ಅಜ್ರವಳ್ಳಿ ರಸ್ತೆ ಮಧ್ಯೆಯಲ್ಲೇ ಜಲ ಉದ್ಭವ: ಕೆಸರು ಗದ್ದೆಯಾದ ದಾರಿ

| Published : Aug 05 2024, 12:34 AM IST

ಅಜ್ರವಳ್ಳಿ ರಸ್ತೆ ಮಧ್ಯೆಯಲ್ಲೇ ಜಲ ಉದ್ಭವ: ಕೆಸರು ಗದ್ದೆಯಾದ ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಸೀತೂರು ಗ್ರಾಮದ ಅಜ್ರವಳ್ಳಿ ರಸ್ತೆಯಲ್ಲಿ ಮದ್ಯದಲ್ಲೇ ಜಲ ಎದ್ದು ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗಿದ್ದು ಅಜ್ರವಳ್ಳಿಯ 12 ಮನೆಗಳ ವಾಹನವು ಕಳೆದ 15 ದಿನದಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದ್ದಾರೆ.

12 ಮನೆಯವರ ವಾಹನ ಮನೆಗೆ ಹೋಗುತ್ತಿಲ್ಲ: ಗ್ರಾಮಸ್ಥರ ದೂರು

ಕನ್ನಡಪ್ರಭ ವಾರ್ತೆ ,ನರಸಿಂಹರಾಜಪುರ

ಸೀತೂರು ಗ್ರಾಮದ ಅಜ್ರವಳ್ಳಿ ರಸ್ತೆಯಲ್ಲಿ ಮದ್ಯದಲ್ಲೇ ಜಲ ಎದ್ದು ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗಿದ್ದು ಅಜ್ರವಳ್ಳಿಯ 12 ಮನೆಗಳ ವಾಹನವು ಕಳೆದ 15 ದಿನದಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದ್ದಾರೆ.

ಸೀತೂರು ಗ್ರಾಮದ ಅಜ್ರವಳ್ಳಿ, ಮಾವಿನ ಹಿತ್ತಲು ಹೋಗಬೇಕಾದರೆ ನಾಗರಮಕ್ಕಿ-ಯಡಗೆರೆ ರಸ್ತೆಯಿಂದ 2 ಕಿ.ಮೀ.ದೂರ ಸಾಗಬೇಕು.ಈ ಭಾಗದಲ್ಲಿ 12 ಮನೆಗಳಿವೆ. ಬಾರೀ ಮಳೆಯಾದ ವರ್ಷದಲ್ಲಿ ಅಜ್ರವಳ್ಳಿ ಸಮೀಪದ ರಸ್ತೆ ಮದ್ಯೆ ಜಲ ಏಳುತ್ತದೆ. ಈ ವರ್ಷ ಭಾರೀ ಮಳೆ ಸುರಿದಿದ್ದರಿಂದ ರಸ್ತೆಯಲ್ಲಿ ಜಲ ಎದ್ದಿದ್ದು ಅಂದಾಜು 600 ಮೀ, ಉದ್ದದ ರಸ್ತೆ ತುಂಬಾ ಕೆಸರು ಮಯವಾಗಿದೆ. ಯಾವುದೇ ವಾಹನ ಈ ಕೆಸರು ದಾಟಿ ಹೋಗಲು ಸಾದ್ಯವಾಗುತ್ತಿಲ್ಲ. ಕಳೆದ 15 ದಿನದಿಂದ ಈ 12 ಮನೆ ಯವರು ತಮ್ಮ ವಾಹನಗಳನ್ನು ಅರ್ಧ ಕಿ.ಮೀ.ದೂರದಲ್ಲಿ ತಾತ್ಕಾಲಿಕ ಶೆಡ್ ಮಾಡಿ ಅಲ್ಲಿ ವಾಹನ ನಿಲ್ಲಿಸಿ ಮನೆಗೆ ನಡೆದು ಕೊಂಡು ಹೋಗುತ್ತಿದ್ದಾರೆ. ಈ ಕೆಸರಿನಲ್ಲಿ ವಾಹನ ಹೋದರೆ ಅಲ್ಲೇ ಸಿಕ್ಕಿ ಹಾಕಿಕೊಳ್ಳುತ್ತದೆ.

ಈ ಜಾಗದಲ್ಲಿ ಪದೇ ಪದೆ ಜಲ ಏಳುವುದರಿಂದ ಕನಿಷ್ಠ ಜಲ ಏಳುವ ಜಾಗದ 600 ಮೀಟರ್‌ ಉದ್ದದ ರಸ್ತೆಗೆ ಕಾಂಕ್ರಿಟ್ ಹಾಕಬೇಕು ಎಂಬುದು ಈ ಭಾಗದ 12 ಮನೆಗಳವರ ಬೇಡಿಕೆ. ಸಂಬಂಧಪಟ್ಟವರು ಗಮನ ಹರಿಸಿ ಜಲ ಏಳುತ್ತಿರುವ ರಸ್ತೆಗೆ ಕಾಂಕ್ರಿಟ್ ಹಾಕಿಸಿ 12 ಮನೆಯವರಿಗೆ ಅನುಕೂಲ ಮಾಡಬೇಕು ಎಂದು ಆ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.