ಸಾರಾಂಶ
ಕೃಷ್ಣಾ ಜಲಾಯನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುತ್ತಿರುವುದರಿಂದ ತಾಲೂಕಿನ ಪಂಚ ನದಿಗಳ ನೀರಿನ ಮಟ್ಟದಲ್ಲಿ ಯತಾಸ್ಥಿತಿ ಮುಂದುವರೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕೃಷ್ಣಾ ಜಲಾಯನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುತ್ತಿರುವುದರಿಂದ ತಾಲೂಕಿನ ಪಂಚ ನದಿಗಳ ನೀರಿನ ಮಟ್ಟದಲ್ಲಿ ಯತಾಸ್ಥಿತಿ ಮುಂದುವರೆದಿದೆ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 2.45 ಲಕ್ಷ ಕ್ಯುಸೆಕ್ ನೀರು ಹರಿದು ಬಂದರೆ ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ 45 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಒಟ್ಟಾರೆ 2.90 ಲಕ್ಷ ಕ್ಯುಸೆಕ್ ನೀರು ಹರಿದು ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ. ಅಲ್ಲಿಂದ 3.27 ಲಕ್ಷ ಕ್ಯುಸೆಕ್ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡಲಾಗುತ್ತಿದೆ.
ಮಹಾ ನೀರು ಬಿಡುಗಡೆ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 42100 ಕ್ಯುಸೆಕ್, ಧೂಮ್ ಡ್ಯಾಂದಿಂದ 6117 ಕ್ಯುಸೆಕ್, ಕಣೇರ ಜಲಾಶಯದಿಂದ 4824 ಕ್ಯುಸೆಕ್, ವಾರಣಾ ಜಲಾಶಯದಿಂದ 11585 ಕ್ಯುಸೆಕ್, ಕಾಳಮ್ಮವಾಡಿ ಜಲಾಶಯದಿಂದ 9100 ಕ್ಯುಸೆಕ್ , ರಾಧಾನಗರಿ ಜಲಾಶಯದಿಂದ 5784 ಕ್ಯುಸೆಕ್ ನೀರು ಕೃಷ್ಣಾ ಮತ್ತು ದೂಧಗಂಗಾ ನದಿಗೆ ಬರುತ್ತಿದೆ.