6 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕರ್‌ಗೆ ₹600-750, 8 ಸಾವಿರ ಲೀಟರ್ ನೀರಿನ ಟ್ಯಾಂಕರ್‌ಗೆ ₹700-850 ನಿಗದಿಪಡಿಸಲಾಗಿದೆ. 12 ಸಾವಿರ ಲೀಟರ್ ನೀರಿನ ಟ್ಯಾಂಕರ್‌ಗೆ ₹1,000-1,200 ದರ ನಿಗದಿಪಡಿಸಲಾಗಿದೆ. ಕಿಲೋ ಮೀಟರ್‌ಗಳ ಅಂತರದ ಮೇಲೆ ದರದಲ್ಲಿ ವ್ಯತ್ಯಾಸವಾಗಲಿದೆ.
ಟ್ಯಾಂಕರ್ ನೀರಿನ ದರ ಪಟ್ಟಿ6 ಸಾವಿರ ಲೀಟರ್₹600-₹7508 ಸಾವಿರ ಲೀಟರ್₹700-₹85012 ಸಾವಿರ ಲೀಟರ್₹1,000-₹1,200ದಿನದ ಬಾಡಿಗೆ ದರ ಪಟ್ಟಿ6 ಸಾವಿರ ಲೀಟರ್₹5,20012 ಸಾವಿರ ಲೀಟರ್ ₹7,100